Gadaga: ಕವಿತೆಗಳು ಮಾನವೀಯ ಅಂತಃಕರಣದ ಒರತೆಗಳಾಗಲಿ-ಜಯಂತ ಕಾಯ್ಕಿಣಿ

ಗದಗ ಪರಿಸರ ಸಾಹಿತ್ಯ ಸಂಸ್ಕೃತಿಗೆ ಪ್ರಾಚೀನ ಕಾಲದಿಂದಲೂ ಹೆಸರುವಾಸಿಯಾಗಿದೆ

Team Udayavani, Dec 14, 2023, 1:38 PM IST

Gadaga: ಕವಿತೆಗಳು ಮಾನವೀಯ ಅಂತಃಕರಣದ ಒರತೆಗಳಾಗಲಿ-ಜಯಂತ ಕಾಯ್ಕಿಣಿ

ಗದಗ: ಜೀವನಾನುಭವಗಳನ್ನು ಎರಕ ಹೊಯ್ದ ಕಾವ್ಯ ಬಹುಕಾಲ ಬಾಳುತ್ತದೆ. ಕವಿಯಾದವನು ಸುತ್ತಲಿನ ಜಗತ್ತನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಅನೇಕ ಸಂಗತಿಗಳು ಗೋಚರಿಸುತ್ತವೆ. ಅವುಗಳನ್ನೇ ವಸ್ತುವಾಗಿಸಿಕೊಂಡಾಗ ಸಾಮಾಜಿಕ
ಸಂಬಂಧದೊಂದಿಗೆ ಕವಿತೆ ಹೊಸೆಯಲ್ಪಡುತ್ತದೆ. ಇಂತಹ ಕವಿತೆಗಳು ಮಾನವೀಯ ಅಂತಃಕರಣದ ಒರತೆಗಳಾಗಿ ಗೋಚರಿಸುತ್ತವೆ ಎಂದು ಕವಿ, ಕತೆಗಾರ ಜಯಂತ ಕಾಯ್ಕಿಣಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅನ್ವೇಷಣೆ ಪ್ರಕಾಶನ ಗದಗ ಸಹಯೋಗದಲ್ಲಿ ನಗರದ ಡಿ.ಜಿ.ಎಂ. ಆಯುರ್ವೇದ
ಮಹಾವಿದ್ಯಾಲಯದಲ್ಲಿ ಜರುಗಿದ ಸಂತೋಷ ಅಂಗಡಿ ಅವರು ಬರೆದ ಭವದ ಅಗುಳಿ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಅಂತರಂಗದ ನುಡಿಗಳಿಗೆ ಅಕ್ಷರ ತೋರಣ ಕಟ್ಟುವ ಕಾರ್ಯ ಯುವ ಬರಹಗಾರರಿಂದ ಜರುಗಬೇಕು. ಭವದ ಅಗುಳಿ ಕವಿತಾ ಸಂಕಲನ ಮೂಲಕ ಸಂತೋಷ ಅಂಗಡಿಯವರು ಭರವಸೆಯ ಕವಿಯಾಗಿ ಹೊರ ಹೊಮ್ಮಿದ್ದಾರೆ. ಗಂಗಾಧರ ಚಿತ್ತಾಲ, ಸು.ರಂ.ಎಕ್ಕುಂಡಿ ಮತ್ತು ವಿ.ಜಿ. ಭಟ್ಟರ ಅವರ ಕವಿತೆಗಳನ್ನು ಜನ್ಮಶತಮಾನೋತ್ಸವ ಅಂಗವಾಗಿ ಮೆಲಕು ಹಾಕುವ ಕಾರ್ಯ ನಡೆಯಬೇಕು ಎಂದರು.

ವಿಮರ್ಶಕ ಜಿ.ಪಿ. ಬಸವರಾಜು ಮಾತನಾಡಿ, ಕಾವ್ಯ ಸಂಕ್ಷಿಪ್ತತೆ, ನಿಖರತೆ ಮತ್ತು ರೂಪಕಗಳನ್ನು ಹೊಂದಿ ಭಾಷಾ ಸೊಗಡಿನಿಂದ ಕೂಡಿರಬೇಕು. ಜೀವಪರ ಕಾಳಜಿ ಕವಿಯ ಧ್ಯೇಯವಾಗಿರಬೇಕು. ಭವದ ಅಗುಳಿಯ ಕವಿತೆಗಳು ಕಾವ್ಯದ ಜತೆಗೆ ಮುಖಾಮುಖಿ ಯಾಗುವ ಸಂದರ್ಭವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿವೆ ಎಂದರು.

ಅನ್ವೇಷಣೆ ಪ್ರಕಾಶನದ ಆರ್‌.ಜಿ. ಹಳ್ಳಿ ನಾಗರಾಜ ಮಾತನಾಡಿ, ಸಾಹಿತ್ಯ ಪತ್ರಿಕೆಗಳ ಸಂಖ್ಯೆ ಕಡಿಮೆಯಾಗಿವೆ. ಅನ್ವೇಷಣೆ ಸಾಹಿತ್ಯ
ಪತ್ರಿಕೆ ಓದುಗರಲ್ಲಿ ಸಾಹಿತ್ಯಾಭಿರುಚಿ ಬೆಳೆಸಿ ಚಿಂತನೆಗೆ ಹಚ್ಚುವಲ್ಲಿ ಕಾರ್ಯ ಮಾಡುತ್ತಿದೆ. ಯುವಬರಹಗಾರರನ್ನು ಗುರುತಿಸಿ
ಪ್ರೋತ್ಸಾಹಿಸುವ, ಕೃತಿ ಪ್ರಕಟಿಸುವ ಕಾರ್ಯ ಮಾಡುತ್ತಿದೆ. ಭರವಸೆಯ ಬರಹಗಾರರು ಕನ್ನಡ ಸಾಹಿತ್ಯವನ್ನು ಹೊಸದಿಕ್ಕಿನತ್ತ ಕೊಂಡೊಯ್ಯುವ ಕಾರ್ಯ ಮಾಡಬೇಕು ಎಂದರು.

ಚಂದ್ರಶೇಖರ ವಸ್ತ್ರದ ಮಾತನಾಡಿ, ಗದಗ ಪರಿಸರ ಸಾಹಿತ್ಯ ಸಂಸ್ಕೃತಿಗೆ ಪ್ರಾಚೀನ ಕಾಲದಿಂದಲೂ ಹೆಸರುವಾಸಿಯಾಗಿದೆ. ಈ
ಹಿನ್ನೆಲೆಯಲ್ಲಿ ಸಂತೋಷ ಅಂಗಡಿಯವರು ತಮ್ಮ ಕಾವ್ಯದ ಮೂಲಕ ಹೊಸ ಭರವಸೆಯ ಕವಿಯಾಗಿ ಹೊಮ್ಮಿರುವುದು ಉತ್ತಮ ಬೆಳವಣಿಗೆಯಾಗಿದೆ. ಮತ್ತಷ್ಟು ಮೌಲಿಕ ಕೃತಿಗಳು ಅವರಿಂದ ಹೊರ ಬರಲಿ ಎಂದು ಆಶಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಿಜಿಎಂ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಸಂತೋಷ ಬೆಳವಡಿ, ಕವಿ ಸಂತೋಷ ಅಂಗಡಿ, ರವಿ ದೇವರಡ್ಡಿ ಮಾತನಾಡಿದರು. ನಿರ್ಮಲಾ ಶೆಟ್ಟರ ನಿರೂಪಿಸಿದರು.

ಕೆ.ಎಚ್‌. ಬೇಲೂರ, ಅನ್ನದಾನಿ ಹಿರೇಮಠ, ದತ್ತಪ್ರಸನ್ನ ಪಾಟೀಲ, ಜಿ.ಬಿ. ಪಾಟೀಲ, ಎಚ್‌.ಬಿ. ಪೂಜಾರ, ರತ್ನಕ್ಕ ಪಾಟೀಲ, ಎಂ.ಜಿ. ಗಚ್ಚಣ್ಣವರ, ಆರ್‌.ಎಲ್‌. ಪೋಲಿಸಪಾಟೀಲ, ಬಿ.ಎ. ಕೆಂಚರಡ್ಡಿ, ಪುಂಡಲೀಕ ಕಲ್ಲಿಗನೂರ, ಟಿ.ಎಸ್‌.ಗೊರವರ, ನಿಂಗು ಸೊಲಗಿ, ಮಂಜುಳಾ ವೆಂಕಟೇಶಯ್ಯ, ಶಿಲ್ಪಾ ಮ್ಯಾಗೇರಿ, ಪದ್ಮಾ ಕಬಾಡಿ, ಬಸವರಾಜ ಗಣಪ್ಪನವರ ಇದ್ದರು. ಡಾ|ಚಿದಾನಂದ ಕಮ್ಮಾರ ಪರಿಚಯಿಸಿದರು. ಭಾಗ್ಯ ಪತ್ತಾರ ಹಾಡಿದರು. ಕಿಶೋರಬಾಬು  ನಾಗರಕಟ್ಟಿ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ವಂದಿಸಿದರು.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ

ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ

ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ

Gadag-Sp–Money

Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ

Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ವಂಚನೆಗೆ ಯತ್ನ

Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ವಂಚನೆಗೆ ಯತ್ನ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.