ದುಡಿದ ದುಡ್ಡಿನಲ್ಲಿ ಭುವನೇಶ್ವರಿ ದೇವಿ ಮೂರ್ತಿ ನಿರ್ಮಾಣ
Team Udayavani, Nov 2, 2019, 11:42 AM IST
ಮುಂಡರಗಿ: ಸಾರಿಗೆ ಸಂಸ್ಥೆ ಬಸ್ ಚಾಲಕರೊಬ್ಬರು ಸ್ವಂತ ದುಡಿಮೆ ಹಣದಿಂದ ಲಕ್ಷಾಂತರ ರೂ. ಖರ್ಚು ಮಾಡಿ ಕನ್ನಡಾಂಬೆ ತಾಯಿ ಭುವನೇಶ್ವರಿ ದೇವಿ ಮೂರ್ತಿ ನಿರ್ಮಿಸಿ ಕನ್ನಡದ ಹಿರಿಮೆ-ಗರಿಮೆ ಎತ್ತಿ ಹಿಡಿದಿದ್ದಾರೆ.
ಇಲ್ಲಿನ ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಘಟಕದಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಈರಣ್ಣ ಸಂಗಪ್ಪ ಮೇಟಿ ಮೂಲತಃ ಹಿರೇವಡ್ಡಟ್ಟಿ ಗ್ರಾಮದವರು. ಕನ್ನಡ ನಾಡು-ನುಡಿಯ ಸಲುವಾಗಿ ಏನಾದರೂ ಅಳಿಲು ಸೇವೆ ಸಲ್ಲಿಸುವ ದೃಢ ಸಂಕಲ್ಪ ಮಾಡಿಕೊಂಡಿದ್ದರು. ಹೀಗಾಗಿ ಪ್ರತಿವರ್ಷ ನ. 1ರಂದು ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭ ಸಾರಿಗೆ ಸಂಸ್ಥೆ ಬಸ್‌ನ್ನು ಹೂವುಗಳಿಂದ ಶೃಂಗರಿಸಿ, ಧ್ವನಿವರ್ಧಕ ಹಚ್ಚಿಕೊಂಡು ಕನ್ನಡ ಭಾಷೆಯ ಸ್ವಾಭಿಮಾನ ಎತ್ತಿ ಹಿಡಿಯುವ ಕನ್ನಡದ ಹಾಡುಗಳನ್ನು ಪ್ರಯಾಣಿಕರಿಗೆ ಕೇಳಿಸುತ್ತಿದ್ದರು. ಈ ವರ್ಷ ಕನ್ನಡಾಂಬೆ ತಾಯಿ ಭುವನೇಶ್ವರಿ ದೇವಿ ಮೂರ್ತಿ ನಿರ್ಮಿಸಿದ್ದಾರೆ.
ತಮ್ಮ ಸ್ವಂತ ದುಡಿಮೆಯ ಹಣ ಕೂಡಿಸಿ ಮೂರ್ತಿಯ ನಿರ್ಮಾಣ ಮಾಡಿದ್ದಾರೆ. ಸ್ಟೀಲ್ ಮತ್ತು ಫೈಬರ್ ನಿಂದ 1.20 ಲಕ್ಷ ರೂ. ವೆಚ್ಚದಲ್ಲಿ ಕನ್ನಡತಾಯಿ ಭುವನೇಶ್ವರಿ ಮೂರ್ತಿ ತಯಾರಿಸಿದ್ದಾರೆ. ನ. 1ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ನೂತನವಾಗಿ ನಿರ್ಮಿಸಲಾದ ತಾಯಿ ಭುವನೇಶ್ವರಿ ದೇವಿ ಮೂರ್ತಿಯನ್ನು ಬಸ್ ಮುಂಭಾಗದಲ್ಲಿಟ್ಟು ಹೂವುಗಳಿಂದ ಅಲಂಕರಿಸಿ, ಜ| ನಾಡೋಜ ಡಾ| ಅನ್ನದಾನೀಶ್ವರ ಸ್ವಾಮೀಜಿ ಅಮೃತ ಹಸ್ತದಿಂದ ಸಾರಿಗೆ ಘಟಕದಲ್ಲಿ ಸಹದ್ಯೋಗಿಗಳ ಜೊತೆ ಕೂಡಿಕೊಂಡು ಪೂಜಿಸಿ, ಮೆರವಣಿಗೆ ಮಾಡಿದ್ದಾರೆ.
-ಹು.ಬಾ. ವಡ್ಡಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
ಗದಗ: ನೀರು ಸೋರಿಕೆ- ನದಿಯಲ್ಲಿ ನೀರಿದ್ದರೂ ತಪ್ಪದ ಹಾಹಾಕಾರ!
ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್ ಮುದ್ರಣ ಭರಾಟೆ; ಕ್ಯಾಲೆಂಡರ್-ತೂಗು ಪಂಚಾಂಗಗಳಿಗೆ ಖ್ಯಾತಿ
Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.