Gadag: ಸಂಗೀತಕ್ಕಿದೆ ದ್ವೇಷಾಸೂಯೆ ಮರೆಸೋ ಶಕ್ತಿ
ಮಕ್ಕಳಿಗೆ ಸಂಗೀತ ಕಲೆ ರೂಢಿಸುವ ಕಾರ್ಯವಾಗಬೇಕು.
Team Udayavani, Aug 17, 2023, 6:35 PM IST
ಲಕ್ಷ್ಮೇಶ್ವರ: ಸಂಗೀತಕ್ಕೆ ಎಲ್ಲ ಮನೋರೋಗಗಳನ್ನು ಗುಣಪಡಿಸುವ, ದ್ವೇಷ, ಅಸೂಯೆ, ನೋವು ಮರೆಸುವ ಶಕ್ತಿಯಿದೆ. ಯಾವುದೇ ಜಾತಿ-ಕುಲದ ಹಂಗಿಲ್ಲದ ಸಂಗೀತ ಕ್ಷೇತ್ರವನ್ನು ಮತ್ತು ಸಂಗೀತಾಸಕ್ತ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಪೋಷಿಸುವ ಮನೋಗುಣ ನಮ್ಮೆಲ್ಲರದ್ದಾಗಬೇಕು. ಸರಕಾರದ ಪ್ರೋತ್ಸಾಹ ಇನ್ನಷ್ಟು ಅವಶ್ಯಕವಾಗಿದೆ ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ಹೇಳಿದರು.
77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಂಗಳವಾರ ಸಂಜೆ ಪಟ್ಟಣದ ಚನ್ನಮ್ಮನ ವನದಲ್ಲಿ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಸ್ಮರಣಾರ್ಥ ಶಾರದಾ ಸ್ವರಾಂಜಲಿ ಸಂಗೀತ ಪಾಠಶಾಲೆ, ಸ್ಟಾರ್ ಆಫ್ ಲಕ್ಷ್ಮೇಶ್ವರ ಹಾಗೂ ವಿವಿಧ ಸಂಘಟನೆಗಳ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಸರಿಗಮಪ ರಾಗ ರಂಜನಿ ಗ್ರ್ಯಾಂಡ್ ಫಿನಾಲೆ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಂಗೀತ ದೇವರನ್ನು ಕಾಣಲು ಇರುವ ಏಕೈಕ ಸುಲಭ ಮಾರ್ಗವೆಂದರೆ ತಪ್ಪಾಗಲಾರದು. ಸಂಗೀತ ಮತ್ತು ನಾಟಕ ಕ್ಷೇತ್ರಕ್ಕೆ ಲಕ್ಷ್ಮೇಶ್ವರದ ಕೊಡುಗೆ ಅಪಾರವಾಗಿದೆ. ಸಂಗೀತ ಸೇವೆಗಾಗಿಯೇ ಜೀವನ ಮುಡಿಪಾಗಿಟ್ಟ ಕಲಾವಿದರು ಮತ್ತು ಪೋಷಕರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಎಲೆ ಮರೆ ಕಾಯಿಯಂತಿರುವ ಗ್ರಾಮೀಣ ಭಾಗದ ಪುಟಾಣಿ ಪತ್ರಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಶಾಸಕ ಡಾ| ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶಟ್ಟರ ಮಾತನಾಡಿ, ಸಂಗೀತ ದೇವರ ಕೊಡುಗೆಯಾಗಿದೆ. ಸಂಗೀತಕ್ಕೆ ಎಲ್ಲವನ್ನೂ ಗೆಲ್ಲಬಲ್ಲ ಶಕ್ತಿಯಿದೆ. ಆದರೆ, ಇಂದು ಟಿ.ವಿ., ಕಂಪ್ಯೂಟರ್, ಮೊಬೈಲ್ ಹಾವಳಿಯಿಂದ ಸಂಗೀತ ಕ್ಷೇತ್ರ ಕೂಡಾ ಸೊರಗಿದಂತೆ ಕಂಡು ಬರುತ್ತಿರುವುದು ನೋವಿನ ಸಂಗತಿ ಎಂದರು.
ಮಕ್ಕಳಿಗೆ ಸಂಗೀತ ಕಲೆ ರೂಢಿಸುವ ಕಾರ್ಯವಾಗಬೇಕು. ಗ್ರಾಮೀಣ ಭಾಗದ ಸಂಗೀತ ಕಲಾವಿದರ ಬದುಕು ದುರ್ಬರವಾಗುತ್ತಿರುವುದು ದುಃಖದ ಸಂಗತಿ. ಈ ನಿಟ್ಟಿನಲ್ಲಿ ನಮ್ಮ ಸಂಸ್ಕೃತಿ-ಪರಂಪರೆ ಉಳಿಸಿ-ಬೆಳೆಸುವ ಸಂಪ್ರದಾಯ ನೆಲೆನಿಲ್ಲಬೇಕಾಗಿದೆ. ಸಂಗೀತ ಸೇವೆ ಮಾಡುವ ಕಲಾವಿದರು, ಸಂಗೀತ ಪಾಠಶಾಲೆ, ಸಂಘಟನೆ, ವೇದಿಕೆಗಳನ್ನು ಪ್ರೋತ್ಸಾಹಿಸುವ
ಕೆಲಸವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪಟ್ಟಣದ ಮಾಜಿ ಸೈನಿಕರು, ಹಿರಿಯ ರೈತ ಚೇತನರನ್ನು ಸನ್ಮಾನಿಸಲಾಯಿತು. ವೇದಿಕೆ
ಮೇಲೆ ಸಂಗೀತ ಗುರು ಲಕ್ಷ್ಮಣ ತಳವಾರ, ಸರೋಜಕ್ಕ ಬನ್ನೂರ, ಚಂಬಣ್ಣ ಬಾಳಿಕಾಯಿ, ನಿಂಗಪ್ಪ ಬನ್ನಿ, ಸುಲೇಮಾನಸಾಬ ಕಣಿಕೆ, ಜಯಕ್ಕ ಕಳ್ಳಿ, ಎಂ.ಆರ್. ಪಾಟೀಲ, ಮಹೇಶ ಹೊಗೆಸೊಪ್ಪಿನ, ಬಸವರಾಜ ಬಾಳೇಶ್ವರಮಠ, ಭೀಮಣ್ಣ ಯಂಗಾಡಿ, ಪರಶುರಾಮ ಮುಳ್ಳೊಳ್ಳಿ, ಗಾಯತ್ರಿ ಕುಲಕರ್ಣಿ, ಶಂಕರ ಬ್ಯಾಡಗಿ, ಮಹೇಶ ಹೊಗೆಸೊಪ್ಪಿನ ಸೇರಿ ಅನೇಕರಿದ್ದರು.
ಸಂಗೀತ ಕಾರ್ಯಕ್ರಮವನ್ನು ಸಂಘಟಕ ಸೈಯ್ಯದ್ ಮೆಹಬೂಬ್‌ಹುಸೇನ್, ಶೈಲಾ ಆದಿ, ರೇಖಾ ವಡಕಣ್ಣವರ, ಸ್ನೇಹಾ ಹೊಟ್ಟಿ, ಪಾರ್ವತಿ ಕಳ್ಳಿಮಠ ನಿರ್ವಹಿಸಿದರು. ಸರಿಗಮಪ ಗ್ರ್ಯಾಂಡ್ ಫಿನಾಲೆಯಲ್ಲಿ ಲಕ್ಷ್ಮೇಶ್ವರದ ಕು. ಪಂಚಮಿ ಅಂಬಿಗೇರ (ಪ್ರಥಮ), ಶ್ರೀಲಕ್ಷ್ಮೀ ಪಾಟೀಲ(ದ್ವಿತೀಯ) ಮಹೇಶ ಹೂಗಾರ (ತೃತೀಯ) ಸ್ಥಾನದೊಂದಿಗೆ ನಗದು, ಪ್ರಶಸ್ತಿ ಪತ್ರ ಪಡೆದರು.
ಸಂಗೀತ ದೇವರನ್ನು ಕಾಣಲು ಇರುವ ಏಕೈಕ ಸುಲಭ ಮಾರ್ಗ. ಸಂಗೀತ ಮತ್ತು ನಾಟಕ ಕ್ಷೇತ್ರಕ್ಕೆ ಲಕ್ಷ್ಮೇಶ್ವರದ ಕೊಡುಗೆ
ಅಪಾರವಾಗಿದೆ. ಸಂಗೀತ ಸೇವೆಗಾಗಿಯೇ ಜೀವನ ಮುಡಿಪಾಗಿಟ್ಟ ಕಲಾವಿದರು ಮತ್ತು ಪೋಷಕರನ್ನು ಪ್ರೋತ್ಸಾಹಿಸುವ
ಕೆಲಸವಾಗಬೇಕಿದೆ.
*ಶ್ರೀ ಕಲ್ಲಯ್ಯಜ್ಜನವರು, ಗದುಗಿನ
ವೀರೇಶ್ವರ ಪುಣ್ಯಾಶ್ರವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.