ಐತಿಹಾಸಿಕ ಹಿರೇಕೆರೆಗೆ ಬೇಕಿದೆ ರಕ್ಷಣೆ

ಅಕ್ರಮ ಚಟುವಟಿಕೆ ತಾಣವಾದ ಕೆರೆಯಂಗಳ,ಜನಪ್ರತಿನಿಧಿಗಳು-ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ

Team Udayavani, Oct 31, 2020, 1:03 PM IST

ಐತಿಹಾಸಿಕ ಹಿರೇಕೆರೆಗೆ ಬೇಕಿದೆ ರಕ್ಷಣೆ

ನರೇಗಲ್ಲ: ಪಟ್ಟಣದ ಐತಿಹಾಸಿಕ ಹಿರೇಕೆರೆಯನ್ನು ಮಠಾಧಿಧೀಶರು, ಸಂಘ, ಸಂಸ್ಥೆ, ರೈತರು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಹೂಳೆತ್ತುವ ಮೂಲಕ ಕೆರೆಯನ್ನು ಸಾಕಷ್ಟು ಅಭಿವೃದ್ಧಿಪಡಿಸಲಾಗಿತ್ತು. ಜನಪ್ರತಿನಿ ಧಿಗಳ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಕೆರೆಯು ಕುಡುಕರ, ಬಯಲು ಶೌಚಾಲಯ ತಾಣವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಕೆರೆ ತುಂಬಿ ಅಪಾಯ ಆಹ್ವಾನಿಸುತ್ತಿದೆ.

ಹಿರೇಕೆರೆ 39 ಎಕರೆ ವಿಸ್ತೀರ್ಣ ಹೊಂದಿದೆ. ಒಂದು ಕಾಲದಲ್ಲಿ ರೈತರ ಜೀವನಾಡಿಯಾಗಿದ್ದ ಹಿರೇಕೆರೆಯಿಂದ ಕೊಳವೆ ಬಾವಿಗಳಲ್ಲಿ ಅಂತರ್ಜಲಮೇಲ್ಮಟ್ಟದಲ್ಲಿತ್ತು. ಮಳೆ ಉತ್ತಮವಾಗಿರುವುದರಿಂದಕೆರೆಯಲ್ಲಿ ನೀರು ಹೆಚ್ಚು ಸಂಗ್ರಹವಾಗಿದೆ. ಕೆರೆಗೆ ಹೋಗಲು ಹೆದರುವಂತಹ ಪ್ರಸಂಗನಿರ್ಮಾಣವಾಗಿದೆ. ಕೆರೆಗೆ ತಡೆಗೋಡೆ ನಿರ್ಮಿಸಿಲ್ಲ.ಯಾವುದೇ ರೀತಿಯ ನಾಮಫಲಕ ಅಳವಡಿಸಿಲ್ಲ. ತಂತಿ ಬೇಲಿ ಸಹ ಅಳವಡಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ತಮಗೆ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.

ಕೆರೆಯ ಸುತ್ತ ದನಕರಗಳು: ಹಿರೇಕೆರೆಯ ದಂಡೆಯ ಮೇಲೆ ಕೋಡಿಕೊಪ್ಪ, ಪಟ್ಟಣದ ಸಾರ್ವಜನಿಕರು ದನ ಕರಗಳನ್ನು ಬಿಟ್ಟಿರುತ್ತಾರೆ. ದನ ಕಾಯುವ ಹುಡುಗರು ಕೆರೆ ಬದುವಿನ ಮೇಲೆ ಕುಳಿತು ಸ್ವಲ್ಪ ಬಾಗಿದರೆಸಾಕು ಕೆರೆಯು ಆಳವಾಗಿರುವುದರಿಂದ ನೀರು ಕೈಗೆ ತಾಗುತ್ತವೆ. ಒಂದು ವೇಳೆ ಆಯತಪ್ಪಿ ಏನಾದರುಬಿದ್ದರೆ ಸಾವು ಖಚಿತವಾಗಿದೆ. ಕೆರೆಯ ಸುತ್ತಲುಸಾಕಷ್ಟು ಪ್ರಮಾಣದಲ್ಲಿ ಗಿಡ ಗಂಟಿಗಳು ಬೆಳೆದಿವೆ.ಕೆರೆಯ ನೆಲ ಕಾಣವುದಿಲ್ಲ. ಒಂದು ವೇಳೆ ಕಾಲಇಟ್ಟರೆ ಕುಸಿದು ನೀರಿಗೆ ಬೀಳುವಂತಾಗಿದೆ. ಅನೈತಿಕ ಚಟುವಟಿಕೆಗಳಿಗೂ ಅವಕಾಶವಾಗುತ್ತಿರುವುದು ಪರಿಸರಪ್ರಿಯರು, ವಾಯು ವಿಹಾರಕ್ಕೆಹೋಗುವವರಲ್ಲಿ ಆತಂಕ ಉಂಟು ಮಾಡಿದೆ. ಕೆರೆ ದಂಡೆ ಕುಡುಕರ ನೆಚ್ಚಿನ ತಾಣ: ಕೆರೆಯ ದಂಡೆಯ ಮೇಲೆ ಸಂಜೆಯಾದರೆ ಸಾಕು ಅನೈತಿಕ, ಅಕ್ರಮ ಚಟುವಟಿಕೆಗಳಿಂದ ಕುಡಿರುತ್ತದೆ. ಖಾಲಿಯಾದ ಬೀರ್‌-ಬ್ರಾಂಡಿ ಬಾಟಲ್‌ಗ‌ಳು, ಟೆಟ್ರಾ ಪ್ಯಾಕ್‌ಗಳು, ನೀರಿನ ಸ್ಯಾಚೆಟ್‌ಗಳು, ಬಾಟಲಿಗಳು, ಪ್ಲಾಸ್ಟಿಕ್‌ ಲೋಟಾಗಳು, ಗುಟಖಾ ಚೀಟುಗಳು, ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳೂ, ಊಟ ಮಾಡಿ ಒಗೆದಿರುವ ಪ್ಲಾಸ್ಟಿಕ್‌ ತಟ್ಟೆಗಳು, ಸಿಗರೇಟ್‌ ಪಾಕೀಟುಗಳು, ಬೆಂಕಿ ಕಡ್ಡಿ ಪೆಟ್ಟಿಗೆಗಳು ಹಿರೇಕೆರೆಯ ಅಂಗಳದ ತುಂಬ ನೋಡುಗರ ಕಣ್ಣಿಗೆ ರಾಚುವಂತೆ ಬಿದ್ದಿವೆ. ಕೆರೆಯ ದಂಡೆಯ ಮೇಲೆ ಕುಡಿದು ಕುಣಿದು ಕುಪ್ಪಳಿಸುತ್ತಾರೆ. ಬಾರ್‌ಗಳಲ್ಲಿ ಸಿಗದ ಮೋಜು ಮಸ್ತಿಯನ್ನು ಇಲ್ಲಿ ಯಾರ ಭಯವೂ ಇಲ್ಲದೇ ರಾಜಾರೋಷವಾಗಿ ಮಾಡುತ್ತಿದ್ದಾರೆ.

ಕ್ರಮ ಕೈಗೊಳ್ಳದ ಅಧಿಕಾರಿಗಳು: ಪಟ್ಟಣದ ಹಿರೇಕೆರೆ ದಂಡೆ ಸಂಜೆಯಾಗುತ್ತಲೇ ಕುಡುಕರ ಅಡ್ಡೆಯಾಗಿರುವದನ್ನು ಅಬಕಾರಿ ಹಾಗೂ ಪೊಲೀಸ್ಇಲಾಖೆ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ.  ಕುಡುಕರಿಗೆ ಬುದ್ಧಿವಾದ ಹೇಳಿ ಬೇರೆ ಸ್ಥಳಗಳಲ್ಲಿ ನೀವು ನಿಮ್ಮ ಚಟಗಳನ್ನು ಮಾಡಿ ಎಂದು ಹೇಳಬೇಕಾದ ಅಧಿಕಾರಿಗಳು ಕಣ್ಣು ಮುಚ್ಚಿ ಓಡಾಡುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ಕುಡಿದ ಅಮಲಿನಲ್ಲಿ ಕಾಲು ಜಾರಿ ಕೆರೆ ಬಿದ್ದರೆ ಯಾರು ಹೊಣೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.

ಹಿರೇಕೆರೆ ಅಭಿವೃದ್ಧಿಗೆ ಕೆರೆಯ ಸುತ್ತಲು ತಡೆಗೋಡೆ, ತಂತಿ ಬೇಲಿ ಹಾಕಲು ಸಣ್ಣ ನೀರಾವರಿ ಇಲಾಖೆಹಾಗೂ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೆರೆ ದಂಡೆಯ ಮೇಲೆ ಚಿಕ್ಕ ಮಕ್ಕಳನ್ನುಹಾಗೂ ದನಕರಗಳನ್ನು ಬಿಡುವಾಗ ಎಚ್ಚರಿಕೆ ವಹಿಸಬೇಕು ಎಂದು ಈಗಾಗಲೇ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.  -ಮಹೇಶ ನಿಡಶೇಶಿ, ಪಪಂ ಮುಖ್ಯಾಧಿಕಾರಿ

ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರ ಜೀವನಾಡಿಯಾಗಿರುವ ಹಿರೇಕೆರೆ ದೇವರ ಕೃಪೆಯಿಂದ ಉತ್ತಮ ಮಳೆಯಾದ ಪರಿಣಾಮ ಕೆರೆ ತುಂಬಿಕೊಂಡಿದೆ. ಇದರಿಂದ ರೈತರ ಕೊಳೆವೆ ಬಾವಿ ಅಂತರ್ಜಲ ಮಟ್ಟ ಹೆಚ್ಚಾಗುವ ಸಾಧ್ಯಗಳಿವೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕೆರೆಯ ಸುತ್ತಲು ತಂತಿ ಬೇಲಿ ಅಳಡಿಸುವುದಕ್ಕೆಮುಂದಾಗಬೇಕು. ರಾತ್ರಿ ವೇಳೆ ಮದ್ಯ ಪಾನ ಮಾಡುವುದಕ್ಕೆ ಬರುವ ಜನರನ್ನು ಈ ಕೆರೆಗೆ ಬಾರದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕಾಗಿದೆ. – ನಜೀರ ಹದ್ಲಿ, ಕೋಡಿಕೊಪ್ಪ ನಿವಾಸಿ

 

-ಸಿಕಂದರ ಎಂ. ಆರಿ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime (2)

Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadag-CM-Dcm

Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ

8

CM Siddaramaiah: ಗ್ಯಾರಂಟಿಗಳನ್ನು‌ ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮ‌‌ದು

7

Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.