“ನೆರವು’ ಸಹಾಯವಾಣಿಯಿಂದ ಸದ್ದಿಲ್ಲದ “ಸೇವೆ’
ಕರ್ಫ್ಯೂನಲ್ಲೂ ಸಹಾಯ ಹಸ್ತ ಚಾಚಿದ ಗ್ರಾವಿವಿ
Team Udayavani, May 3, 2021, 11:00 PM IST
ಗದಗ: ಇಲ್ಲಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಕೊರೊನಾ ಕರ್ಫ್ಯೂ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನ-ಜಾನುವಾರುಗಳಿಗೆ ಹಲವು ರೂಪದಲ್ಲಿ ಸಹಾಯ ಹಸ್ತ ಚಾಚುವುದರ ಜತೆಗೆ “ನೆರವು’ ಯೋಜನೆ ಮೂಲಕ ಸದ್ದಿಲ್ಲದೇ ಮಾನವೀಯತೆ ಪಾಠ ಬೋಧಿಸುತ್ತಿದೆ. ಸದಾ ಜನಮುಖೀ ಹಾಗೂ ಗ್ರಾಮೀಣ ಪ್ರಗತಿಗೆ ಪೂರಕವಾದ ಕ್ರಮಗಳೊಂದಿಗೆ ನಾಡಿನಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳುವ ಗ್ರಾವಿವಿ ಇದೀಗ ಅಂತಹದ್ದೇ ಯೋಜನೆ ಮೂಲಕ ಗಮನ ಸೆಳೆಯುತ್ತಿದೆ. ಕೋವಿಡ್-19ರ 2ನೇ ಅಲೆಯಿಂದ ಮತ್ತೂಮ್ಮೆ ವಿಶ್ವವೇ ತಲ್ಲಗೊಂಡಿದೆ. ಕೋವಿಡ್-19 ಜಾಗತಿಕ ಪಿಡುಗಾಗಿದ್ದು, ಎಲ್ಲ ವಯಸ್ಸಿನ, ವರ್ಗದ ಜನರು ಬಾಧಿತರಾಗುತ್ತಿದ್ದಾರೆ. ಕೋವಿಡ್ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕೆಂಬ ಸಂಕಲ್ಪದೊಂದಿಗೆ ಗ್ರಾವಿವಿ ತನ್ನದೇ ಆದ ಪರಿಹಾರ ಮಾರ್ಗ ಕಂಡುಕೊಂಡಿದೆ.
“ನೆರವು’ ಸಹಾಯವಾಣಿ: ಗ್ರಾವಿವಿ ಸಮಾಜ ಕಾರ್ಯ ವಿಭಾಗದಡಿ ಕೋವಿಡ್-19ರ ಸಂದಿಗ್ಧ ಪರಿಸ್ಥಿತಿಯಲ್ಲಿ ತೊಂದರೆ ಅನುಭವಿಸುತ್ತಿರುವ ಜನರಿಗೆ ನೆರವು ಒದಗಿಸಲು “ನೆರವು’ ಸಹಾಯವಾಣಿ ಕೇಂದ್ರ ಆರಂಭಿಸಿದೆ. ಕೋವಿಡ್ ಸೋಂಕು, ಲಸಿಕೆ, ವೈದ್ಯಕೀಯ ಸೌಲಭ್ಯ ಒದಗಿಸುವ ಸಂಸ್ಥೆಗಳು, ಕೋವಿಡ್ ಲಸಿಕೆಗೆ ನೋಂದಣಿ, ಆಪ್ತ ಸಮಾಲೋಚನೆ ಸೇವೆ ಒದಗಿಸುತ್ತಿದೆ. ಈ ಪೈಕಿ ಮೈಸೂರು, ಮಂಡ್ಯ ಜಿಲ್ಲೆಗಳಿಂದಲೂ ಬೆಡ್, ಆಕ್ಸಿಜನ್ ವಿಚಾರವಾಗಿ ಹೆಚ್ಚಿನ ಜನರಿಂದ ಕರೆಗಳು ಬರುತ್ತಿವೆ. ಅಂತಹವರಿಗೆ ಹೆಲ್ಪ್ಲೈನ್ ಸಂಖ್ಯೆ ನೀಡಲಾಗುತ್ತದೆ. ಇನ್ನುಳಿದಂತೆ ಕೋವಿಡ್ -19 ಪಾಸಿಟಿವ್ ವರದಿಯಿಂದ ಗೊಂದಲಕ್ಕೆ ಈಡಾದವರಿಂದಲೂ ಕರೆ ಬರುತ್ತಿದ್ದು, ಅವರಿಗೆ ಸಮಾಲೋಚನೆ ಮೂಲಕ ಧೈರ್ಯ ತುಂಬುತ್ತಿದೆ.
ಹಸಿದವರಿಗೆ “ಅನ್ನ’ ಸಂತರ್ಪಣೆ: ಕೋವಿಡ್ ಕರ್ಫ್ಯೂ ಸಂದರ್ಭದಲ್ಲಿ ಅವಶ್ಯಕತೆ ಇರುವವರಿಗೆ ಇಂದಿನಿಂದ ನಿತ್ಯವೂ ಅನ್ನದಾನ ಮಾಡುವ ಯೋಜನೆಯನ್ನು ವಿಶ್ವವಿದ್ಯಾಲಯ ಹಾಕಿಕೊಂಡಿದೆ. ಸೋಂಕಿನಿಂದ ಜಿಲ್ಲಾಸ್ಪತ್ರೆಗೆ ಸೇರಿದವರಿಗೆ ಆಹಾರದ ಸಮಸ್ಯೆ ಇರಲ್ಲ. ಆದರೆ ಅವರನ್ನು ನೋಡಿಕೊಳ್ಳಲು ಬರುವವರು, ಸಂಬಂ ಧಿಕರು ಊಟ ಸಿಗದೇ ಪರದಾಡುತ್ತಿದ್ದು, ಕಳೆದ ನಾಲ್ಕೈದು ದಿನಗಳಿಂದ ಪ್ರತಿದಿನ ಬೆಳಿಗ್ಗೆ 400 ಮತ್ತು ರಾತ್ರಿ 400 ಜನರಿಗೆ ಊಟ, ತಿಂಡಿಯನ್ನು ವಿವಿ ಪೂರೈಸುತ್ತಿದೆ. ಅದಕ್ಕಾಗಿ ಬೋಧಕ-ಬೋಧಕೇತರ ಸಿಬ್ಬಂದಿ ಒಂದೊಂದು ದಿನದ ಊಟದ ಜವಾಬ್ದಾರಿ ಹೊತ್ತುಕೊಳ್ಳುತ್ತಿದ್ದಾರೆ.
ಅದರೊಂದಿಗೆ ಕೆಲ ದಾನಿಗಳು ಆಹಾರ ಸಾಮಗ್ರಿ ನೀಡಿ ನೆರವಾಗುತ್ತಿದ್ದಾರೆ. ಜತೆಗೆ ಗ್ರಾವಿವಿ ಕ್ಯಾಂಪಸ್‌ನಲ್ಲಿ ದೇಸಿ ಕೃಷಿ ಯೋಜನೆಯಡಿ ಬೆಳೆದ ತರಕಾರಿ ಬಳಸಿ ವಿವಿ ಹಾಸ್ಟೆಲ್‌ನಲ್ಲಿ ಅಡುಗೆ ಸಿದ್ಧಗೊಳಿಸಲಾಗುತ್ತಿದೆ. ಬಳಿಕ ಅಚ್ಚುಕಟ್ಟಾಗಿ ಪ್ಯಾಕಿಂಗ್ ಮಾಡಿ, ಅಗತ್ಯವಿದ್ದವವರಿಗೆ ತಲುಪಿಸುವ ಮೂಲಕ ಧನ್ಯತೆ ಮೆರೆಯುತ್ತಿದ್ದಾರೆ.
ಬಿಡಾಡಿ ದನಗಳಿಗೆ ಮೇವು: ನಾಗಾವಿ ಸಮೀಪದ ಗ್ರಾವಿವಿ ಕ್ಯಾಂಪಸ್‌ನಲ್ಲಿ ಮೇವು ಬೆಳೆಯಲಾಗುತ್ತಿದ್ದು, ಅದನ್ನು ಅವಳಿ ನಗರದ ಬೀಡಾಡಿ ದನಗಳಿಗೆ ಹಾಕಲಾಗುತ್ತಿದೆ. ಅದಕ್ಕಾಗಿ ಗ್ರಾವಿವಿ ಬೋಧಕ-ಬೋಧಕೇತರ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಮುಂದಿನ 15 ದಿನಗಳವರೆಗೆ ಸಾಕಾಗುವಷ್ಟು ಮೇವು ದಾಸ್ತಾನಿಗಿದೆ ಎನ್ನಲಾಗಿದೆ¨
ಕೋವಿಡ್-19 ಸೋಂಕು ಗೆದ್ದು ಬಂದವರು ಪ್ಲಾಸ್ಮಾ ದಾನಕ್ಕೆ ಮುಂದಾಗಲು ಪ್ರೇರೇಪಿಸುವ ಕಾರ್ಯದಲ್ಲಿ ವಿವಿ ತೊಡಗಿದೆ. ಅದಕ್ಕಾಗಿ ಗೂಗಲ್ ಫಾಮ್ಯಾìಟ್ ಸಿದ್ಧಪಡಿಸಿ ಎಲ್ಲ ಕಡೆಗಳಲ್ಲಿ ಹಂಚಿದ್ದೇವೆ. ಆಸಕ್ತರು ಹೆಸರು ನೋಂದಾಯಿಸಬಹುದು. ದೇಶಕ್ಕೆ ಎದುರಾಗಿರುವ ಇಂತಹ ವಿಷಮ ಪರಿಸ್ಥಿತಿ ಎದುರಿಸಲು ಪ್ರತಿಯೊಬ್ಬರೂ ಕೋವಿಡ್ ಸೇನಾನಿಗಳಾಗಬೇಕಿದೆ. ಈ ನಿಟ್ಟಿನಲ್ಲಿ ಗ್ರಾವಿವಿ ಬೋಧಕ, ಬೋಧಕೇತರ ಸಿಬ್ಬಂದಿಯೂ ಕೊರೊನಾ ಸೇನಾನಿಗಳಂತೆ ದುಡಿಯುತ್ತಿದ್ದಾರೆ. ಕೋವಿಡ್ ಸಂತ್ರಸ್ತರಿಗೆ ಆಹಾರ ಮತ್ತು ಕರ್ಫ್ಯೂನಿಂದ ಪರದಾಡುತ್ತಿರುವ ಜಾನುವಾರುಗಳಿಗೆ ಮೇವು ಒದಗಿಸಲಾಗುತ್ತದೆ. ಅದಕ್ಕೆ ದಾನಿಗಳಿಂದಲೂ ಉತ್ತಮ ಸ್ಪಂದನೆಯಿದೆ. -ಪ್ರೊ|ವಿಷ್ಣುಕಾಂತ ಎಸ್. ಚಟಪಲ್ಲಿ ಗ್ರಾವಿವಿ ಕುಲಪತಿ
ವೀರೇಂದ್ರ ನಾಗಲದಿನ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.