ಪ್ರತಿ ಗ್ರಾಪಂಗೊಂದು ತಾಪಂ ಕ್ಷೇತ್ರ
Team Udayavani, Mar 27, 2021, 4:08 PM IST
ಗಜೇಂದ್ರಗಡ: ಕೋಟೆ ನಾಡು ಖ್ಯಾತಿಯ ನೂತನ ಗಜೇಂದ್ರಗಡ ತಾಲೂಕಿನಲ್ಲಿ ತಾಪಂ-ಜಿಪಂಕ್ಷೇತ್ರ ಪುನರ್ ವಿಂಗಡಣೆ ನಂತರ ತಾಲೂಕಿನ ಪ್ರತಿ ಗ್ರಾಪಂಗೊಂದು ತಾಪಂ ಕ್ಷೇತ್ರಗಳು ಲಭಿಸಿವೆ.
ಜಿಲ್ಲೆಯಲ್ಲಿಯೇ ಎರಡನೇ ದೊಡ್ಡ ಪಟ್ಟಣ ಖ್ಯಾತಿ ಜೊತೆಗೆ ವಾಣಿಜ್ಯ ಕ್ಷೇತ್ರದಲ್ಲಿತನ್ನದೇಯಾದ ದಾಪುಗಾಲು ಇಡುತ್ತಿರುವತಾಲೂಕಿಗೆ 42 ಗ್ರಾಮಗಳಿದ್ದು, ಒಟ್ಟು 11 ಗ್ರಾಮ ಪಂಚಾಯತಿಗಳು ಒಳಪಡಲಿವೆ. ರಾಜ್ಯದಲ್ಲಿ ನೂತನತಾಲೂಕುಗಳಾಗಿ ರಚನೆ ಮಾಡಿದ ಬಳಿಕ ರಾಜ್ಯ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆ ಮಾಡಲಾಗಿದೆ. ಈಗಾಗಲೇ ಜಿಪಂ-ತಾಪಂಚುನಾವಣೆ ಸಮೀಪಿಸುತ್ತಿದ್ದು, ಕ್ಷೇತ್ರಗಳನ್ನು ಹೆಚ್ಚಿಸಲಾಗಿದೆ.
ಗ್ರಾಪಂಗೊಂದು ತಾಪಂ ಕ್ಷೇತ್ರ: ಗಜೇಂದ್ರಗಡ ತಾಲೂಕಿನಲ್ಲಿ ಮಳೆಯಾಶ್ರಿತ ರೈತರೇ ಹೆಚ್ಚಾಗಿದ್ದು, ಕೃಷಿ ಚಟುವಟಿಕೆಯೇಮೂಲ ಕಸುಬನ್ನಾಗಿಸಿಕೊಂಡು ಬದುಕುಸಾಗಿಸುತ್ತಿದ್ದಾರೆ. ಹೀಗಾಗಿ ತಾಲೂಕಿನಲ್ಲಿಗೊಗೇರಿ, ಗುಳಗುಳಿ, ಹಾಳಕೇರಿ, ಕುಂಟೋಜಿ,ಲಕ್ಕಲಕಟ್ಟಿ, ಮುಶಿಗೇರಿ, ನಿಡಗುಂದಿ, ರಾಜೂರ, ರಾಮಾಪುರ, ಶಾಂತಗೇರಿ ಹಾಗೂ ಸೂಡಿಗ್ರಾಪಂ ಸೇರಿ ಒಟ್ಟು 11 ಗ್ರಾಪಂಗಳಿವೆ. ನೂತನತಾಲೂಕು ಕೇಂದ್ರವಾಗಿರುವುದರಿಂದ ಆಡಳಿತ 11 ತಾಲೂಕು ಪಂಚಾಯತ್ ಕ್ಷೇತ್ರಗಳನ್ನಾಗಿ ವಿಂಗಡನೆ ಮಾಡಲಾಗಿದೆ.
ನೂತನ ತಾಲೂಕಿಗಿಲ್ಲ ಹೊಸ ಜಿಪಂ ಕ್ಷೇತ್ರ: ಹಿಂದಿನಿಂದಲೂ ಗಜೇಂದ್ರಗಡ ಭಾಗಕ್ಕೆ ಕೇವಲ ನಿಡಗುಂದಿ ಮತ್ತು ಸೂಡಿ ಜಿಪಂ ಕ್ಷೇತ್ರಗಳನ್ನುಮಾತ್ರ ನೀಡಲಾಗಿತ್ತು. ಕ್ಷೇತ್ರ ಪುನರ್ ವಿಂಗಡನೆಬಳಿಕ ಗಜೇಂದ್ರಗಡ ತಾಲೂಕಿಗೆ ಇನ್ನೊಂದುಜಿಪಂ ಕ್ಷೇತ್ರ ಒಲಿಯಲಿದೆ ಎಂಬ ಆಶಾಭಾವನೆಈ ಭಾಗದ ಜನರಲ್ಲಿತ್ತು. ಆದರೆ ಈ ಭಾಗಕ್ಕೆ ಹೊಸಜಿಪಂ ಕ್ಷೇತ್ರಗಳ ಭಾಗ್ಯ ದೊರೆಯದಿರುವುದುನಿರಾಸೆಗೆ ಕಾರಣವಾಗಿದೆ. ಆ ಮೂಲಕ ಕ್ಷೇತ್ರಪುನರ್ ವಿಂಗಡನೆಯಲ್ಲಿ ಗಜೇಂದ್ರಗಡತಾಲೂಕಿಗೆ ಅನ್ಯಾಯವಾಗಿದೆ ಎಂಬುದು ಇಲ್ಲಿನ ಜನರ ಕೂಗಾಗಿದೆ.
ನಿಡಗುಂದಿ: ಒಕ್ಕಲುತನದ ಹುಟ್ಟುವಳಿಯಂದೇ ಖ್ಯಾತಿ ಪಡೆದ ತಾಲೂಕಿನ ನಿಡಗುಂದಿ ಜಿಪಂ ಕ್ಷೇತ್ರಕ್ಕೆಒಟ್ಟು 33,735 ಮತದಾರರಿದ್ದು, ನಿಡಗುಂದಿ,ನಿಡಗುಂದಿ ಕೊಪ್ಪ, ಹಾಳಕೇರಿ, ಗೋಗೇರಿ,ನಾಗರಸಕೊಪ್ಪ, ನಾಗರಸಕೊಪ್ಪ ತಾಂಡಾ,ಮಾಟರಂಗಿ, ಕುಂಟೋಜಿ, ಮ್ಯಾಕಲಝರಿ,ಬೆಣಚಮಟ್ಟಿ, ಗೌಡಗೇರಿ, ಜಿಗೇರಿ, ವದೆಗೋಳ,ರಾಮಾಪುರ, ಹೊಸರಾಮಾಪುರ, ಹಿರೇಕೊಪ್ಪ, ಚಿಲಝರಿ, ಪುರ್ತಗೇರಿ, ವೀರಾಪುರ,ಕೊಡಗಾನೂರ, ರಾಜೂರ, ಕಾಲಕಾಲೇಶ್ವರ,ಬೈರಾಪುರ, ಬೈರಾಪುರ ತಾಂಡಾ, ದಿಂಡೂರ ಸೇರಿಒಟ್ಟು 25 ಗ್ರಾಮಗಳು 6 ಗ್ರಾಪಂಗಳು ನಿಡಗುಂದಿ ಜಿಪಂ ವ್ಯಾಪ್ತಿಗೆ ಒಳಪಡಲಿವೆ.
ಸೂಡಿ: ರಾಜಕೀಯ ಜಿದ್ದಾ ಜಿದ್ದಿನ ಕಣವಾಗಿರುವಸೂಡಿ ಜಿಪಂ ಕ್ಷೇತ್ರಕ್ಕೆ ಒಟ್ಟು 30,428ಮತದಾರರಿದ್ದಾರೆ. ಸೂಡಿ, ದ್ಯಾಮುಣಸಿ, ಶಾಂತಗೇರಿ, ಸರ್ಜಾಪುರ, ಬೊಮ್ಮಸಾಗರ,ಮುಶಿಗೇರಿ, ನೆಲ್ಲೂರ, ನೆಲ್ಲೂರ ಪ್ಯಾಟಿ, ಚಿಕ್ಕಳಗುಂಡಿ, ಲಕ್ಕಲಕಟ್ಟಿ, ನಾಗೇಂದ್ರಗಡ,ಕಲ್ಲಿಗನೂರ, ಗುಳಗುಳಿ, ಹಿರೇಅಳಗುಂಡಿ,ಬೇವಿನಕಟ್ಟಿ, ಅಮರಗಟ್ಟಿ, ರುದ್ರಾಪುರ ಸೇರಿ17 ಗ್ರಾಮಗಳು 5 ಗ್ರಾಪಂಗಳು ಸೂಡಿ ಜಿಪಂಗೆಒಳಪಡಲಿವೆ. ಕ್ಷೇತ್ರ ಪುನರ್ ವಿಂಗಡನೆಯಾದನಂತರ ಜಿಪಂ-ತಾಪಂ ಕ್ಷೇತ್ರಗಳು ಹೆಚ್ಚಾಗಿದ್ದು,ಈ ಬಾರಿಯ ಚುನಾವಣೆ ತೀವ್ರ ಪೈಪೋಟಿಗೆಸಾಕ್ಷಿಯಾಗುವುದರಲ್ಲಿ ಯಾವುದೇ ಸಂದೇಹವೇ ಇಲ್ಲ.
ನಿಡಗುಂದಿ ಜಿಪಂಗೆ ರಾಜೂರ ಸೇರ್ಪಡೆ : ಈ ಹಿಂದೆ ರಾಜೂರ ಗ್ರಾಪಂ ನಿಡಗುಂದಿಜಿಪಂ ಕ್ಷೇತ್ರದಲ್ಲಿತ್ತು. ಆದರೆ ಜಿಪಂ ಕ್ಷೇತ್ರಪುನರ್ ವಿಂಗಡನೆ ಸಂದರ್ಭದಲ್ಲಿ ರಾಜೂರ ಗ್ರಾಮ ಪಂಚಾಯತಿಯನ್ನು ಸೂಡಿ ಜಿಪಂ ಕ್ಷೇತ್ರಕ್ಕೆ ಸೇರ್ಪಡೆ ಮಾಡಲಾಗಿತ್ತು. ಇದನ್ನು ವಿರೋ ಧಿಸಿ ಗ್ರಾಪಂ ವ್ಯಾಪ್ತಿಯ ಜನರು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದರು. ಅದರನ್ವಯ ಇದೀಗ ಮತ್ತೆ ರಾಜೂರ ನಿಡಗುಂದಿ ಜಿಪಂಗೆ ಸೇರ್ಪಡೆಯಾಗಿದೆ.
-ಡಿ.ಜಿ. ಮೋಮಿನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
Gadaga: ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಪೊಲೀಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.