ಜಿಲ್ಲಾಡಳಿತ ಭವನಕ್ಕೆ ಹಸಿರು ಮೆರಗು


Team Udayavani, Mar 23, 2021, 12:28 PM IST

ಜಿಲ್ಲಾಡಳಿತ ಭವನಕ್ಕೆ ಹಸಿರು ಮೆರಗು

ಗದಗ: ರಸ್ತೆ ಅಗಲೀಕರಣದಲ್ಲಿ ತೆರವುಗೊಂಡಿದ್ದ ಹಳೇ ಕಲ್ಲಿನ ಕಂಬಗಳನ್ನು ಪುನರ್‌ ಸ್ಥಾಪನೆಯೊಂದಿಗೆ ಹಸಿರೀಕರಣಕ್ಕೆ ಒತ್ತು ನೀಡಿದ್ದರಿಂದ ಜಿಲ್ಲಾಡಳಿತಭವನದ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ.ಈಚಲ ಗಿಡ ಮಾದರಿಯ ಡೇಟ್‌ ಫಾರ್ಮ್ಸಸಿಗಳನ್ನು ನೆಟ್ಟಿದ್ದರಿಂದ ಜಿಲ್ಲಾಡಳಿತ ಭವನದ ಮೆರಗು ಹೆಚ್ಚಿದೆ.

ಜಿಲ್ಲಾಡಳಿತ ಮತ್ತು ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ಹೊರಭಾಗದಲ್ಲಿ ಹಸಿರೀಕರಣಕ್ಕೆ ಒತ್ತು ನೀಡಲಾಗಿದೆ. ಈ ಹಿಂದೆ ಕಾಂಪೌಂಡ್‌ ಹೊರ ಭಾಗದಲ್ಲಿ ಜಾಲಿ ಗಿಡ ಬೆಳೆಯುತ್ತಿದ್ದರಿಂದ ಜಿಲ್ಲಾಡಳಿತ ಭವನದ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದವು. ಇದನ್ನುತಪ್ಪಿಸಲು ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ಸುಮಾರು 300 ಮೀಟರ್‌ ಉದ್ದ 15 ಅಡಿಯಷ್ಟುಅಗಲದಷ್ಟು ಇಳಿಜಾರು ಮಾದರಿಯಲ್ಲಿ ಹುಲ್ಲುಗಾವಲು ಬೆಳೆಸಲಾಗಿದೆ. ಜತೆಗೆ ಜಿಲ್ಲಾಡಳಿತಭವನದ ಮುಖ್ಯ ಗೇಟ್‌ಗಳ ಎರಡೂ ಬದಿಯಲ್ಲಿಅಲಂಕಾರಿಕ ಗಿಡಗಳನ್ನು ಬಳಸಿ “ಜಿಲ್ಲಾಡಳಿತಭವನ ಗದಗ’ ಎಂದು ಬರೆಯಲಾಗಿದೆ. ಗಾರ್ಡನ್‌ ಸುತ್ತಲೂ ವಿವಿಧ ಗಿಡ ಬೆಳೆಸಿರುವುದು ದಾರಿ ಹೋಕರಿಗೆ ಮುದ ನೀಡುತ್ತಿವೆ.

ಹಳೇ ಕಲ್ಲಿನ ಕಂಬಗಳಿಗೆ ಮರು ಜೀವ: ಮಹಾತ್ಮ ಗಾಂಧಿ  ವೃತ್ತ, ಬೆಟಗೇರಿ ಹೆಲ್ತ್‌ ಕ್ಯಾಂಪ್‌ನಲ್ಲಿದಶಕಗಳ ಹಿಂದೆ ಕೂಡು ರಸ್ತೆಗಳ ನಾಲ್ಕೂ ಬದಿಯಲ್ಲಿ ನಗರದ ಆಕರ್ಷಣೆಗಾಗಿ ತಲಾ 2 ಬೃಹತ್‌ ಕಲ್ಲಿನ ಕಂಬ ನಿಲ್ಲಿಸಲಾಗಿತ್ತು. ಆದರೆ ಇತ್ತೀಚೆಗೆ ನಗರದ ಭೂಮರೆಡ್ಡಿ ವೃತ್ತದಿಂದಬೆಟಗೇರಿ ಸಿಎಸ್‌ಐ ಆಸ್ಪತ್ರೆ ಸಮೀಪದವರೆಗೆರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಲಾಗಿದೆ. ಈ ಮಾರ್ಗದಲ್ಲಿರುವ ಗಾಂಧಿ ವೃತ್ತ ಮತ್ತು ಬೆಟಗೇರಿಯ ಅಂಬಾಭವಾನಿ ವೃತ್ತದಲ್ಲಿನ ಕಲ್ಲಿನಬೃಹತ್‌ ಕಂಬಗಳು ನೆಲಕ್ಕುರುಳಿದ್ದವು. ಇದನ್ನು ಗಮನಿಸಿದ್ದ ಹಿಂದಿನ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ್‌ ಎಸ್‌. ಎನ್‌., ಈ ಕಲ್ಲಿನ ಕಂಬಗಳ ಪುನರ್‌ ಬಳಕೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಎಂ.

ಸುಂದರೇಶ ಬಾಬು ಈ ಬಗ್ಗೆ ವಿಶೇಷ ಆಸಕ್ತಿ ತೋರಿದ್ದರಿಂದ ಅನುಷ್ಠಾನಕ್ಕೆ ಬಂದಿದೆ.ಸುಮಾರು 10 ರಿಂದ 15 ಅಡಿ ಎತ್ತರದಪುರಾತನ ಕಲ್ಲುಗಳನ್ನು ಮರು ಕೆತ್ತನೆ ಮೂಲಕ ಅವುಗಳ ಅಂದ ಹೆಚ್ಚಿಸಲಾಗಿದೆ. ಭವನದ ಪ್ರವೇಶ ದ್ವಾರದಲ್ಲಿ ಮರು ಪ್ರತಿಷ್ಠಾಪಿಸಲಾಗಿದೆ.ಈ ಮೂಲಕ ಕಂಬಗಳು ಖಾಸಗಿಯವರಪಾಲಾಗುವುದನ್ನು ತಪ್ಪಿಸಲಾಗಿದೆ. ಜತೆಗೆ ದಶಕಗಳಹಳೆಯ ಕಂಬಗಳಿಗೆ ಮರುಜೀವ ನೀಡಿದೆ. ಕೋಟೆಮಾದರಿಯಲ್ಲಿರುವ ಜಿಲ್ಲಾಡಳಿತ ಭವನದಕಟ್ಟಡಕ್ಕೆ ಐತಿಹಾಸಿಕ ಸ್ಪರ್ಶ ನೀಡಿದಂತಾಗಿದ್ದು, ಎಲ್ಲರ ಕಣ್ಮನ ಸೆಳೆಯುತ್ತಿದೆ.

ಮರಗಳ ಸ್ಥಳಾಂತರ :

ಈ ಹಿಂದೆ ಹೆದ್ದಾರಿಗಳಲ್ಲಿ ರಸ್ತೆ ಅಗಲೀಕರಣದಲ್ಲಿ ಕೊಡಲಿ ಪೆಟ್ಟಿಗೆ ಬಲಿಯಾಗುವ ಬೃಹತ್‌ ಮರಗಳ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದ ಜಿಲ್ಲಾಡಳಿತ ರಾಷ್ಟ್ರಮಟ್ಟದ ಪುರಸ್ಕಾರಕ್ಕೂಪಾತ್ರವಾಗಿತ್ತು. ಇದೀಗ ಜಿಲ್ಲಾಡಳಿತ ಭವನದ ಸೌಂದರ್ಯವೃದ್ಧಿಗಾಗಿ ಮತ್ತೂಮ್ಮೆ ಮರಗಳ ಸ್ಥಳಾಂತರ ಸಾಹಸಕ್ಕೆಕೈ ಹಾಕಿ, ಸೈ ಎನಿಸಿಕೊಂಡಿದೆ. ಬೇರೆಡೆ ಬೆಳೆದು ನಿಂತಿದ್ದಬೃಹತ್‌ ಮರ ತಂದು ಜಿಲ್ಲಾಡಳಿತ ಭವನದೆದುರು ಮರುನೆಡಲಾಗಿದೆ. ಐತಿಹಾಸಿಕ ಮಾದರಿಯಲ್ಲಿ ಬೃಹತ್‌ ಕಲ್ಲಿನಕಂಬಗಳೊಂದಿಗೆ ಬೃಹತ್‌ ಮರಗಳು ಜಿಲ್ಲಾಡಳಿತ ಭವನದಸೌಂದರ್ಯ ಇಮ್ಮಡಿಗೊಳಿಸಿವೆ. ಜಿಲ್ಲಾಡಳಿತದ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ.

ಬೆಟಗೇರಿ ಅಂಬಾ ಭವಾನಿ ವೃತ್ತ ಹಾಗೂ ನಗರದ ಮಹಾತಾ ¾ಗಾಂಧಿ ವೃತ್ತದಲ್ಲಿ ಸುಮಾರು ಏಳೆಂಟು ದಶಕಗಳ ಹಿಂದೆ ಸುಂದರ ಕಲಾಕೃತಿಯ ಒಟ್ಟು 14 ಕಂಬ ಸ್ಥಾಪಿಸಲಾಗಿತ್ತು. ಆದರೆ ರಸ್ತೆ ಅಗಲೀಕರಣದಿಂದ ಅವು ನೆಲಕ್ಕುರುಳಿದ್ದವು. ಜಿಲ್ಲಾಧಿ ಕಾರಿ ಎಂ. ಸುಂದರೇಶ ಬಾಬು ವಿಶೇಷಪ್ರಯತ್ನದಿಂದ ಅವುಗಳನ್ನು ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರಿಸಲಾಗಿದೆ. ಜತೆಗೆ ಹಸಿರೀಕರಣಕ್ಕೆ ಒತ್ತು ನೀಡಿದ್ದರಿಂದ ಜಿಲ್ಲಾಡಳಿತ ಭವನ ಮತ್ತಷ್ಟು ಆಕರ್ಷಕವಾಗಿದೆ. ಇದಕ್ಕಾಗಿ 16 ಲಕ್ಷ ರೂ. ವೆಚ್ಚಮಾಡಲಾಗಿದೆ. ಮುಂದಿನ ದಿನಗಳಲ್ಲಿ ಭವನದ ಒಳಾಂಗಣದಲ್ಲೂ ಹಸಿರೀಕರಣ ಕಾಮಗಾರಿ ಕೈಗೊಳ್ಳಲಾಗುವುದು. – ಶ್ರೀನಿವಾಸ ಶಿರೋಳ, ನಿರ್ಮಿತಿ ಕೇಂದ್ರದ ಅಧಿಕಾರಿ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು

ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು

gadag-police

Gadag: ಕೌಟುಂಬಿಕ ಕಲಹದಿಂದ ನೊಂದು ಪೊಲೀಸ್ ಪೇದೆ ಆತ್ಮಹ*ತ್ಯೆ!

Gove-Patil

Approve:ಮೈಕ್ರೋ ಫೈನಾನ್ಸ್‌ ಕಿರುಕುಳ ವಿರುದ್ಧದ ಸುಗ್ರೀವಾಜ್ಞೆಗೆ ಕೊನೆಗೂ ರಾಜ್ಯಪಾಲರ ಅಂಕಿತ

Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ

Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.