ಗದಗ: ರುದ್ರಭೂಮಿಗೆ ತೆರಳಲು ರಸ್ತೆಗಳದ್ದೇ ಸಮಸ್ಯೆ!

Team Udayavani, Jan 6, 2025, 2:12 PM IST

ಗದಗ: ರುದ್ರಭೂಮಿಗೆ ತೆರಳಲು ರಸ್ತೆಗಳದ್ದೇ ಸಮಸ್ಯೆ!

ಉದಯವಾಣಿ ಸಮಾಚಾರ
ಗದಗ: ಗ್ರಾಮಗಳಿಗೆ ಕುಡಿಯುವ ನೀರು, ವಿದ್ಯುತ್‌, ರಸ್ತೆ, ಚರಂಡಿ ಹಾಗೂ ಮೂಲಸೌಕರ್ಯಗಳಷ್ಟೇ ಪ್ರಮುಖವಾಗಿ ಸ್ಮಶಾನ ಭೂಮಿಯೂ ಅವಶ್ಯ. ಗದಗ ಜಿಲ್ಲೆಯ 7 ತಾಲೂಕುಗಳ 331 ಗ್ರಾಮಗಳಲ್ಲಿ ರುದ್ರಭೂಮಿಗಳಿವೆ. ಆದರೆ ಭೂಮಿ ಖರೀದಿ ಹಾಗೂ ಸ್ಮಶಾನಕ್ಕೆ ತೆರಳಬೇಕಾದ ರಸ್ತೆಯಲ್ಲಿನ ಅಡೆತಡೆಗಳ ಸಮಸ್ಯೆಯಿಂದ ಸಾರ್ವಜನಿಕರ ಪರದಾಟ ಮಾತ್ರ ಮುಂದುವರಿದಿದೆ.

ಗದಗ ಜಿಲ್ಲೆಯ 331 ಗ್ರಾಮಗಳ ಪೈಕಿ 213 ರುದ್ರಭೂಮಿಗಳು ಮೊದಲಿನಿಂದಲೂ ಇದ್ದು, 89 ರುದ್ರಭೂಮಿಗಳು ಸರಕಾರಿ, 29 ಖಾಸಗಿ ಜಮೀನುಗಳನ್ನು ಖರೀದಿ ಮಾಡಲಾಗಿದೆ. ಕೆಲವೆಡೆ ಜಿಲ್ಲಾಡಳಿತ ಸ್ಮಶಾನ ಭೂಮಿ ಖರೀದಿ ಪ್ರಕ್ರಿಯೆ ನಡೆಸಿದ್ದರೂ, ಕೆಲ ತಾಂತ್ರಿಕ ಸಮಸ್ಯೆಗಳಿಂದ ಜಿಲ್ಲೆಯಲ್ಲಿ 6ಕ್ಕೂ ಹೆಚ್ಚು ರುದ್ರಭೂಮಿಗಳ ಖರೀದಿ ಬಾಕಿ ಉಳಿದಿದೆ.

ಕಳೆದ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ಬಾಕಿ ಉಳಿದಿದ್ದ 98 ಗ್ರಾಮಗಳಿಗೆ ಶವ ಸಂಸ್ಕಾರಕ್ಕಾಗಿ ಸ್ಮಶಾನ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಭೂಮಿ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದ್ದರಿಂದ ಕೆಲ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಸಮಸ್ಯೆ ಪರಿಹಾರವಾಗಿದೆ. ಅದರಲ್ಲಿ ಬೆರಳಣಿಕೆಯಷ್ಟು ಜನರು ಜಮೀನು ನೀಡಲು ಮುಂದೆ ಬಂದರೂ ಜಮೀನುಗಳಿಗೆ ಸಮರ್ಪಕ ಬೆಲೆ ಇಲ್ಲವೆಂಬ ಕಾರಣಕ್ಕೆ ಹಿಂದೆ ಸರಿದಿದ್ದರು. ಹೀಗಾಗಿ 6 ಗ್ರಾಮಗಳಲ್ಲಿ ರುದ್ರಭೂಮಿಗೆ ಬೇಕಾದ ಜಮೀನುಗಳ ಖರೀದಿ ಪ್ರಕ್ರಿಯೆ ಬಾಕಿ ಉಳಿದಿದೆ.

ಗದಗ ತಾಲೂಕಿನಲ್ಲಿರುವ 59 ಗ್ರಾಮಗಳ ಪೈಕಿ 59, ಮುಂಡರಗಿ ತಾಲೂಕಿನ 52 ಗ್ರಾಮಗಳ ಪೈಕಿ 52, ಶಿರಹಟ್ಟಿಯ 50 ಗ್ರಾಮಗಳ ಪೈಕಿ 50, ಲಕ್ಷ್ಮೇಶ್ವರದ 38 ಗ್ರಾಮಗಳ ಪೈಕಿ 38, ನರಗುಂದದ 35 ಗ್ರಾಮಗಳ ಪೈಕಿ 35, ರೋಣದ 59 ಗ್ರಾಮಗಳ ಪೈಕಿ 59, ಗಜೇಂದ್ರಗಡ ತಾಲೂಕಿನ 38 ಗ್ರಾಮಗಳ ಪೈಕಿ 38 ರುದ್ರಭೂಮಿಗಳಿವೆ.

ಇತ್ತೀಚೆಗೆ ಖರೀದಿಯಾದ ರುದ್ರಭೂಮಿಗಳು: ಗದಗ ತಾಲೂಕಿನ ಹಿರೇಹಂದಿಗೋಳ, ನಭಾಪುರ, ಹಂಗನಕಟ್ಟಿ, ಎಲಿಶಿರೂರು, ಕಬಲಾಯತಕಟ್ಟಿ, ಕಿರಟಗೇರಿ, ಲಿಂಗದಾಳ, ಬೆಳಹೊಡ, ದುಂದೂರು, ಸಂಭಾಪುರ ಹಾಗೂ ಹಾತಲಗೇರಿ ಗ್ರಾಮಗಳಲ್ಲಿದ್ದ ಸ್ಮಶಾನ ಭೂಮಿ ಸಮಸ್ಯೆ ಪರಿಹರಿಸಲಾಗಿದೆ. ರೋಣ, ಗಜೇಂದ್ರಗಡ ತಾಲೂಕಿನಲ್ಲಿ ನಾಗೇಂದ್ರಗಡ, ಹೊಳೆಹಡಗಲಿ, ಬೆಳಗೋಡ, ಮಾಡಲಗೇರಿ, ಬಾಸಲಾಪುರ, ಕುರಡಗಿ, ಅಮರಗಟ್ಟಿ ಗ್ರಾಮದಲ್ಲಿ ರುದ್ರಭೂಮಿ ಖರೀದಿಸಲಾಗಿದೆ.

ನರಗುಂದ ತಾಲೂಕಿನಲ್ಲಿ ಕಲ್ಲಾಪುರ, ಜಗಾಪುರ, ಖಾನಾಪುರ, ಮೂಗನೂರು, ಕಲಕೇರಿ, ಸಿದ್ದಾಪುರ, ಬೆನಕೊಪ್ಪ, ಅರಸಿನಗೋಡೆ, ಕುರುಗೋವಿನಕೊಪ್ಪ, ಲಕಮಾಪುರ, ಬೆಳ್ಳೇರಿ, ವಾಸನ, ಬೂದಿಹಾಳ ಮತ್ತು ಗಂಗಾಪುರ, ಲಕ್ಷ್ಮೇಶ್ವರ, ಶಿರಹಟ್ಟಿ ತಾಲೂಕು, ಮುಂಡರಗಿ ತಾಲೂಕಿನ ಬಸಾಪುರ, ಕೆಲೂರು, ಗಂಗಾಪುರ, ಕಕ್ಕೂರು, ನಾಗರಹಳ್ಳಿ, ಮಕ್ತಂಪುರ, ಶಿರನಹಳ್ಳಿ, ತಿಪ್ಪಾಪುರ, ಬಿದರಹಳ್ಳಿ, ವಿಠಲಾಪುರ, ಹಮ್ಮಗಿ, ಗುಮ್ಮಗೋಳ, ಸಿಂಗಟಾಲೂರು, ದಿಂಡೂರು ಗ್ರಾಮಗಳಲ್ಲಿ ಸ್ಮಶಾನಕ್ಕಾಗಿ ಕಳೆದ ವರ್ಷ ಜಮೀನು ಖರೀದಿಸಲಾಗಿದೆ.

ಖರೀದಿಗೆ ಬಾಕಿಯಿರುವ ಗ್ರಾಮಗಳು: ಗದಗ ತಾಲೂಕಿನ ಲಿಂಗಧಾಳ, ಸೀತಾಲಹರಿ, ರೋಣ ತಾಲೂಕಿನ ತಳ್ಳಿಹಾಳ, ಬೆಳವಣಿಕಿ, ಗುಳಗುಳಿ, ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಗುರುತಿಸಿದ್ದು, ಖರೀದಿ ಪ್ರಕ್ರಿಯೆ ಬಾಕಿ ಉಳಿದಿವೆ.

1.25 ಕೋಟಿ ರೂ.ವೆಚ್ಚದಲ್ಲಿ ರುದ್ರಭೂಮಿ ಖರೀದಿ:
ಕಳೆದೆರೆಡು ವರ್ಷಗಳಲ್ಲಿ 1.25 ಕೋಟಿ ರೂ. ವೆಚ್ಚದಲ್ಲಿ 10 ಗ್ರಾಮಗಳಲ್ಲಿ ರುದ್ರಭೂಮಿಗಳನ್ನು ಜಿಲ್ಲಾಡಳಿತ ಖರೀದಿ ಮಾಡಿದೆ. ಸರಕಾರದಿಂದ ಅನುದಾನ ಬಿಡುಗಡೆಯಾದ ಕೂಡಲೇ ಖರೀದಿಗೆ ಬಾಕಿಯಿರುವ ರುದ್ರಭೂಮಿಗಳನ್ನು ಖರೀದಿಸಲಾಗುವುದು ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಖಾಸಗಿ ಜಮೀನು ಅವಲಂಬನೆ
ಗದಗ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ರುದ್ರ ಭೂಮಿಗಳಿದ್ದರೂ, ಕೆಲ ಗ್ರಾಮಗಳಲ್ಲಿ ರುದ್ರ ಭೂಮಿಗಳಿಗೆ ತೆರಳಲು ಖಾಸಗಿ ಜಮೀನುಗಳನ್ನು ಅವಲಂಬಿಸಬೇಕಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಜಮೀನುಗಳ ಮಾಲೀಕರು ತಮ್ಮ ಜಮೀನಿನ ದಾರಿ ಬಿಟ್ಟುಕೊಡದ ಹಿನ್ನೆಲೆಯಲ್ಲಿ ರುದ್ರಭೂಮಿ ಸಮಸ್ಯೆ ತಲೆದೋರುತ್ತಿದೆ. ಈ ಹಿನ್ನೆಲೆಯಲ್ಲಿ ಅಂತಹ ಗ್ರಾಮಗಳನ್ನು ಕ್ರೋಢೀಕರಣ ಮಾಡಲಾ ಗುತ್ತಿದ್ದು, ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ.

ಗದಗ ಜಿಲ್ಲೆಯಲ್ಲಿ ಈಗಾಗಲೇ ಸ್ವಶಾನ ಭೂಮಿಗಳಿಲ್ಲದ ಗ್ರಾಮಗಳನ್ನು ಪಟ್ಟಿ ಮಾಡಿ ಖರೀದಿಸಲಾಗಿದೆ. ತಾಂತ್ರಿಕ ಕಾರಣಗಳಿಂದ ಕೆಲ ಗ್ರಾಮಗಳ ರುದ್ರಭೂಮಿ ಖರೀದಿ ಬಾಕಿ ಉಳಿದಿದ್ದು, ಕೂಡಲೇ ಸ್ಮಶಾನ ಭೂಮಿ ಖರೀದಿ ಪ್ರಕ್ರಿಯೆ ನಡೆಯಲಿದೆ. ಇನ್ನುಳಿದಂತೆ ಸ್ಮಶಾನ ಭೂಮಿಗೆ ತೆರಳಲು ಖಾಸಗಿ ವ್ಯಕ್ತಿಗಳು ದಾರಿಯಲ್ಲಿ ಅಡೆತಡೆ ಮಾಡುತ್ತಿದ್ದು, ಕೆಲವೆಡೆ ಸಮಸ್ಯೆ ತಲೆದೋರಿದೆ. ಅಂತಹ ಸಮಸ್ಯೆಗಳನ್ನು ತಹಶೀಲ್ದಾರ್‌ ಮೂಲಕ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ.
ಅನ್ನಪೂರ್ಣ ಮುದಕಮ್ಮನವರ, ಆರು ಅಪರ ಜಿಲ್ಲಾಧಿಕಾರಿ

*ಅರುಣಕುಮಾರ ಹಿರೇಮಠ

ಟಾಪ್ ನ್ಯೂಸ್

Bjp-Rijiju

Waqf Report: ಅಮಿತ್‌ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್‌ ರಿಜಿಜು ಮೂಲಕ ಸಲ್ಲಿಕೆ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Dakshina Kannada ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು

Dakshina Kannada ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು

Mangaluru: ಒನ್‌ ನೇಶನ್‌-ಒನ್‌ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್‌

Mangaluru: ಒನ್‌ ನೇಶನ್‌-ಒನ್‌ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…

ಗದಗ: ಸರ್ಕಾರಿ ಶಾಲೆ ಗೋಡೆಗೆ ಚಂದದ ಚಿತ್ತಾರ – ಬಂದಿದೆ ಜಿಲ್ಲಾಮಟ್ಟದ ಪ್ರಶಸ್ತಿ…

ಗದಗ: ಸರ್ಕಾರಿ ಶಾಲೆ ಗೋಡೆಗೆ ಚಂದದ ಚಿತ್ತಾರ – ಬಂದಿದೆ ಜಿಲ್ಲಾಮಟ್ಟದ ಪ್ರಶಸ್ತಿ…

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

ಗದಗ: ಮಾವು ಬಂಪರ್‌ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ

ಗದಗ: ಮಾವು ಬಂಪರ್‌ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bjp-Rijiju

Waqf Report: ಅಮಿತ್‌ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್‌ ರಿಜಿಜು ಮೂಲಕ ಸಲ್ಲಿಕೆ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

ಮಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Train; ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.