Gadag: ಡಾ| ಪಂ| ಪುಟರಾಜ ಕವಿ ಗವಾಯಿ 13ನೇ ಪುಣ್ಯ ಸ್ಮರಣೋತ್ಮವ
ಗುರುಗಳ ಇಚ್ಚೆಯಂತೆ ಪೂಜ್ಯ ಕಲ್ಲಯ್ಯಜ್ಜನವರು ಆಶ್ರಮ ಮುನ್ನಡೆಸುತ್ತಿದ್ದಾರೆ
Team Udayavani, Sep 27, 2023, 11:10 AM IST
ಗದಗ: ಪಂ|ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯತಿಥಿಯನ್ನು ನಾಡಿನ ತುಂಬಾ ನೂರಾರು ಕಡೆ ಆಚರಿಸುತ್ತಿರುವುದಕ್ಕೆ ಅವರು ನಾಡಿಗೆ ಅರ್ಪಿಸಿದ ಅಮೂಲ್ಯ ಸೇವೆಯೇ ಕಾರಣವಾಗಿದೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಡಾ| ಗುರುಸಿದ್ಧ ರಾಜಯೋಗಿಂದ್ರ ಮಹಾಸ್ವಾಮೀಜಿ ಹೇಳಿದರು.
ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾನಯೋಗಿ ಡಾ| ಪಂ|ಪುಟ್ಟರಾಜ ಸೇವಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಡಾ| ಪಂ|ಪುಟ್ಟರಾಜ ಕವಿ ಗವಾಯಿಗಳವರ 13ನೇ ಪುಣ್ಯಸ್ಮರಣೋತ್ಸವ, ಶಿವಯೋಗಿ ಶ್ರೀ ಪುಟ್ಟರಾಜ ಪ್ರಶಸ್ತಿ ಪ್ರದಾನ, ಅಹೋರಾತ್ರಿ ಸಂಗೀತ ಸ್ವರನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಗುರುಗಳ ಆಶ್ರಮದಿಂದ ಸಾಕಷ್ಟು ಶಿಷ್ಯರು ಸಂಸ್ಕಾರ, ಶಿಕ್ಷಣ ಪಡೆದು ಖ್ಯಾತನಾಮರಾಗಿದ್ದಾರೆ. ಗುರುಗಳ ಇಚ್ಚೆಯಂತೆ ಪೂಜ್ಯ ಕಲ್ಲಯ್ಯಜ್ಜನವರು ಆಶ್ರಮ ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.
ಅಥಣಿ ಮೋಟಗಿಮಠದ ಶ್ರೀ ಪ್ರಭು ಚೆನ್ನಬಸವ ಸ್ವಾಮೀಜಿ ಮಾತನಾಡಿ, ಪಂ|ಪುಟ್ಟರಾಜ ಕವಿ ಗವಾಯಿಗಳವರು ಮಕ್ಕಳಲ್ಲಿ ದೈವತ್ವ ಕಂಡು ಅವರ ಬದುಕಿಗೆ ಕಲ್ಪತರು ಆಗಿದ್ದಾರೆ. ಆಕಾಶದಲ್ಲಿ ನಕ್ಷತ್ರಗಳು ಇರುವಂತೆ ಭೂಮಿಯ ಮೇಲೆ ಅನೇಕ ನಕ್ಷತ್ರಗಳಿವೆ.
ಅವುಗಳಲ್ಲಿ ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಒಬ್ಬರಾಗಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಿ. ಕುಮಾರದಾಸ, ಕಲಾಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜಣ್ಣ ಜೇವರ್ಗಿ, ಪ್ರವಚನ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೇ| ಶಿವಮೂರ್ತಿಯ ಶಾಸ್ತ್ರಿಗಳು ಹಿರೇಮಠ, ಸಮಾಜ ಸೇವೆಯಲ್ಲಿ ಸಾಧನೆ ಮಾಡಿದ ನಿಂಗಪ್ಪ ನರ್ಚಿ ಅವರಿಗೆ ಶಿವಯೋಗಿ ಶ್ರೀ ಪುಟ್ಟರಾಜ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಜುರ-ಅಟ್ನೂರ ದಾಸೋಹಮಠದ ಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಗಾನಯೋಗಿ ಡಾ|ಪಂ|ಪುಟ್ಟರಾಜ ಸೇವಾ ಸಮಿತಿ ಅಧ್ಯಕ್ಷ ಸಿದ್ಧೇಶ್ವರ ಶಾಸ್ತ್ರಿಗಳು ಕಲ್ಲೂರ, ಉಪಾಧ್ಯಕ್ಷ ಬಸವರಾಜ ಹೊನ್ನಿಗನೂರ, ಕಾರ್ಯದರ್ಶಿ ಬೆಟದಯ್ಯ ಶಾಸ್ತ್ರಿಗಳು ಹಿರೇಮ್ಯಾಗೇರಿ, ಎಸ್.ಎಚ್. ಶಿವನಗೌಡರ, ಉದ್ಯಮಿ ಕಿರಣ್ ಭೂಮಾ, ಆನಂದ ಗುಡಿಮನಿ, ಪಂಚಾಕ್ಷರಿ ಹಿಡಿಮಠ, ಮುದುಕಯ್ಯಸ್ವಾಮಿ ಹಿರೇಮಠ, ಸಿದ್ಧಲಿಂಗೇಶ ಮೂರಶಿಳ್ಳಿನ ಸೇರಿದಂತೆ ಅನೇಕರು ಇದ್ದರು.
ಅಂದಾನಪ್ಪ ವಿಭೂತಿ ಅವರ ರಚಿಸಿದ “ಬೆಟ್ಟವಾಗಿ ಬೆಳೆದ ಪುಟ್ಟರಾಜರು’ ಗ್ರಂಥ ಬಿಡುಗಡೆ ಮಾಡಲಾಯಿತು. ಹರಿಹರದ ಜಾಹ್ನವಿ ಕಾಟವೆ ಭರತನಾಟ್ಯ ಪ್ರದರ್ಶಿಸಿದರು. ವೆಂಕಟೇಶ ಆಲ್ಕೋಡ್ ಪ್ರಾರ್ಥಿಸಿದರು. ಸಿದ್ದೇಶ್ವರ ಶಾಸ್ತ್ರಿ ತೆಲ್ಲೂರ್ ಪ್ರಾಸ್ತಾವಿಕ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.