ಗ್ರಾಪಂ ಉಪ ಚುನಾವಣೆ ಫಲಿತಾಂಶ ಪ್ರಕಟ
ಜಿಗಳೂರ-ಮಾಡಲಗೇರಿ ವಾರ್ಡ್‌ಗಳಿಂದ 6 ಅಭ್ಯರ್ಥಿಗಳ ಆಯ್ಕೆ
Team Udayavani, May 23, 2022, 4:27 PM IST
ರೋಣ: ತಾಲೂಕಿನ ಹೊಸಳ್ಳಿ ಗ್ರಾಪಂ ವ್ಯಾಪ್ತಿಯ ಜಿಗಳೂರ ಗ್ರಾಮದ 5 ಸ್ಥಾನಗಳಿಗೆ ಹಾಗೂ ಮಾಡಲಗೇರಿ ಗ್ರಾಮದ 1 ಸ್ಥಾನಕ್ಕೆ ಶುಕ್ರವಾರ ಗ್ರಾಪಂ ಉಪ ಚುನಾವಣೆಯಲ್ಲಿ, ಜಿಗಳೂರ ಗ್ರಾಮದ 1ನೇ ವಾರ್ಡ್‌ನಿಂದ 3 ಅಭ್ಯರ್ಥಿಗಳು ಮತ್ತು 2ನೇ ವಾರ್ಡ್ ನಿಂದ 2 ಅಭ್ಯರ್ಥಿಗಳು ಹಾಗೂ ಮಾಡಲಗೇರಿ ಗ್ರಾಮದ ಒಬ್ಬ ಅಭ್ಯರ್ಥಿ ಗೆಲುವಿನ ನಗೆ ಬೀರಿದರು.
ಗ್ರಾಪಂ ಚುನಾವಣೆಯ ಮತ ಏಣಿಕೆ ಕಾರ್ಯ ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ರವಿವಾರ ನಡೆಯಿತು. ಜಿಗಳೂರ ಗ್ರಾಮದ 1 ನೇ ವಾರ್ಡನಿಂದ ರೇಖಾ ಮಾದರ ( ಎಸ್‌ಸಿ ಮೀಸಲು) 215 ಮತಗಳು, ಶೋಭಾ ಗೊಟಗೊಂಡ (ಹಿಂದುಳಿದ ಅ ವರ್ಗ) 312 ಮತಗಳು ಮತ್ತು ಶಿವಯೋಗಿ ಥಡಿ (ಸಾಮಾನ್ಯ) 276 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.
ಪ್ರತಿಸ್ಪರ್ಧಿಗಳಾದ ಈರನಗೌಡ ಶಿವಯೋಗಿ(179 ಮತ), ಕಲ್ಲನಗೌಡ ಗೌಡರ( 60 ಮತ), ಭೀಮವ್ವ ಶೀಪ್ರಿ (227), ಯಲ್ಲವ್ವ ಮಾದರ(123), ಶೀತವ್ವ ಮಾದರ( 155), ಮತ್ತು ಶೇಖರಪ್ಪ ಗೋಲಪ್ಪನವ ಇವರು 117 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಒಟ್ಟು ಚಲಾವಣೆಗೊಂಡ 612 ಮತಗಳಲ್ಲಿ 22 ಮತಗಳು ತಿರಸ್ಕೃತಗೊಂಡಿವೆ. 2 ನೇ ವಾರ್ಡನಿಂದ ಅನ್ನಪೂರ್ಣ ಫಕೀರಪ್ಪ ವೀರಗಾರ(ಎಸ್‌ಟಿ ಮಹಿಳೆ) ಇವರು 253 ಮತಗಳು ಹಾಗೂ ಪ್ರವೀಣ ಬಸೇವಡೆಯರ(ಸಾಮಾನ್ಯ) 332 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದಾರೆ. ಪ್ರತಿಸ್ಪರ್ಧಿ ಅಂದನಗೌಡ ನರೇಗಲ್ಲ(35 ಮತಗಳು), ಬಸವ್ವ ತಳವಾರ(208) ಮತ್ತು ಶರಣಪ್ಪ ಶೀಪ್ರಿ(235 ಮತಗಳು) ಪರಾಭವಗೊಂಡಿದ್ದಾರೆ. ಒಟ್ಟು ಚಲಾವಣೆಗೊಂಡ 594ರಲ್ಲಿ 27 ಮತಗಳು ತಿರಸ್ಕೃತಗೊಂಡಿವೆ. ಇನ್ನು ಮಾಡಲಗೇರಿ ಗ್ರಾಮದ ಭೀಮವ್ವ ಅಮರಪ್ಪ ಪೂಜಾರ 315 ಮತಗಳನ್ನು ಪಡೆದ ಗೆಲುವು ಸಾಧಿಸಿದ್ದಾರೆ.
ಪ್ರತಿಸ್ಪರ್ಧಿಹನಮವ್ವ ರಂಗಪ್ಪ ಪೂಜಾರ 304 ಮತಗಳನ್ನು ಪಡೆದು 11 ಮತಗಳ ಅಂತರದಲ್ಲಿ ಸೋಲೊಪ್ಪಿಕೊಂಡರು. ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದಂತೆ ಅಭಿಮಾನಿಗಳು ಗೆದ್ದ ಅಭ್ಯರ್ಥಿಗಳನ್ನು ಹೆಗಲ ಮೇಲೆ ಹೊತ್ತು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಸಂಭ್ರಮಾಚರಣೆಯಲ್ಲಿ ಮಾಡಲಗೇರಿ ಬಿಜೆಪಿ ಮುಖಂಡರಾದ ವೆಂಕನಗೌಡ ಗೋವಿಂದಗೌಡ್ರ, ಶರಣಪ್ಪಗೌಡ ಹಿರೇಸಕ್ಕರಗೌಡ್ರ, ರುದ್ರಗೌಡ್ರ ಅಮಾತಿಗೌಡ್ರ, ಮುತ್ತುರಾಜ ಹಿರೇಸಕ್ಕರಗೌಡ್ರ, ಶಿವನಗೌಡ ತಿಪ್ಪನಗೌಡ್ರ, ಶಿವಪುತ್ರಪ್ಪ ಭಾವಿ, ಶಿವಶಂಕರಪ್ಪ ಕುರಬನಾಳ, ಭರಮಗೌಡ ರಾಯನಗೌಡ್ರ, ಶರಣಪ್ಪ ಶಿರಗುಂಪಿ, ಹುಲ್ಲಪ್ಪ ಕೆಂಗಾರ, ಗುರುನಾಥ ಹಿರೇಸಕ್ಕರಗೌಡ್ರ, ಶಿವನಗೌಡ ಅಮಾತಿಗೌಡ್ರ, ಮೈಲಾರಪ್ಪ ಮಾದರ, ಶಂಕರಗೌಡ ರಾಯನಗೌಡ್ರ, ಪರುತಗೌಡ ಅಮಾತಿಗೌಡ್ರ, ಬಸನಗೌಡ ಹಿರೇಸಕ್ಕರಗೌಡ್ರ, ಮಲ್ಲಪ್ಪ ಭಾವಿ, ಬಸನಗೌಡ ಅಮಾತಿಗೌಡ್ರ, ಮಹಿಳಾ ಕಾರ್ಯಕರ್ತೆಯರಾದ ಸುಶೀಲವ್ವ ಕುರಬನಾಳ, ಶಂಕ್ರವ್ವ ಹಿರೇಸಕ್ಕರಗೌಡ್ರ ಸೇರಿದಂತೆ ಅನೇಕ ಭಾಗವಹಿಸಿದ್ದರು.
ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಸವರಾಜ ಅಂಗಡಿ ಅವರು ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಮತ ಏಣಿಕೆ ಕಾರ್ಯ ಶಾಂತಯುತವಾಗಿ ಜರುಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
Gadaga: ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಪೊಲೀಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.