ಅಪರೂಪದ “ಭಾರತೀಯ ರಣಹದ್ದು’ ಪ್ರತ್ಯಕ್ಷ
Team Udayavani, Oct 10, 2021, 5:59 AM IST
ಗಜೇಂದ್ರಗಡ: “ಅಕ್ಷಿಪಿಟ್ರಿಡೆ’ ಕುಟುಂಬಕ್ಕೆ ಸೇರಿದ ಅಳಿವಿನಂಚಿನಲ್ಲಿರುವ ಭಾರತೀಯ ರಣ ಹದ್ದು (“ಇಂಡಿಯನ್ ಲಾಂಗ್‌ಬಿಲ್ಡ್ ವಲ್ಚರ್’ ) ಗಜೇಂದ್ರಗಡ ಬೆಟ್ಟದ ಪ್ರದೇಶದಲ್ಲಿ ಕಂಡು ಬಂದಿದೆ.
ಇದು ಭಾರತ, ನೇಪಾಲ ಹಾಗೂ ಪಾಕಿಸ್ಥಾನ ಮೂಲದ ರಣಹದ್ದಾಗಿದ್ದು, “ಜಿಪ್ಸ್ ಇಂಡಿಕಸ್’ ಇದರ ವೈಜ್ಞಾನಿಕ ಹೆಸರು. 6.5ರಿಂದ 7.8 ಅಡಿ ಗಾತ್ರದ್ದಾಗಿದ್ದು, ರೆಕ್ಕೆ ಬಡಿಯದೇ ಆಕಾಶದಲ್ಲಿ ತಾಸು ಗಟ್ಟಲೆ ಹಾರಾಡಬಲ್ಲದು. ಇದರ ದೃಷ್ಟಿ ಮಾನವನಿಗಿಂದ 8 ಪಟ್ಟು ಸೂಕ್ಷ್ಮ.
3 ಅಡಿ ಎತ್ತರದ ಪ್ರಾಣಿಗಳನ್ನು ನಾಲ್ಕು ಮೈಲಿಯಷ್ಟು ಎತ್ತರದಿಂದಲೇ ಸ್ಪಷ್ಟವಾಗಿ ಗುರುತಿಸಬಲ್ಲವು. ಸತ್ತ, ಸಾಕು ಮತ್ತು ವನ್ಯ ಪ್ರಾಣಿಗಳು ಇವುಗಳ ಆಹಾರ.
ವಿಶೇಷತೆ
ಇವು 12 ಕಿ.ಮೀ.ಗಿಂತಲೂ ಎತ್ತರಕ್ಕೆ ಹಾರುತ್ತವೆ. ತಾಸಿಗೆ 80 ಕಿ.ಮೀ. ವೇಗದಲ್ಲಿ ಸಾವಿರಾರು ಕಿ.ಮೀ. ಸುತ್ತಳತೆಯಲ್ಲಿ ಗಸ್ತು ಗಂಟೆಗೆ 120 ಕಿ.ಮೀ. ವೇಗದಲ್ಲಿ ನೆಲಕ್ಕಿಳಿಯುತ್ತವೆ. ಇವು ಬೆಟ್ಟಗುಡ್ಡಗಳ ಎತ್ತರದ ಸುರಕ್ಷಿತ ಬಂಡೆಗಳ ಮೇಲೆ ಹಾಗೂ ಮರದಲ್ಲಿ ಗೂಡು ನಿರ್ಮಿಸುತ್ತವೆ.
ಇದನ್ನೂ ಓದಿ:ಶಿಕ್ಷಕ, ಪದವೀಧರ ಕ್ಷೇತ್ರಗಳ ಚುನಾವಣೆ: ಬಿಜೆಪಿ ಉಸ್ತುವಾರಿಗಳ ನೇಮಕ
ಗಜೇಂದ್ರಗಡ ಸೇರಿ ಸುತ್ತಲಿನ ಬೆಟ್ಟಗಳಲ್ಲಿ ಬಹು ವರ್ಷಗಳ ಬಳಿಕ ರಣಹದ್ದು ಕಂಡು ಬಂದಿರುವುದು ಸಂತಸ ತಂದಿದೆ. ಅಳಿವಿನ ಅಂಚಿನಲ್ಲಿರುವ ಭಾರತೀಯ ಮೂಲದ ರಣಹದ್ದು ಸಂತತಿ ಉಳಿವಿಗೆ ನಮ್ಮೆಲ್ಲರ ಸಹಕಾರ ಮುಖ್ಯವಾಗಿದೆ.
-ಮಂಜುನಾಥ ಎಸ್. ನಾಯಕ್,
ಜೀವ ವೈವಿಧ್ಯ ಸಂಶೋಧಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ
Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.