
ಮಂಕಾದ ಬಸ್ ನಿಲ್ದಾಣ ಕಾಮಗಾರಿ
ವ್ಯಾಪಾರ ವಹಿವಾಟು ಕುಂಠಿತಅಧಿಕಾರಿಗಳ ಧೋರಣೆಗೆ ವರ್ತಕರ ಬೇಸರ
Team Udayavani, Jan 23, 2020, 4:24 PM IST

ಗದಗ: ನಗರದ ಹೃದಯ ಭಾಗದಲ್ಲಿ ಹಳೇ ಬಸ್ ನಿಲ್ದಾಣದ ಪುನರ್ ನಿರ್ಮಾಣ ಕಾಮಗಾರಿ ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ. ಕಾಮಗಾರಿ ವಿಳಂಬದಿಂದಾಗಿ ಪ್ರಯಾಣಿಕರು ನಿತ್ಯ ಪರದಾಡವಂತಾದರೆ, ವರ್ತಕರು ವ್ಯಾಪಾರವಿಲ್ಲದೇ ಕಂಗೆಡುವಂತಾಗಿದೆ.
ಈ ಹಿಂದೆ ಶಿಥಿಲಗೊಂಡಿದ್ದ ಹಳೆ ಬಸ್ ನಿಲ್ದಾಣ ಕಟ್ಟಡವನ್ನು ನೆಲಸಮಗೊಳಿಸಿ, ಅದೇ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ. ಕಳೆದ ಎರಡೂ ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದರೂ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವೇಳೆಗೆ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಕಾಣಬೇಕಿತ್ತು. ಆದರೆ, ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿರುವುದು ವಿಳಂಬಕ್ಕೆ ಕಾರಣವಾಗಿದ್ದು, ಪ್ರಯಾಣಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.
ವ್ಯಾಪಾರ-ವಹಿವಾಟು ಕುಸಿತ: ನಾನಾ ಕೆಲಸ ಕಾರ್ಯಗಳ ನಿಮಿತ್ತ ಪ್ರತಿನಿತ್ಯ ಸರಾಸರಿ ಸಾವಿರಾರು ಪ್ರಯಾಣಿಕರು ಜಿಲ್ಲಾ ಕೇಂದ್ರಕ್ಕೆ ಆಗಮಿಸುತ್ತಾರೆ. ಅಲ್ಲದೇ, ಹಳೆ ಬ ಸ್ ನಿಲ್ದಾಣ ನಗರದ ಹೃಯ ಭಾಗದಲ್ಲಿರುವುದರಿಂದ ಸುತ್ತಲಿನ ವಾಣಿಜ್ಯ ಪ್ರದೇಶದಲ್ಲಿ ಸಹಜವಾಗಿಯೇ ವ್ಯಾಪಾರ- ವಹಿವಾಟು ಜೋರಾಗಿರುತ್ತಿತ್ತು. ಇಲ್ಲಿನ ಬ್ಯಾಂಕ್ ರೋಡ್‌ನಲ್ಲಿರುವ ಹಣ್ಣು, ಬಟ್ಟೆ ವ್ಯಾಪಾರ ಭರಾಟೆಯಿಂದ ಕೂಡಿರುತ್ತಿತ್ತು. ಆದರೆ, ಹಳೆ ಬಸ್ ನಿಲ್ದಾಣ ನೆಲಸಮಗೊಂಡಿದ್ದರಿಂದ ಎಲ್ಲ ಬಸ್‌ಗಳು ಹೊಸ ಬಸ್ ನಿಲ್ದಾಣದಿಂದ ಸಂಚರಿಸುತ್ತಿವೆ. ನಗರದ ಮಾರುಕಟ್ಟೆಯನ್ನು ಮಂಕಾಗಿ ಸಿದೆ ಎಂಬುದು ಸ್ಥಳೀಯ ವರ್ತಕರ ಅಳಲು.
ಚುರುಕಾಗದ ಕಾಮಗಾರಿ: ಹಳೆ ಬಸ್ ನಿಲ್ದಾಣದ 2.5 ಎಕರೆ ಪ್ರದೇಶದಲ್ಲಿ ಹೊಸದಾಗಿ ಕಟ್ಟಡ ನಿರ್ಮಿಸುತ್ತಿದ್ದು, ಶೇ. 90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಈಗಾಗಲೇ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಬಸ್‌ಗಳ ನಿಲುಗಡೆಗೆ ಪ್ಲಾಟ್‌ಫಾರಂ ನಿರ್ಮಿಸಬೇಕಿದೆ. ಪ್ರಾಯಾಣಿಕರ ಅನುಕೂಲಕ್ಕಾಗಿ ನೂರಾರು ಕಬ್ಬಿಣದ ಕುರ್ಚಿಗಳು ಬಂದಿದ್ದು, ಅವುಗಳು ಅಳವಡಿಕೆಯಾಗದೇ ಧೂಳು ತಿನ್ನುತ್ತಿವೆ.
ಇನ್ನುಳಿದಂತೆ ಹೊರಂಗಣ ವಿನ್ಯಾಸ, ಒಳಂಗಣ ವಿನ್ಯಾಸ, ಸಿಸಿ ಕ್ಯಾಮೆರಾ ಅಳವಡಿಕೆ, ಶೌಚಾಲಯ, ಮೂತ್ರಾಲಯಗಳಿಗೆ ನೀರಿನ ಸಂಪರ್ಕ ಕಲ್ಪಿಸುವುದು ಸೇರಿದಂತೆ ಅಲ್ಪಸ್ವಲ್ಪ ಕೆಲಸಗಳು ಬಾಕಿ ಉಳಿದಿವೆ. ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದೆ. ಮತ್ತೂಂದೆಡೆ ಕಾಮಗಾರಿ ಪೂರ್ಣಗೊಳಿಸಲು ನಿಗದಿಪಡಿಸಿದ್ದ ಗಡುವು ಮೀರಿ, ನಾಲ್ಕೈದು ತಿಂಗಳು ಕಳೆದಿದ್ದರೂ ಕಾಮಗಾರಿ ವೇಗ ಪಡೆಯದಿರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ ಎನ್ನಲಾಗಿದೆ.
ಕಾಮಗಾರಿಯನ್ನು ತ್ವರಿಗತಿಯಲ್ಲಿ ಪೂರ್ಣ ಗೊಳಿಸಲು ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಸ್ಥಳೀಯ ವರ್ತಕರ ಸಂಘ, ಸಂಸ್ಥೆಗಳು ಸಾರಿಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ ಎಂಬ ಆರೋಪದ ಮಾತುಗಳು ಕೇಳಿ ಬರುತ್ತಿವೆ.
ರಸ್ತೆ ಬದಿಯೇ ಬಸ್ ನಿಲ್ದಾಣ: ಹಳೇ ಬಸ್ ನಿಲ್ದಾಣವನ್ನೇ ನೆಚ್ಚಿಕೊಂಡು ಬಾಗಲಕೋಟೆ,
ಬದಾಮಿ, ರೋಣ, ಗಜೇಂದ್ರಗಡ, ಗದಗ ತಾಲೂಕಿನ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರು ತಮ್ಮ ಊರಿಗೆ ತೆರಳಲು ಇಲ್ಲಿನ ರೋಟರಿ ಸರ್ಕಲ್, ಹಳೇ ಡಿಸಿ ಕಚೇರಿ, ಗಾಂಧಿ ವೃತ್ತದಲ್ಲಿನ ರಸ್ತೆ ಬದಿಯಲ್ಲಿ ಬಸ್ ಕಾಯುವಂತಾಗಿದ್ದು, ವಾಹನ ದಟ್ಟಣೆಗೂ ಪರೋಕ್ಷ ಕಾರಣವಾಗಿದೆ. ಇನ್ನು, ಪ್ರಯಾಣಿಕರ ಅನುಕೂಲಕ್ಕಾಗಿ ಹಳೆ ಬಸ್ ನಿಲ್ದಾಣ ಹಾಗೂ ಹೊಸ ಬಸ್ ನಿಲ್ದಾಣಗಳ ನಡುವೆ ಸಿಟಿ ಬಸ್ ವ್ಯವಸ್ಥೆ ಮಾಡಲಾಗಿದೆ. ಹಳೆ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲೇ ಸಿಟಿ ಬಸ್ ಗಳ ನಿಲುಗಡೆಯಾಗುತ್ತಿವೆ. ಅದರೊಂದಿಗೆ ಆಟೋ, ಟಂಟಂ ಹಾಗೂ ಗ್ರಾಮೀಣ ಪ್ರದೇಶಕ್ಕೆ ತೆರಳುವ ಖಾಸಗಿ ವಾಹನಗಳೂ ನಿಲುಗಡೆಯಾಗುತ್ತಿದ್ದರಿಂದ ಇಕ್ಕಟ್ಟಾದ ರಸ್ತೆಯಲ್ಲಿ ಟ್ರಾಫಿಕ್ ಜಾಮ್‌ಗೆ ಕಾರಣವಾಗುತ್ತಿದೆ.
ಸ್ಥಳೀಯ ವರ್ತಕರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಬೇಕು ಗದಗ: ಕಟ್ಟಡ ನಿರ್ಮಾಣ ವಿಳಂಬದಿಂದಾಗಿ ನೂರಾರು ಕುರ್ಚಿಗಳು ಧೂಳು ತಿನ್ನುತ್ತಿವೆ. ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.
ವೀರೇಂದ್ರ ನಾಗಲದಿನ್ನಿ
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ

CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು

Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ

Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ

Gadaga: ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಪೊಲೀಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.