ಮೀಸಲಾತಿಯಿಂದ ಕೆಲವರಿಗೆ ಬರಸಿಡಿಲು
ಜಿಲ್ಲೆಯ 24 ಜಿಪಂ ಕ್ಷೇತ್ರಗಳ ಪೈಕಿ ಬಹುತೇಕ ಕಡೆ ಮೀಸಲಾತಿ ಬದಲುಪುನರಾಯ್ಕೆ ಆಸೆಗೆ ಎಳ್ಳು ನೀರು
Team Udayavani, Jul 4, 2021, 9:07 PM IST
ವೀರೇಂದ್ರ ನಾಗಲದಿನ್ನಿ
ಗದಗ: ಮುಂಬರುವ ಜಿಪಂ ಚುನಾವಣೆಗೆ ಸಿದ್ಧತೆ ನಡೆಸಿರುವ ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿರುವ ಜಿಪಂ ಕ್ಷೇತ್ರಗಳ ಮೀಸಲಾತಿಯಿಂದ ಜಿಪಂ ಮಾಜಿ ಸದಸ್ಯರು, ಅಧ್ಯಕ್ಷ, ಉಪಾಧ್ಯಕ್ಷರಿಗೆ ಬರಸಿಡಿಲು ಬಡಿದಂತಾಗಿದೆ.
ಜಿಲ್ಲೆಯ 24 ಕ್ಷೇತ್ರಗಳ ಪೈಕಿ ಬಹುತೇಕ ಕ್ಷೇತ್ರಗಳ ಮೀಸಲಾತಿ ಬದಲಾವಣೆಯಾಗಿದ್ದು, ಬಹುತೇಕರು ಜಿಪಂಗೆ ಪುನರಾಯ್ಕೆ ಆಸೆಯನ್ನೇ ಕೈಬಿಡುವಂತಾಗಿದ್ದರೆ, ಇನ್ನಿತರರು ಕ್ಷೇತ್ರ ಹುಡುಕಾಡುವಂತಾಗಿದೆ. ಮೀಸಲಾತಿ ಸಂಕಟ: ಶತಾಯಗತಾಯ ಈ ಬಾರಿ ಜಿಪಂ ಪ್ರವೇಶಿಸಬೇ ಕೆಂದು ಕನಸು ಕಂಡವರಿಗೆ ಮೀಸಲಾತಿ ಸಂಕಟ ಎದುರಾಗಿದೆ.
ಗದಗ ಜಿಪಂ ವ್ಯಾಪ್ತಿಯ ಒಟ್ಟು 24 ಕ್ಷೇತ್ರಗಳಲ್ಲಿ 13 ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಿವೆ. ಜತೆಗೆ ಸಾಮಾನ್ಯ 12 ಸ್ಥಾನಗಳಲ್ಲಿ 6 ಕ್ಷೇತ್ರಗಳು ಮಹಿಳೆಯರ ಪಾಲಾಗಿವೆ. ಅನುಸೂಚಿತ ಜಾತಿಗೆ ಒಟ್ಟು 4 ಕ್ಷೇತ್ರಗಳು ಲಭ್ಯವಾಗಿದ್ದು, ಅದರಲ್ಲಿ 3 ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಿವೆ. ಅನುಸೂಚಿತ ಪಂಗಡದ 2 ಕ್ಷೇತ್ರಗಳಲ್ಲಿ 1ಮಹಿಳಾ ಮೀಸಲಾಗಿದೆ. ಹಿಂದುಳಿದ ವರ್ಗ “ಅ’ ಸಮುದಾಯದವರಿಗೆ 5 ಕ್ಷೇತ್ರಗಳಲ್ಲಿ 2 ಮಹಿಳೆಯರಿಗೆ ಲಭಿಸಿವೆ. ಹಿಂದುಳಿದ ವರ್ಗ “ಬ’ ಕ್ಕೆ ಸಿಕ್ಕಿರುವ ಒಂದೇ ಒಂದು ಕ್ಷೇತ್ರ ಮಹಿಳೆಗೆ ಮೀಸಲಾಗಿದೆ.
ಕ್ಷೇತ್ರ ಹುಡುಕುವ ಅನಿವಾರ್ಯತೆ: 2016-2021ರ ಜಿಪಂ ಅಧಿ ಕಾರ ಅವ ಧಿಯಲ್ಲಿ ಬಹುಮತ ಪಡೆದಿದ್ದ ಕಾಂಗ್ರೆಸ್ ಪಕ್ಷದಿಂದ ಐವರು ಜಿಪಂ ಅಧ್ಯಕ್ಷ-ಉಪಾಧ್ಯಕ್ಷರಾಗಿದ್ದರು. ವಾಸಣ್ಣ ಕುರಡಗಿ, ಎಸ್.ಪಿ.ಬಳಿಗಾರ, ಸಿದ್ದು ಪಾಟೀಲ, ರಾಜೂಗೌಡ ಕೆಂಚನಗೌಡ್ರ, ಈರಪ್ಪ ಈಶ್ವರಪ್ಪ ನಾಡಗೌಡ್ರ ಅವರು ಅಧ್ಯಕ್ಷರಾಗಿದ್ದರು. ಇದೇ ಅವಧಿ ಯಲ್ಲಿ ಕ್ರಮವಾಗಿ ರೂಪಾ ಅಂಗಡಿ, ಶಕುಂತಲಾ ರವೀಂದ್ರ ಮೂಲಿಮನಿ, ಮಲ್ಲವ್ವ ಬಿಚ್ಚಾರ, ಮಂಜಳಾ ಹುಲ್ಲಣ್ಣವರ ಅವರು ಉಪಾಧ್ಯಕ್ಷರಾಗಿದ್ದರು. ಅದರೊಂದಿಗೆ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ವಿಪಕ್ಷ ಸ್ಥಾನದಲ್ಲಿ ಗುರುತಿಸಿಕೊಂಡಿದ್ದವರಿಗೂ ಕ್ಷೇತ್ರ ಕೈತಪ್ಪಿದಂತಾಗಿದೆ. ಹೀಗಾಗಿ ಕೆಲವರು ತಮಗೆ ಅನುಕೂಲಕರವಾದ ಕ್ಷೇತ್ರಗಳತ್ತ ಪಲಾಯನ ಬಯಸಿದ್ದಾರೆ. ಇನ್ನು ಕೆಲವರು ಮಹಿಳಾ ಮೀಸಲಾತಿಯ ತಮ್ಮ ಕ್ಷೇತ್ರಗಳಿಗೆ ಕುಟುಂಬದ ಮಹಿಳಾ ಸದಸ್ಯರನ್ನು ಚುನಾವಣಾ ಅಖಾಡಕ್ಕಿಳಿಸಲು ಚಿಂತನೆ ಆರಂಭಿಸಿದ್ದಾರೆ. ಈ ಬಗ್ಗೆ ಕುಟುಂಬಸ್ಥರೊಂದಿಗೆ ಚರ್ಚೆಗಳು ಬಿರುಸಾಗಿ ಸಾಗಿವೆ ಎಂದೇ ಹೇಳಲಾಗಿದೆ.
ಮೀಸಲು ತಂದ ಅದೃಷ್ಟ: ಈ ಬಾರಿ ಜಿಪಂ ಚುನಾವಣೆಗೆ ಉದ್ದೇಶಿತ ಕರಡು ಮೀಸಲಾತಿ ಕೆಲವರ ಪಾಲಿಗೆ ಅದೃಷ್ಟ ಮತ್ತೂಮ್ಮೆ ಮನೆ ಬಾಗಿಲಿಗೆ ಬಂದಂತಾಗಿದೆ. ಕಳೆದ ಬಾರಿ ಹಿಂದುಳಿದ “ಬ’ ವರ್ಗಕ್ಕೆ ಮೀಸಲಾಗಿದ್ದ ಶಿಗ್ಲಿ ಜಿಪಂ ಕ್ಷೇತ್ರ ಈ ಬಾರಿ “ಸಾಮಾನ್ಯ’ವಾಗಿದೆ. ಹೆಬ್ಟಾಳ ಸಾಮಾನ್ಯ ಕ್ಷೇತ್ರ ಈಗ ಇಟಗಿ(ಹೆಬ್ಟಾಳ) ಸಾಮಾನ್ಯ ಕ್ಷೇತ್ರವಾಗಿದೆ. ಕಳೆದ ಬಾರಿ ಸಾಮಾನ್ಯ ಮಹಿಳೆಯಾಗಿದ್ದ ಬೆಳ್ಳಟ್ಟಿ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಇದು ಆಯಾ ಕ್ಷೇತ್ರದ ಪ್ರತಿನಿಧಿಗಳಿಗೆ ಅನುಕೂಲಕರವಾಗಿದ್ದರೆ, ಇನ್ನಿತರರ ಕಣ್ಣು ಕೆಂಪಾಗಿಸಿರುವುದು ಸುಳ್ಳಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.