Gadag: ಸಮಯ ವ್ಯರ್ಥ ಮಾಡದೇ ಚೆನ್ನಾಗಿ ಓದಿ: ಹೊನ್ನಾಳಿ
ನಿಮ್ಮ ಆತ್ಮ ಬಲ ಹೆಚ್ಚಿಸಿಕೊಳ್ಳಿ. ಯಶಸ್ಸು ನಿಮ್ಮೊಟ್ಟಿಗೆ ಬರುತ್ತದೆ
Team Udayavani, Nov 8, 2023, 4:36 PM IST
ಗದಗ: ವಿದ್ಯಾರ್ಥಿಗಳು ಅನವಶ್ಯಕವಾಗಿ ಸಮಯ ವ್ಯರ್ಥ ಮಾಡದೆ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹೆತ್ತವರಿಗೆ ಮತ್ತು ಓದಿದ ಸಂಸ್ಥೆಗೆ ಕೀರ್ತಿ ತರಬೇಕೆಂದು ರಾಣಿಬೆನ್ನೂರಿನ ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ| ಶಿವಕುಮಾರ ಹೊನ್ನಾಳಿ ಹೇಳಿದರು.
ನಗರದ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಸೈನ್ಸ್ ಫೋರಮ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಷ್ಟಪಟ್ಟು ಓದದೇ, ಇಷ್ಟಪಟ್ಟು ಓದಿ ಪಡೆದ ಶಿಕ್ಷಣವನ್ನು ಜ್ಞಾನವನ್ನಾಗಿಯೂ, ಜ್ಞಾನವನ್ನು
ಕೌಶಲ್ಯವನ್ನಾಗಿಯೂ ಪರಿವರ್ತಿಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಪದವಿ ಮುಗಿದ ಮೇಲೆ ನಿಮಗೆ ಬರುವ ಮೊದಲ ಸಂಬಳದಲ್ಲಿ ಒಂದು ಒಳ್ಳೆಯ ಪುಸ್ತಕ ತೆಗೆದುಕೊಳ್ಳುವುದರ ಜೊತೆಗೆ ನಿಮ್ಮ ತಾಯಿಗೆ ಒಂದು ಉತ್ತಮ ಗಿಫ್ಟ್ ಕೊಡಿ. ಅದರೊಂದಿಗೆ ನಿಮ್ಮ ಆತ್ಮ ಬಲ ಹೆಚ್ಚಿಸಿಕೊಳ್ಳಿ. ಯಶಸ್ಸು ನಿಮ್ಮೊಟ್ಟಿಗೆ ಬರುತ್ತದೆ. ಒಂದು ಉತ್ತಮ ಪುಸ್ತಕ ಒಬ್ಬ ಗುರುವಿಗೆ ಸಮಾನ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶಪಾಲ ಡಾ| ಎಂ.ಎಂ. ಆವಟಿ, ಜೀವನದಲ್ಲಿ ಯಶಸ್ಸು ಸಾಧಿಸಲು ವಿದ್ಯಾರ್ಥಿಗಳು ಶ್ರಮ ಪಡಬೇಕು. ಶ್ರಮಕ್ಕೆ ಪ್ರತಿಫಲ ದೊರೆಯುತ್ತದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಕೌಶಲ್ಯ ಮತ್ತು ಉತ್ತಮ ಬುದ್ಧಿಮತ್ತೆ ಹೊಂದಬೇಕಾಗಿದೆ ಎಂದು ಹೇಳಿದರು.
ವಿಜ್ಞಾನ ವಿಭಾಗದ ಮುಖ್ಯಸ್ಥ ಸುನೀಲ ಪಾಟೀಲ, ಸೈನ್ಸ್ ಫೋರಮ್ ಸಂಚಾಲಕ ಆನಂದ್ ಹಳ್ಳಿ, ಉಪ ಪ್ರಾಂಶುಪಾಲ ಡಾ| ಈರಣ್ಣ ಕೊರಚಗಾಂ, ಡಾ| ವಿ.ಟಿ ಮಾಗಳದ, ಡಾ| ಶಶಿಗೌಡ ಎಚ್, ಡಾ| ಮಧು ಕೆ.ಎನ್., ಡಾ| ಶ್ರೀಕಾಂತ ಕೆಂಗೂರಿ, ಕಾವ್ಯ ಅಬ್ಬಿಗೇರಿ, ವಿಜಯಲಕ್ಷ್ಮೀ, ಎ.ಎ. ಕುಂಬಾರ, ಶಂಭುಲಿಂಗಯ್ಯ ಹೀರೆಮಠ ಇದ್ದರು. ಸುಹಾಸ್ ಪಿಳ್ಳಿ ಸ್ವಾಗತಿಸಿ, ಮಾನ್ಯ ಶೆಟ್ಟಿ ನಿರೂಪಿಸಿ, ಸೌಮ್ಯ ಪಸೋಡಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.