ಕ್ಷೇತ್ರಗಳ ಪುನರ್ವಿಂಗಡಣೆಗೆ ಮಾರ್ಗಸೂಚಿ
ಜಿಲ್ಲೆಗೆ 5 ಜಿಪಂ ಕ್ಷೇತ್ರಗಳು ಪ್ಲಸ್-ವಿವಿಧ ತಾಲೂಕಿಗೆ ತಾಪಂ ಮೈನಸ್,ಶುರುವಾಗಿದೆ ಚರ್ಚೆ
Team Udayavani, Feb 13, 2021, 8:02 PM IST
ಗದಗ: ರಾಜ್ಯ ಚುನಾವಣಾ ಆಯೋಗ ಜಿಪಂ, ತಾಪಂ ಕ್ಷೇತ್ರಗಳ ಪುನರ್ ವಿಂಗಡಣೆಗೆ ಮಾರ್ಗಸೂಚಿ ಹೊರಡಿಸಿದೆ. ಆಯೋಗಪಟ್ಟಿ ಮಾಡಿರುವಂತೆ ಜಿಲ್ಲೆಯಲ್ಲಿ ಹೊಸದಾಗಿಐದು ಜಿಪಂ ಕ್ಷೇತ್ರಗಳು ಉದಯಿಸಿವೆ.
ಗದಗ, ರೋಣ ತಾಪಂ ಕ್ಷೇತ್ರಗಳ ಸಂಖ್ಯೆ ಕಡಿಮೆಗೊಳಿಸಿ, ಹೊಸತಾಲೂಕುಗಳಿಗೆ ಸರಿದೂಗಿಸುವಪ್ರಯತ್ನ ನಡೆಸಿದೆ. ಜಿಪಂ, ತಾಪಂ,ಕ್ಷೇತ್ರಗಳ ಪುನರ್ವಿಂಗಡಣೆಗೆ ಆದೇಶಹೊರಡಿಸುತ್ತಿದ್ದಂತೆ ಜಿಲ್ಲೆಯ ಸಾರ್ವಜನಿಕವಯಲದಲ್ಲಿ ಚರ್ಚೆಗೆ ಗ್ರಾಸವಾಗಿದೆ. ತಾಪಂ ವ್ಯವಸ್ಥೆಯನ್ನು ರದ್ದುಗೊಳಿಸುವಬಗ್ಗೆ ಪರ-ವಿರೋಧ ಚರ್ಚೆಗಳ ಮಧ್ಯೆಯೇ ರಾಜ್ಯ ಚುನಾವಣಾ ಆಯೋಗ ಜಿಪಂ, ತಾಪಂ, ಚುನಾವಣೆಗೆ ಸಿದ್ಧತೆ ನಡೆಸಿದೆ. ಅದರ ಭಾಗವಾಗಿಕ್ಷೇತ್ರಗಳ ಪುನರ್ ವಿಂಗಡಣೆ ಮಾಡುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದೆ. ಜೊತೆಗೆ ಫೆ.20 ರಂದು ನಡೆಯುವ ಸಭೆಗೆ ಕ್ಷೇತ್ರಗಳ ಪುನರ್ ವಿಂಗಡಣೆ ಹಾಗೂ ನಕ್ಷೆಯೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಚುನಾವಣಾ ವಿಭಾಗದ ಸಿಬ್ಬಂದಿ ಹಾಜರಾಗುವಂತೆ ನಿರ್ದೇಶಿಸಿದೆ.
ಯಾರಿಗೆ ಪ್ಲಸ್-ಯಾರಿಗೆ ಮೈನಸ್?:
ಈಗಾಗಲೇ ಜಿಲ್ಲಾ ಚುನಾವಣಾ ವಿಭಾಗದಿಂದ ಜಿಲ್ಲೆಯ ಗ್ರಾಮೀಣ ಭಾಗದ ಜನಸಂಖ್ಯೆ ವಿವರಗಳನ್ನು ಪಡೆದುಕೊಂಡಿದೆ. ಅದನ್ನು ಆಧರಿಸಿ ತಾಲೂಕುವಾರು ಜಿಪಂ, ತಾಪಂ ಸ್ಥಾನಗಳನ್ನು ನಿಗದಿಪಡಿಸಿದೆ. ಅದರಂತೆಜಿಲ್ಲೆಯ ಜಿಪಂ ಗೆ ಐವರು ಸದಸ್ಯಬಲವನ್ನು ಹೆಚ್ಚಿಸಿದ್ದು, 19 ಸದಸ್ಯರಿಂದ 24ಕ್ಕೆ ಹೆಚ್ಚಿಸಿದೆ. ನರಗುಂದ ಮತ್ತು ಗಜೇಂದ್ರಗಡತಾಲೂಕು ಹೊರತುಪಡಿಸಿ, ಇನ್ನುಳದ ಐದುತಾಲೂಕುಗಳಿಗೆ ತಲಾ ಒಂದು ಜಿಪಂ ಕ್ಷೇತ್ರವನ್ನು ಹೆಚ್ಚಿಸಿದೆ.
ಅದರಂತೆ ಜಿಲ್ಲೆಯ 7 ತಾಪಂಗಳಲ್ಲಿಗದಗ, ರೋಣ ತಲಾ 3 ಹಾಗೂ ಮುಂಡರಗಿ2ಕ್ಷೇತ್ರಗಳನ್ನು ಕಳೆದುಕೊಂಡಿವೆ.ಗಜೇಂದ್ರಗಡ 5, ಶಿರಹಟ್ಟಿ 4, ಲಕ್ಷ್ಮೇಶ್ವರ3 ಕ್ಷತ್ರಗಳು ಹೆಚ್ಚಳವಾಗಿವೆ. ಇನ್ನುಳಿದಂತೆನರಗುಂದ ತಾಪಂನ 11 ಕ್ಷೇತ್ರಗಳನ್ನು ಮುಂದುವರಿಸಲಾಗಿದೆ. ಜೊತೆಗೆ ಜಿಲ್ಲೆಯ ಒಟ್ಟು 79 ಕ್ಷೇತ್ರಗಳಲ್ಲೇ ಎಲ್ಲ 7 ತಾಲೂಕುಗಳನ್ನು ಸರಿದೂಗಿಸಿರುವುದು ಗಮನಾರ್ಹ.
ಕ್ಷೇತ್ರ ಕಳೆದುಕೊಳ್ಳುವ ಆತಂಕ: ಜಿಲ್ಲೆಯಹೊಸದಾಗಿ ಎರಡು ತಾಲೂಕುಗಳು ರಚನೆಯಾಗಿದ್ದರಿಂದ 5 ಜಿಪಂ ಕ್ಷೇತ್ರಗಳುಹುಟ್ಟಿಕೊಂಡಿರುವುದು ಜಿಪಂ ಸ್ಪರ್ಧಾಕಾಂಕ್ಷಿಗಳಲ್ಲಿ ಚೈತನ್ಯ ಮೂಡಿಸಿದೆ. ಆದರೆ, ಈಗಿರುವ ತಾಪಂಗಳಲ್ಲೇ ಕೆಲವೆಡೆ ಕ್ಷೇತ್ರಗಳನ್ನು ಆಯೋಗ ಕಡಿಮೆ ಮಾಡಿದ್ದರಿಂದ ಹಲವರಿಗೆ ಕ್ಷೇತ್ರ ಕಳೆದುಕೊಳ್ಳುವ ಭೀತಿ ಶುರುವಾಗಿದೆ.
ಮಾತ್ರವಲ್ಲದೇ, ಗದಗ, ರೋಣ ಹಾಗೂ ಮುಂಡರಗಿ ತಾಲೂಕುಗಳು ವಿಶಾಲ ಹಾಗೂಹೆಚ್ಚಿನ ಜನ ಸಂಖ್ಯೆಯಿದ್ದರೂ, ತಾಪಂ ಸದಸ್ಯಬಲ ಕಡಿಮೆಗೊಳಿಸಿರುವುದು ಅವೈಜ್ಞಾನಿಕಅಲ್ಲದೇ, ನರಗುಂದ ತಾಲೂಕಿನ ಚಿಕ್ಕಮಣ್ಣೂರುಭಾಗದಲ್ಲಿ ಮತ್ತೂಂದು ತಾಪಂ ಕ್ಷೇತ್ರವನ್ನು ಕೊಡಬೇಕಿತ್ತು ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಚುನಾವಣಾ ಆಯೋಗ ಕ್ಷೇತ್ರ ಪುನರ್ ವಿಂಗಡಣೆಗೆ ಆದೇಶಿದ್ದು, ಇನ್ನಷ್ಟೇಪ್ರಕ್ರಿಯೆಗಳು ಆರಂಭಗೊಳ್ಳಬೇಕಿದೆ. ಈ ಬಗ್ಗೆ ಸಂಬಂಧಿಸಿದ ತಹಶೀಲ್ದಾರ್‌ಗಳ ಮೂಲಕ ಪೂರಕ ಮಾಹಿತಿ ಕಲೆ ಹಾಕಿ, ಗ್ರಾಮೀಣ ಭಾಗದ ಜನತೆಗೆ ತೊಂದರೆಯಾಗದ ರೀತಿಯಲ್ಲಿ ಪುನರ್ವಿಂಗಡಿಸಿ, ಕರಡು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುತ್ತದೆ. ಆನಂತರ ಆಯೋಗ ಕರಡು ಪ್ರಕಟಿಸಿ, ಆಕ್ಷೇಪಣೆ ಪ್ರಕ್ರಿಯೆಗಳ ಬಳಿಕ ಅಂತಿಮಗೊಳಿಸಲಾಗುತ್ತದೆ. –ಎಂ.ಸುಂದರೇಶ ಬಾಬು, ಜಿಲ್ಲಾಧಿಕಾರಿ
-ವೀರೇಂದ್ರ ನಾಗಲದಿನ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.