ಗ್ರಾಮ ವಿಕಾಸ ಯೋಜನೆ ಕಾಮಗಾರಿಗೆ ಚಾಲನೆ
Team Udayavani, Jan 2, 2020, 2:39 PM IST
ಮುಳಗುಂದ: ಸಮೀಪದ ಶಿರುಂಜ, ಯಲಿಶಿರೂರ ಗ್ರಾಮಗಳಲ್ಲಿ ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಚ್.ಕೆ. ಪಾಟೀಲ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಸ್ತೆ, ಚರಂಡಿ, ಸಮುದಾಯ ಭವನ, ಶೌಚಾಲಯ, ಶಾಲಾ ಸುಧಾರಣೆ ಸೇರಿದಂತೆ ವಿವಿಧ ಅಗತ್ಯ ಕಾಮಗಾರಿಗಳನ್ನು ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಶಿರುಂಜ, ಯಲಿಶಿರೂರ ಗ್ರಾಮಗಳನ್ನು ಸಾರ್ವಜನಿಕರ ಜವಾಬ್ದಾರಿಯುತ ಸಹಭಾಗಿತ್ವದಲ್ಲಿ ನಿಗದಿತ ಸಮಯದಲ್ಲಿ ಕೈಗೊಳ್ಳಬೇಕು ಎಂದರು.
ಶಿರುಂಜ ಗ್ರಾಮದ ಶಾಲಾ ಆವರಣದಲ್ಲಿ ಭೂಮಿಪೂಜೆ ನೆರವೇರಿಸಲಾಯಿತು. ವಾಸಣ್ಣ ಕುರಡಗಿ, ಹನಮಂತಪ್ಪ ಪೂಜಾರ, ಬಿ.ಆರ್. ದೇವರಡ್ಡಿ, ರವಿ ಮೂಲಿಮನಿ, ಚಂದ್ರಪ್ಪ ಕಪ್ಪತ್ತನವರ, ಭೀಮಪ್ಪ ಲೆಂಕೆಣ್ಣವರ, ಮುತ್ತಪ್ಪ ಡಂಬ್ರಳ್ಳಿ, ಬಿಸ್ಮಿಲ್ಲಾ ನದಾಫ್, ಶರೀಪಸಾಬ್ ನದಾಫ್, ಮಲ್ಲಪ್ಪ ಕಪ್ಪತ್ತನವರ, ಉಮೇಶ ಬೀಡನಾಳ, ಈರಪ್ಪ ವಡ್ಡರ, ಮಲ್ಲಪ್ಪ ಬಂಡಿವಡ್ಡರ, ಈರಮ್ಮ ಬಂಡಿವಡ್ಡರ, ಗೌರಮ್ಮ ಕೊಂಡಿಕೊಪ್ಪ, ಪದ್ದವ್ವ ಲೆಂಕೆಣ್ಣವರ, ಫಕೀರಪ್ಪ ದಾನಿ, ಅಮರೇಶ ಲೆಂಕೆಣ್ಣವರ, ಮುದಕನಗೌಡ ಪಾಟೀಲ, ಸತ್ಯಪ್ಪ ಬುರ್ಲಿ ಸೇರಿದಂತೆ ಇತರರು ಇದ್ದರು.
ಯಲಿಶಿರೂರ ಗ್ರಾಮದಲ್ಲಿ ಜರುಗಿದ ಗ್ರಾಮ ವಿಕಾಸ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹನಮಂತಪ್ಪ ಪೂಜಾರ, ಗಂಗಯ್ಯ ಹಿರೇಮಠ, ಎನ್.ಎಂ. ಪಾಟೀಲ, ಸುರೇಶ ಹೊಸಮನಿ, ಸಾವಿತ್ರವ್ವ ಸುಂಕದ, ಶರಣಪ್ಪ ಡೋಣಿ, ಪರಶುರಾಮ ಹೂಗಾರ, ಮಂಜು ಭಜಂತ್ರಿ, ಕೋಟ್ರೇಶ ಕುಂದ್ರಳ್ಳಿ, ದ್ಯಾಮಣ್ಣ ಭಜಂತ್ರಿ, ಮಲ್ಲಪ್ಪ ಬಳ್ಳಾರಿ, ಬಸವಣ್ಣೆಪ್ಪ ಬೆಟಗೇರಿ, ಗೋವಿಂದರಡ್ಡಿ ಕಿಲಬನವರ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.