ಗಜೇಂದ್ರಗಡ:ವಾಣಿಜ್ಯ ಬೆಳೆ ಬೆನ್ನು ಹತ್ತಿದ ರೈತರು;ಅನ್ನ ದಾತನಿಗೆ ಮೇವು-ಹೊಟ್ಟಿನದ್ದೇ ಚಿಂತೆ
Team Udayavani, Mar 6, 2024, 2:53 PM IST
ಉದಯವಾಣಿ ಸಮಾಚಾರ
ಗಜೇಂದ್ರಗಡ: ತಾಲೂಕಿನಾದ್ಯಂತ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಏರುತ್ತಿದೆ. ಮುಂದೆ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಬಹುದೆಂಬ ಉದ್ದೇಶದಿಂದ ರೈತರು ಹೊಟ್ಟು-ಮೇವು ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ.
ಬಹುತೇಕ ಅನ್ನದಾತರು ಮಳೆಯಾಶ್ರಿತ ಭೂಮಿ ಹೊಂದಿದ್ದು, ಮಳೆಯಾಗುವಿಕೆಯ ಪ್ರಮಾಣದ ಮೇಲೆ ತಾವು ಪಾರಂಪರಿಕವಾಗಿ ಬೆಳೆಯುತ್ತಿರುವ ಶೇಂಗಾ, ಜೋಳ, ಬದಲಾಗಿ ಉಳ್ಳಾಗಡ್ಡಿ, ಮೆಣಸಿನಕಾಯಿ, ಹತ್ತಿ, ಗೋವಿನಜೋಳದಂತಹ
ವಾಣಿಜ್ಯ ಬೆಳೆ ಬೆಳೆಯಲು ಆರಂಭಿಸಿದ್ದಾರೆ. ಪರಿಣಾಮ ಜಾನುವಾರುಗಳ ಮುಖ್ಯ ಆಹಾರ ಶೇಂಗಾ ಹೊಟ್ಟು, ಜೋಳದ ಮೇವಿನ
ಕೊರತೆಯಾಗಿದೆ. ಇದರಿಂದ ಹೊಟ್ಟು-ಮೇವಿನ ಬೆಲೆ ಹೆಚ್ಚಾಗಿರುವುದು ರೈತ ಸಮೂಹವನ್ನು ಕಂಗೆಡಿಸಿದೆ.
ಕಳೆದ ವರ್ಷ ಶೇಂಗಾ ಹೊಟ್ಟು ಟ್ರಾಕ್ಟರ್ ವೊಂದಕ್ಕೆ 9 ಸಾವಿರ ಇತ್ತು. ಆದರೆ ಈ ವರ್ಷ 11 ರಿಂದ 12 ಸಾವಿರಕ್ಕೇರಿದೆ. ಅದರಂತೆ ಜೋಳದ ಮೇವು ಟ್ಯಾಕ್ಟರ್‌ವೊಂದಕ್ಕೆ 2500 ರಿಂದ 3 ಸಾವಿರ ಇತ್ತು. ಅದು ಕೂಡ 5 ಸಾವಿರಕ್ಕೇರಿದೆ. ಇನ್ನು ಹುರಳಿ ಹೊಟ್ಟು 8 ರಿಂದ 10 ಸಾವಿರವರೆಗೆ ಬೆಲೆ ಇದೆ. ಕೆಲ ನೀರಾವರಿ ಆಶ್ರೀತ ಜಮೀನಿನಲ್ಲಿ ಬೆಳೆದ ಜೋಳದ ಮೇವಿಗೆ ಭಾರೀ ಬೇಡಿಕೆ ಬಂದಿದೆ. ಪರಿಣಾಮ ರೈತ ದಿನಬೆಳಗಾದರೆ ಯಾವ ಹೊಲದಲ್ಲಿ ಜೋಳದ ರಾಶಿ ನಡೆದಿದೆ. ಮತ್ತಿನ್ಯಾವ ಹೊಲದಲ್ಲಿ ಶೇಂಗಾ, ಗೋಧಿ ರಾಶಿ ನಡೆದಿದೆ ಎಂದು ಹೊಲದಿಂದ ಹೊಲಕ್ಕೆ ಅಲೆದು ಹೊಟ್ಟು ಮೇವು ಖರೀದಿಸುವುದೇ ದೊಡ್ಡ ಸಾಹಸವಾಗಿದೆ.
ಈ ಬಾರಿ ಮೇವಿನ ಕೊರತೆ ಹೆಚ್ಚಿದೆ. ಎರಡು ಟ್ರಾಕ್ಟರ್ ಜೋಳದ ಮೇವು ಖರೀದಿ ಮಾಡೀವ್ರಿ, ಮನುಷ್ಯರು ಹೊಟ್ಟೆ ಪಾಡಿಗಾಗಿ
ಎಲ್ಲಾದರೂ ಹೋಗಿ ಏನನ್ನಾದರೂ ತಿಂದು ಬದುಕಬಹುದ್ರೀ, ಆದ್ರ ಬಾಯಿಲ್ಲದ ಬಸವಣ್ಣನಿಗೆ ಹೊಟ್ಟು ಮೇವು ಇಲ್ಲಂದ್ರ ಹ್ಯಾಂಗ ಬದಕ್ತಾವರ್ರೀ..ಊರೂರು ಅಲ್ದು ಮೇವು ಖರೀದಿಸೀವಿ.
ಪರಿಯಪ್ಪ ಬೆನಕಪ್ಪನವರ, ರೈತ. ಮೇವು ಮತ್ತು ಹೊಟ್ಟಿನ ಕೊರತೆ ಬಗ್ಗೆ ತಾಲೂಕಾಡಳಿತದ ಗಮನಕ್ಕೆ ಬಂದಿಲ್ಲ.
ಈಚೆಗೆ ಶಾಸಕ ಜಿ.ಎಸ್.ಪಾಟೀಲ ನೇತೃತ್ವದಲ್ಲಿ
ನಡೆದ ಸಭೆಯಲ್ಲಿ ತಾಲೂಕಿನಲ್ಲಿ ಬರ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಯಾಗದಂತೆ ಮೇವು ಲಭ್ಯತೆ ಇರುವ ಕಡೆ ಖರೀದಿಸಿ ಸಂಗ್ರಹಿಸಲು ಪಶು ಸಂಗೋಪನಾ ಇಲಾಖೆಗೆ ಸೂಚಿಸಲಾಗಿದೆ.
ಕಿರಣ್ ಕುಮಾರ್ ಕುಲಕರ್ಣಿ,ತಹಶೀಲ್ದಾರ್, ಗಜೇಂದ್ರಗಡ.
ಡಿ.ಜಿ. ಮೊಮಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.