ಕನ್ನಡ ಭಾಷೆ ಉಳಿಸಿ-ಬೆಳೆಸಿ: ಸಚಿವ ಸಿ.ಸಿ. ಪಾಟೀಲ
Team Udayavani, Feb 28, 2021, 4:15 PM IST
ಗದಗ: ಇಂದು ಕರ್ನಾಟಕ ರಾಜ್ಯದಲ್ಲಿ ಅನ್ಯ ಭಾಷೆಗಳ ಹಾವಳಿ ಅಧಿಕವಾಗಿದೆ. ನಾವೆಲ್ಲರೂ ಮಾತೃಭಾಷೆ ಕನ್ನಡ ಕಲಿತು ಅಭಿಮಾನದಿಂದಮಾತನಾಡುವ ಮೂಲಕ ಕನ್ನಡ ಭಾಷೆಯನ್ನುಉಳಿಸಿ, ಬೆಳೆಸಬೇಕಿದೆ ಎಂದು ಸಣ್ಣ ಕೈಗಾರಿಕೆ,ವಾರ್ತಾ ಮತ್ತು ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿದ ಗದಗ ಜಿಲ್ಲಾ 9ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಅದರಲ್ಲೂಉತ್ತರ ಕರ್ನಾಟಕದ ಕನ್ನಡ ಭಾಷೆಗೆ ಅದರದ್ದೇ ಆದ ಗತ್ತು-ಗಮ್ಮತ್ತಿದೆ. ಆ ಸೊಗಡನ್ನು ನಮ್ಮಜೀವನದುದ್ದಕ್ಕೂ ಬಳಸೋಣ ಎಂದರು.
ಇಂದಿನ ದಿನಮಾನಗಳಲ್ಲಿ ಕನ್ನಡದ ಮೇಲೆ ಅನ್ಯ ಭಾಷೆಗಳ ಪ್ರಭಾವ ಹೆಚ್ಚುತ್ತಿದೆ. ಜತೆಗೆಸ್ಪರ್ಧಾತ್ಮಕ ಯುಗದಲ್ಲಿ ಅನ್ಯ ಭಾಷೆಗಳನ್ನು ಕಲಿಯುವ ಅನಿವಾರ್ಯತೆ ಇದೆ. ಆದರೆ,ಕನ್ನಡ ಭಾಷೆ ಕಡೆಗಣಿಸಬಾರದು. ವಿಧಾನಪರಿಷತ್ ಸಭಾಧ್ಯಕ್ಷ ಬಸರಾಜ ಹೊರಟ್ಟಿ ಅವರುಸುದೀರ್ಘ ರಾಜಕೀಯ ಜೀವನ ಸವೆಸಿದ್ದರೂ, ಉತ್ತರ ಕರ್ನಾಟಕದ ಭಾಷೆ ಮರೆತಿಲ್ಲ. ಆದರೆ, ನಾವು ನಾಲ್ಕೈದು ತಿಂಗಳು ಬೆಂಗಳೂರಿನಲ್ಲಿನೆಲೆಸಿದ್ದರೆ ಸಾಕು, ಅಲ್ಲಿನ ಭಾಷೆಯ ಅನುಕರಣೆಮಾಡುತ್ತೇವೆ. ಹುಟ್ಟಿದ ನೆಲವನ್ನು ಎಂದಿಗೂಮರೆಯಬಾರದು. ನಮ್ಮತನವನ್ನು ಉಳಿಸಿಕೊಳ್ಳ ಬೇಕು ಎಂದು ಕಿವಿಮಾತು ಹೇಳಿದರು.
ಕನ್ನಡ ನಾಡಿನ ಸಾಹಿತ್ಯ, ಸಂಸ್ಕೃತಿಗೆ ಗದಗ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಜಿಲ್ಲೆಯುಮೊದಲಿನಿಂದಲೂ ಸಹ ಸಾಹಿತ್ಯಿಕ, ಸಾಂಸ್ಕೃತಿಕ ವಾಗಿ ಶ್ರೀಮಂತವಾಗಿದೆ. ಜಿಲ್ಲೆಯಲ್ಲಿ ಪಂ|ಪುಟ್ಟರಾಜ ಗವಾಯಿಗಳು, ಭಾರತರತ್ನಭೀಮಸೇನ್ ಜೋಶಿ, ಹುಯಿಲಗೋಳ ನಾರಾ ಯಣರಾವ್ ಸೇರಿದಂತೆ ಜಿಲ್ಲೆಯ ಎಲ್ಲ ಕವಿ,ಸಾಹಿತಿಗಳು ಸಹ ಅಭಿನಂದನಾರ್ಹರು ಎಂದರು. 1905ರಲ್ಲಿ ಕನ್ನಡ ಸಾಹಿತ್ಯ ಪರಿಷತ್‌ಸ್ಥಾಪನೆಯಾಗಿ 105 ವರ್ಷಗಳ ಸು ದೀರ್ಘ ಇತಿಹಾಸ ಹೊಂದಿದೆ. ಪರಿಷತ್ತಿನಿಂದ ಕನ್ನಡನೆಲ, ಭಾಷೆ, ಸಂಸ್ಕೃತಿ ಉಳಿವಿಗೆ ಶ್ರಮಿಸುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 8 ಜಿಲ್ಲಾ ಮಟ್ಟದ ಸಾಹಿತ್ಯಸಮ್ಮೇಳನಗಳನ್ನು ಉತ್ತಮವಾಗಿ ಆಯೋಜಿಸಲಾಗಿದೆ. ಮುಂಡರಗಿ, ಲಕ್ಷ್ಮೇಶ್ವರ, ಗದಗ, ಗಜೆಂದ್ರಗಡ, ರೋಣ, ಶಿರಹಟ್ಟಿ ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಸಮ್ಮೇಳನಗಳನ್ನು ಆಯೋಜಿಸಿ ಯಶಸ್ವಿಗೊಳಿಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಕೆ. ಪಾಟೀಲಮಾತನಾಡಿ, ಗದಗ ಜಿಲ್ಲೆಯು ಸಾಹಿತ್ಯಿಕ, ಸಾಂಸ್ಕೃತಿಕ ನೆಲೆವೀಡಾಗಿದೆ. ಜಿಲ್ಲೆಯ ಲಕ್ಕುಂಡಿಸೇರಿ ಹಲವಾರು ಗ್ರಾಮಗಳಲ್ಲಿರುವ ಪುರಾತನ ದೇವಸ್ಥಾನಗಳ ಪುನಶ್ಚೇತನ ಕಾರ್ಯವಾಗಬೇಕಿದೆ.ಗದಗ-ಬೆಟಗೇರಿ ಅವಳಿ ನಗರದ ಉದ್ಯಾನ ಗಳಲ್ಲಿ ಈ ಹಿಂದೆ ನಡೆಯುತ್ತಿದ್ದ ಉದಯರಾಗ,ಸಂಧ್ಯಾರಾಗ ಕಾರ್ಯಕ್ರಮಗಳು ಪುನಾರಂಭ ವಾಗಬೇಕಿದೆ. ಜಿಲ್ಲೆಯಲ್ಲಿರುವ ಸಾಹಿತಿಗಳನ್ನುಗುರುತಿಸಿ ಅವರ ಭಾವಚಿತ್ರಗಳನ್ನು ಜಿಲ್ಲಾ ಕನ್ನಡಸಾಹಿತ್ಯ ಭವನದಲ್ಲಿ ನಡೆಯುವ ಸಮ್ಮೇಳನದಲ್ಲಿ ಪ್ರಚುರ ಪಡಿಸುವ ಕಾರ್ಯವಾಗಬೇಕಿದೆ ಎಂದರು.
ಹಿಂದೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಜಿಲ್ಲೆಯ ಸಾಹಿತ್ಯ ಭವನ ನಿರ್ಮಾಣಕ್ಕೆ 3.28 ಕೋಟಿ ರೂ. ಹಾಗೂ ಸಿದ್ದರಾಮಯ್ಯ ಅವರಸರಕಾರ 3 ಕೋಟಿ ರೂ. ನೀಡಿದ್ದರಿಂದ ಈ ಭವ್ಯ ಭವನ ನಿರ್ಮಾಣವಾಗಿದೆ ಎಂದು ಸ್ಮರಿಸಿದಅವರು, ಜಿಲ್ಲೆಯಲ್ಲಿ ವಿವಿಧ ತಾಲೂಕಿನ ಉದ್ದೇಶಿತ ಸಾಹಿತ್ಯ ಭವನಗಳಿಗೆ ಅಗತ್ಯ ಅನುದಾನಕಲ್ಪಿಸಬೇಕೆಂದು ಸಚಿವರಿಗೆ ಮನವಿ ಮಾಡಿದರು.ಬಾಲೇಹೊಸೂರಿನ ದಿಂಗಾಲೇಶ್ವರ ಶ್ರೀಗಳುಸಾನ್ನಿಧ್ಯ ವಹಿಸಿ, ಸರಕಾರ, ಆಡಳಿತ ಹಾಗೂ ವ್ಯವಸ್ಥೆಯನ್ನು ಪ್ರತಿಭಟಿಸುವುದು ಅಷ್ಟು ಸುಲಭವಲ್ಲ. ಭಯದ ವಾತಾವರಣದಲ್ಲೇ ಜನರ ಅಭಿಪ್ರಾಯಗಳು ಕಮರಿ ಹೋಗುತ್ತಿವೆ. ಸತ್ಯ
ಹೇಳಲು ಈ ನಾಡಿನಲ್ಲಿ ಅಳಕು ಉಂಟಾಗುತ್ತಿದೆ. ಮುಕ್ತವಾಗಿ ಹೇಳಿಕೊಳ್ಳಲು ಅವಕಾಶ ಸಿಗುತ್ತಿಲ್ಲ. ಕನ್ನಡ ಸಾಹಿತ್ಯ, ನಾಡಿನ ಸಮಸ್ಯೆಗಳ ಬಗ್ಗೆ ಮಾತನಾಡುವುದು ಅರಣ್ಯರೋದನವಾಗಿದೆ. ಕನ್ನಡದಶ್ರೀಮಂತಿಕೆ ನಾಶಪಡಿಸಿ ಇಂಗ್ಲಿಷ್ ಸಾಮ್ರಾಜ್ಯ ವಿಸ್ತರಿಸಿಕೊಳ್ಳುತ್ತಿದೆ. ಎಲ್ಲೆಡೆ ಇಂಗ್ಲಿಷ್ ವಿರಾಜಮಾನವಾಗಿ, ಕನ್ನಡದ ಅವನತಿಗೆ ಕಾರಣವಾಗುತ್ತಿದೆ. ಈಹಿನ್ನೆಲೆಯಲ್ಲಿ ರಾಜ್ಯ ವಿಧಾನಸೌಧದಿಂದ ಪಾನ್‌ಅಂಗಡಿವರೆಗೆ ಎಲ್ಲ ಫಲಕಗಳು ಕನ್ನಡ ಕಡ್ಡಾಯಗೊಳಿಸಬೇಕು. ಈ ನಿಟ್ಟಿನಲ್ಲಿ ಸರಕಾರದಿಂದ ಆದೇಶಿ ಸಬೇಕೆಂದು ಸಚಿವರಿಗೆ ಸಲಹೆ ನೀಡಿದರು.
ಜಿಪಂ ಅಧ್ಯಕ್ಷ ಈರಪ್ಪ ನಾಡಗೌಡ್ರ, ಉಪಾಧ್ಯಕ್ಷೆ ಮಂಜುಳಾ ಹುಲ್ಲೆಣ್ಣವರ, ಜಿಪಂ ಸದಸ್ಯ ಪೂಜಾರ, ಡಿಸಿ ಎಂ. ಸುಂದರೇಶ ಬಾಬು, ಎಸ್ಪಿ ಯತೀಶ್ ಎನ್., ಎ. ರಾಯಪ್ಪ ಹುಣಸಗಿ, ಸರಕಾರಿ ನೌಕರರ ಸಂಘದಜಿಲ್ಲಾಧ್ಯಕ್ಷ ರವಿ ಗುಂಜೀಕರ, ಕ.ರಾ.ಪ್ರಾ.ಶಾ.ಶಿ.ಸಂಘದ ಜಿಲ್ಲಾಧ್ಯಕ್ಷ ವಿ.ಎಂ.ಹಿರೇಮಠ, ಜಿಲ್ಲಾಸರಕಾರಿ ನೌಕರರ ಸಂಘದ ನಿಕಟಪೂರ್ವ ಜಿಲ್ಲಾ ಧ್ಯಕ್ಷ ಪ್ರೇಮನಾಥ ಗರಗ, ನಿಕಟಪೂರ್ವ ಸಮ್ಮೇಳ ನಾಧ್ಯಕ್ಷ ಎಂ.ಡಿ.ಗೋಗೇರಿ ವೇದಿಕೆ ಮೇಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್ ಮುದ್ರಣ ಭರಾಟೆ; ಕ್ಯಾಲೆಂಡರ್-ತೂಗು ಪಂಚಾಂಗಗಳಿಗೆ ಖ್ಯಾತಿ
Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು
Diesel theft; ಗದಗ: ಕೆ.ಎಸ್.ಆರ್.ಟಿ.ಸಿ. ಬಸ್ ಗಳ ಡೀಸೆಲ್ ಕಳ್ಳತನ
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
ಗದಗ: 4 ವರ್ಷವಾದರೂ ಮುಗಿಯದ ವಸತಿ ಶಾಲೆ ಕೆಲಸ! 20 ಕೋಟಿ ರೂ. ವೆಚ್ಚ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್
Gangavathi: ಕ್ಲಿಫ್ ಜಂಪಿಂಗ್ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.