ರಾಜ್ಯ-ಕೇಂದ್ರ ಸರ್ಕಾರ ಚನ್ನಮ್ಮ ಜಯಂತಿ ಆಚರಿಸಲಿ

Team Udayavani, Nov 15, 2018, 5:05 PM IST

15-november-16.gif

ಗದಗ: ವೀರರಾಣಿ ಕಿತ್ತೂರ ಚನ್ಮಮ್ಮ ಅವರ 240 ನೇ ಜಯಂತ್ಯುತ್ಸವ ಹಾಗೂ 195ನೇ ವಿಜಯೋತ್ಸವ ಅಂಗವಾಗಿ ಜಿಲ್ಲಾ ಪಂಚಮಸಾಲಿ ಸಮುದಾಯದಿಂದ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಬೈಕ್‌ ರ್ಯಾಲಿಗೆ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಚಾಲನೆ ನೀಡಿದರು.

ಇದಕ್ಕೂ ಮುನ್ನ ಇಲ್ಲಿನ ಭೂಮರಡ್ಡಿ ವೃತ್ತದಲ್ಲಿರುವ ಪಂ. ಪುಟ್ಟರಾಜ ಗವಾಯಿಗಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ರಾಜ್ಯ ಸರಕಾರದಂತೆ ಕೇಂದ್ರವೂ ರಾಣಿ ಚನ್ನಮ್ಮ ಜಯಂತಿ ಆಚರಣೆಗೆ ಮುಂದಾಗಬೇಕು. ಸಂಸತ್‌ ಆವರಣದಲ್ಲಿ ಸ್ಥಾಪಿಸಿರುವ ರಾಣಿ ಚನ್ನಮ್ಮ ಅವರ ಪುತ್ಥಳಿಗೆ ಬಸವ ಜಯಂತಿ ಅಂಗವಾಗಿ ಪ್ರತೀ ವರ್ಷ ಸ್ಪೀಕರ್‌ ಅವರು ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಬೇಕು ಎಂದರು. ವೀರರಾಣಿ ಚನ್ನಮ್ಮ ಅವರ ಶೌರ್ಯ ಸಾಹಸಗಳು ಇಂದಿನ ಯುವ ಸಮುದಾಯ ಹಾಗೂ ಮಹಿಳೆಯರಿಗೆ ಪ್ರೇರಣೆ ನೀಡುತ್ತವೆ. ರಾಣಿ ಚನ್ನಮ್ಮ ಅವರ ಜೀವನ ಮತ್ತು ಆದರ್ಶಗಳ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಳ್ಳಬೇಕು ಎಂದು ಹೇಳಿದರು.

ಬೃಹತ್‌ ಬೈಕ್‌ ರ್ಯಾಲಿ: ನಗರದ ವೆಂಕಟೇಶ ಟಾಕೀಸ್‌ ರಸ್ತೆ, ಚೇತನ ಕ್ಯಾಟೀನ್‌, ಹಾತಲಗೇರಿ ನಾಕಾ ಮಾರ್ಗವಾಗಿ, ಕುರಟ್ಟಿ ಪೇಟೆ, ತೆಂಗಿನಕಾಯಿ ಬಜಾರ, ಪಾಲಾ ಬದಾಮಿ ರಸ್ತೆ ನಗರಸಭೆ ಮುಂದುಗಡೆ, ಗಾಂಧಿ ಸರ್ಕಲ್‌, ಮಹೇಂದ್ರಕರ ಸರ್ಕಲ್‌, ಹುಯಿಲಗೋಳ ನಾರಾಯಣರಾವ ವೃತ್ತ, ಬಸವೇಶ್ವರ ಸರ್ಕಲ್‌, ಒಕ್ಕಲಗೇರಿ ಮಾರ್ಗವಾಗಿ ಮುಳಗುಂದ ನಾಕಾದ ಮೂಲಕ ಸಂಚರಿಸಿ, ಕಿತ್ತೂರ ಚನ್ನಮ್ಮ ವೃತ್ತದಲ್ಲಿರುವ ರಾಣಿ ಚನ್ನಮ್ಮ ಅವರ ಪುತ್ಥಳಿಗೆ ಪೂಜೆ ಸಲ್ಲಿಸುವ ಮೂಲಕ ಮುಕ್ತಾಯಗೊಳಿಸಲಾಯಿತು.

ಬೈಕ್‌ ರ್ಯಾಲಿಯಲ್ಲಿ ಅಯ್ಯಪ್ಪ ಅಂಗಡಿ, ಶಿವರಾಜಗೌಡ ಹಿರೇಮನಿಪಾಟೀಲ, ಮೋಹನ ಮಾಳಶೆಟ್ಟಿ, ಬಸವರಾಜ ಮನಗುಂಡಿ, ಮಂಜುನಾಥ ಗುಡದೂರ, ಬಿ.ಬಿ. ಸೂರಪ್ಪಗೌಡ್ರ, ಸಂಗು ಅಂಗಡಿ, ಅಜ್ಜನಗೌಡ ಹಿರೇಮನಿಪಾಟೀಲ, ಶಿವಣ್ಣ ನಾಗರಾಳ, ಬಸವರಾಜ ಕುಂದಗೋಳ, ವಸಂತ ಪಡಗದ, ಮಹೇಶ ಕರಿಬಿಷ್ಠಿ, ಕಲ್ಯಾಣಪ್ಪ ಹೋಳಿ, ಈರಣ್ಣ ಮಾನೇದ, ಚಂದ್ರಕಾಂತ ಚವ್ಹಾಣ, ಶಂಕರಗೌಡ ಪಾಟೀಲ, ಸುಭಾಷ ಮಳಗಿ, ಶೇಖಪ್ಪ ಕರಿಬಿಷ್ಠಿ,  ಕಿರಣ ಕಮತರ, ಚೇತನ ಅಬ್ಬಿಗೇರಿ, ಮಂಜುನಾಥ ಕೊಟಗಿ, ಈರಪ್ಪ ಗೋಡಿ, ಮಲ್ಲಪ್ಪ ಪಲ್ಲೇದ, ರಮೇಶ ನಿಂಬನಗೌಡರ, ಅಪ್ಪು ಮುಳವಾಡ, ಸಂತೋಷ ಖಾನಾಪುರ, ಶರಣು ಬೋಳಮ್ಮನವರ, ಮಹಾಂತೇಶ ನಲವಡಿ, ಸುರೇಶ ಚಿತ್ತರಗಿ, ಜಗದೀಶ ಪಲ್ಲೇದ, ರಮೇಶ ಕಾಗಿ, ಸುನೀಲ ಕುಂದಗೋಳ, ಬಸವರಾಜ ದೊಡ್ಡೂರ, ಮಂಜುನಾಥ ಪಿರಂಗಿ, ಗಣೇಶ ಲಕ್ಕುಂಡಿ, ಮುತ್ತು ಮುಳವಾಡ, ಸಂಗು ದೊಡ್ಡಣ್ಣವರ, ಅಶೋಕ ಕೊಂಡಿಕೊಪ್ಪ, ವಿಜಯಕುಮಾರ ಲಕ್ಕುಂಡಿ, ಕುಮಾರ ತಡಕೋಡ, ಸೋಮು ಮುಳಗುಂದ, ಮಂಜು ದಿಂಡೂರ, ಕುಮಾರ ಹೊಂಬಳ ಇದ್ದರು.

ಟಾಪ್ ನ್ಯೂಸ್

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Jammu and Kashmir: Vehicle falls into gorge

Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು

8-

UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು

Vavar Mosque: Sabarimala pilgrims should not go to Vavar Mosque: BJP MLA

Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ

Sydney Test: Virat reminds Australian audience of sandpaper case

Sydney: ಆಸ್ಟ್ರೇಲಿಯಾ ಪ್ರೇಕ್ಷಕರಿಗೆ ಸ್ಯಾಂಡ್‌ಪೇಪರ್‌ ಕೇಸ್‌ ನೆನಪು ಮಾಡಿದ ವಿರಾಟ್‌|Video

Viral: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!

Viral: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ 16ರ ಬಾಲಕನ ಜತೆ ಮನೆ ಬಿಟ್ಟು ಓಡಿದ 10ರ ಬಾಲಕಿ!

5-photography

Photography: ಎಲ್ಲೆಲ್ಲೂ ಫೋಟೋಗ್ರಫಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

Gadag: ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

ಗದಗ: ಮಾವು ಬಂಪರ್‌ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ

ಗದಗ: ಮಾವು ಬಂಪರ್‌ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ

Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ

Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ

ಗದಗ: ನೀರು ಸೋರಿಕೆ- ನದಿಯಲ್ಲಿ ನೀರಿದ್ದರೂ ತಪ್ಪದ ಹಾಹಾಕಾರ!

ಗದಗ: ನೀರು ಸೋರಿಕೆ- ನದಿಯಲ್ಲಿ ನೀರಿದ್ದರೂ ತಪ್ಪದ ಹಾಹಾಕಾರ!

ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್‌ ಮುದ್ರಣ ಭರಾಟೆ; ಕ್ಯಾಲೆಂಡರ್‌-ತೂಗು ಪಂಚಾಂಗಗಳಿಗೆ ಖ್ಯಾತಿ

ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್‌ ಮುದ್ರಣ ಭರಾಟೆ; ಕ್ಯಾಲೆಂಡರ್‌-ತೂಗು ಪಂಚಾಂಗಗಳಿಗೆ ಖ್ಯಾತಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್‌ ಸಿಗೋದು ಕಷ್ಟ – ವರದಿ

Jammu and Kashmir: Vehicle falls into gorge

Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು

9-health

Manipal ಪಾಯ್ಸನ್‌ ಇನ್‌ಫಾರ್ಮೇಶನ್‌ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ

8-

UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು

Vavar Mosque: Sabarimala pilgrims should not go to Vavar Mosque: BJP MLA

Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.