ಹೊಳೆಆಲೂರ ಇಬ್ಭಾಗ: ಹಿರೇಹಾಳ ಸೃಷ್ಟಿ

ಜಿಲ್ಲೆ ಅತೀ ದೊಡ್ಡ ಕ್ಷೇತ್ರ ಹೋಳು

Team Udayavani, Mar 24, 2021, 2:02 PM IST

ಹೊಳೆಆಲೂರ ಇಬ್ಭಾಗ: ಹಿರೇಹಾಳ ಸೃಷ್ಟಿ

ರೋಣ: ಶ್ರೀಕ್ಷೇತ್ರ ಹೊಳೆಆಲೂರ ಎಚ್ಚರೇಶ್ವರನ ಜನ್ಮ ಭೂಮಿಯಾದ ಹೊಳೆ ಆಲೂರ ಜಿಪಂ ಕ್ಷೇತ್ರ ವಿಂಗಡಣೆಯಾಗಿದ್ದು, ಜಿಲ್ಲೆಯಲ್ಲಿ ಅತೀ ದೊಡ್ಡ ಕ್ಷೇತ್ರವನ್ನು ಒಡೆದು ಹಿರೇಹಾಳ ಎಂಬ ಹೊಸ ಜಿಪಂ ಕ್ಷೇತ್ರ ಸೃಷ್ಟಿಸಲಾಗಿದೆ.

ಗಜೇಂದ್ರಗಡ ನೂತನ ತಾಲೂಕಾಗಿ ಘೋಷಣೆಯಾಗಿರುವ ಹಿನ್ನೆಲ್ಲೆಯಲ್ಲಿಅಖಂಡ ರೋಣ ತಾಲೂಕಿನಲ್ಲಿ ನಿಡಗುಂದಿ,ಹೊಳೆಆಲೂರ, ಅಬ್ಬಿಗೇರಿ, ಬೆಳವಣಕಿ,ಸೂಡಿ ಕ್ಷೇತ್ರಗಳು ಇದ್ದವು. ಆದರೆ ಈಗ ನಿಡಗುಂದಿ ಹಾಗೂ ಸೂಡಿ ಗಜೇಂದ್ರಗಡತಾಲೂಕಿನ ವ್ಯಾಪ್ತಿಗೆ ಬರುತ್ತವೆ. ಉಳಿದಮೂರು ಕ್ಷೇತ್ರಗಳಲ್ಲಿ ಬೆಳವಣಕಿ, ಅಬ್ಬಿಗೇರಿ ಕ್ಷೇತ್ರವನ್ನು ಯತವತ್ತಾಗಿ ಇಟ್ಟು,ಹೊಳೆಆಲೂರ ಕ್ಷೇತ್ರದಲ್ಲಿ ಹಿರೇಹಾಳ ಎಂಬ ನೂತನ ಜಿಪಂ ಕ್ಷೇತ್ರ ಸೃಷ್ಟಿಸಲಾಗಿದೆ. ಈಮೂಲಕ ಒಟ್ಟು ನಾಲ್ಕು ಕ್ಷೇತ್ರಗಳು ರೋಣ ತಾಲೂಕಿನ ವ್ಯಾಪ್ತಿಯಲ್ಲಿ ಉಳದಿವೆ.

ಅಬ್ಬಿಗೇರಿ: ಒಟ್ಟು 33,134 ಮತದಾರರು ಈ ಕ್ಷೇತ್ರದಲ್ಲಿದ್ದಾರೆ. ಈ ಕ್ಷೇತ್ರದವ್ಯಾಪ್ತಿಗೆ ಅಬ್ಬಿಗೇರಿ, ಡ.ಸ. ಹಡಗಲಿ,ಗುಜಮಾಗಡಿ, ಕುರಡಗಿ, ಯರೇಬೇಲೆರಿ,ನಾಗರಾಳ, ಸವಡಿ, ಹೊನ್ನಾಪುರ, ಜಕ್ಕಲಿ,ಮಾರನಬಸರಿ, ಬೂದಿಹಾಳ ಸೇರಿದಂತೆ11 ಗ್ರಾಮಗಳು ಈ ಜಿಪಂ ವ್ಯಾಪ್ತಿಯಲ್ಲಿಬರುತ್ತವೆ. ಈ ಕ್ಷೇತ್ರದಲ್ಲಿ ಲಿಂಗಾಯತ ಪಂಚಮಸಾಲಿ, ಬಣಜಿಗ ಮತದಾರರುಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ. ಕ್ಷೇತ್ರಕ್ಕೆ ಯಾವ ಮೀಸಲಾತಿಬರುತ್ತದೆ ಅದರ ಆಧಾರದಮೇಲೆ ಅಭ್ಯರ್ಥಿಗಳ ಆಯ್ಕೆನಡೆಯುತ್ತದೆ. ಸದ್ಯ ಈಕ್ಷೇತ್ರ ಸಾಮಾನ್ಯ ಮಹಿಳೆಗೆಮೀಸಲಾಗಿದ್ದು, ರೂಪಾಅಂಗಡಿ ಪ್ರತಿನಿಧಿಸುತ್ತಿದ್ದಾರೆ.

ಬೆಳವಣಕಿ: 31,739 ಮತದಾರರನ್ನುಹೊಂದಿದ್ದು, ಈ ಕ್ಷೇತ್ರದ ವ್ಯಾಪ್ತಿಯಲ್ಲಿಬೆಳವಣಕಿ, ಮಲ್ಲಾಪುರ, ಸಂದಿಗವಾಡ,ಯಾವಗಲ್‌, ಯಾ.ಸ. ಹಡಗಲಿ, ಕಣಜಗೇರಿ, ಮಾಳವಾಡ, ಬೋಪಳಾಪುರ, ಮೇಣಸಗಿ, ಹೊಳೆಮಣ್ಣೂರ,ಗಾಡಗೋಳಿ, ಕರ್ಕಿಕಟ್ಟಿ, ಗುಳಗಂದಿಸೇರಿದಂತೆ 13 ಗ್ರಾಮಗಳನ್ನು ಒಳಗೊಂಡಿದೆ. ಇಲ್ಲಿಯೂ ಲಿಂಗಾಯತಪಂಚಮಸಾಲಿ ಮತಗಳು ಹೆಚ್ಚಿನಪ್ರಮಾಣದಲ್ಲಿವೆ.

ಸದ್ಯ ಸಮಾನ್ಯ ಕ್ಷೇತ್ರದಿಂದ ಶಿವುಕುಮಾರ ನೀಲಗುಂದ ಪ್ರತಿನಿಧಿಸುತ್ತಿದ್ದಾನೆ. ಕ್ಷೇತ್ರಸಾಮಾನ್ಯಕ್ಕೆ ಮೀಸಲಾದರೆಬಿಜೆಪಿಯಿಂದ ಶಿವುಕುಮಾರನೀಲಗುಂದ, ಯಾವಗಲ್‌ ಗ್ರಾಮದ ಎಸ್‌.ಎಸ್‌.ಮುಲ್ಕಿ ಪಾಟೀಲ, ಅಶೋಕ ಹೆಬ್ಬಳಿ ಹಾಗೂ ಕಾಂಗ್ರೆಸ್‌ನಿಂದಕಳೆದ ಬಾರಿ ಸ್ಪರ್ಧೆ ಮಾಡಿ ಕೂದಲಳತೆಯ ಅಂತರದಲ್ಲಿ ಸೋತಿದ್ದ ನಿವೃತ್ತ ಪೊಲೀಸ್‌ವರಿಷ್ಠಾಧಿಕಾರಿ ಹಿರೇಗೌಡ್ರ ನಿಧನರಾಗಿದ್ದು,ಮತ್ತೆ ಅವರ ಪತ್ನಿ ಶಾರದ ಹಿರೇಗೌಡ್ರಅಥವಾ ಕುರಬ ಸಮಾಜದ ಈರಪ್ಪ ತಾಳಿ ಸ್ಪರ್ಧೆ ಮಾಡಲಿದ್ದಾರೆ.

ಹೊಳೆಆಲೂರ: 31,775 ಮತದಾರನ್ನುಒಳಗೊಂಡಿರುವ ಹೊಳೆಆಲೂರಜಿಪಂ ಕ್ಷೇತ್ರದಲ್ಲಿ ಹೊಳೆಆಲೂರ,ಹುನಗುಂಡಿ,ಬೆನಹಾಳ, ಅಮರಗೋಳ,ಹೊಳೆಹಡಗಲಿ, ಕುರವಿಕೊಪ್ಪ,ಬಿ.ಎಸ್‌.ಬೇಲೇರಿ, ಬಸರಕೋಡ, ಹುಲ್ಲೂರ, ಸೋಮನಕಟ್ಟಿ, ಅಸೂಟಿ,ಮೇಗೂರ, ಮೇಲ್ಮಠ, ಕರಮುಡಿ,ಚಿಕ್ಕಮಣ್ಣೂರ, ಹಿರೇಮಣ್ಣೂರ,ಅರಹುಣಸಿ, ಬಸಾಲಾಪುರ ಸೇರಿದಂತೆ18 ಗ್ರಾಮಗಳನ್ನು ಒಳಗೊಂಡಿದೆ. ಇಲ್ಲಿ ಅರ್ಧದಷ್ಟು ಗ್ರಾಮಗಳಲ್ಲಿ ಗಾಣಿಗ ಹಾಗೂಪಂಚಸಾಲಿ ಸಮಾಜದ ಮತಗಳು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಈ ಕ್ಷೇತ್ರ ಸಮಾನ್ಯ ಅಥವಾ ಪ್ರವರ್ಗ ಆ ವರ್ಗಕ್ಕೆ ಮೀಸಲಾದರೆ ಇಲ್ಲಿ ಕಾಂಗ್ರೆಸ್‌ನಿಂದ ಮಾಜಿ ಹೊಳೆಆಲೂರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಧಶರಥ ಗಾಣಿಗೇರಹಾಗೂ ಬಿಜೆಪಿಯಿಂದ ಜಗದೀಶ ಬ್ಯಾಡಗಿ,ಮುತ್ತಣ್ಣ ಜಂಗಣ್ಣವರ, ಶಶಿಧರಗೌಡಪಾಟೀಲ ಸೇರಿದಂತೆ ಅನೇಕರು ಆಕಾಂಕ್ಷಿಗಳಾಗಿದ್ದಾರೆ. ಈ ಕ್ಷೇತ್ರ ಪ.ಜಾ. ಪಡಿಯಪ್ಪ ಪ್ರತಿನಿಧಿಸುತ್ತಿದ್ದಾರೆ.

ಹಿರೇಹಾಳ ನೂತನ ಜಿಪಂ ಕ್ಷೇತ್ರ :

ನೂತನ ಜಿಪಂ ಕ್ಷೇತ್ರದಲ್ಲಿ ಒಟ್ಟು 30,945 ಮತದಾರರು ಇದ್ದು, ಹಿರೇಹಾಳ, ಬಳಗೋಡ, ಹೊನ್ನಿಗನೂರ, ಮಾಡಲಗೇರಿ, ನೈನಾಪುರ, ಕೋತಬಾಳ, ಮುಗಳಿ, ತಳ್ಳಿಹಾಳ, ಕುರಹಟ್ಟಿ, ಮುದೇನಗುಡಿ,ಇಟಗಿ, ಯರೇಕುರ ಬನಾಳ, ಹೊಸಳ್ಳಿ,ಜಿಗಳೂರ, ಕಳಕಾಪುರ ಸೇರಿದಂತೆ15 ಗ್ರಾಮಗಳು ಈ ವ್ಯಾಪ್ತಿಯಲ್ಲಿ ಬರುತ್ತವೆ. ಈ ಕ್ಷೇತ್ರ ಸದ್ಯ ಹೊಳೆಆಲೂರಕ್ಷೇತ್ರದಿಂದ ವಿಂಗಡಣೆಯಾಗಿದ್ದು, ಪರಿಶೀಷ್ಟ ಜಾತಿಯ ಪಡಿಯಪ್ಪ ಪೂಜಾರ ಪ್ರತಿನಿಧಿಸುತ್ತಿದ್ದಾರೆ.

ಹೆಚ್ಚಿನಸಂಖ್ಯೆಯಲ್ಲಿ ಗಾಣಿಗ ಸಮುದಾಯದಮತಗಳು ಹೆಚ್ಚಿದ್ದು, ಈ ಕ್ಷೇತ್ರ ಸಾಮಾನ್ಯವರ್ಗ ಅಥವಾ ಪ್ರವರ್ಗ ಅ ವರ್ಗಕ್ಕೆ ಮೀಸಲಾದರೆ, ಜಿಪಂ ಮಾಜಿ ಅಧ್ಯಕ್ಷಹಾಗೂ ಇತ್ತೀಚೆಗೆ ಕಾಂಗ್ರೆಸ್‌ನಿಂದಬಿಜೆಪಿಗೆ ಸೇರಿರುವ ನಿಂಗಪ್ಪ ಕೆಂಗಾರ ಪ್ರಬಲ ಆಕಾಂಕ್ಷಿಯಾಗಿದ್ದು,ಇವರ ಜೊತೆಗೆ ಹೂವಪ್ಪ ಕೆಂಗಾರ, ದೇವರಾಜ ದೇಸಾಯಿ,ಇಂದೀರಾ ತೇಲಿ ಬಿಜೆಪಿಯಿಂದ ಪ್ರಬಲಆಕಾಂಕ್ಷಿಗಳಾಗಿದ್ದಾರೆ. ಇತ್ತ ಕಾಂಗ್ರೆಸ್‌ನಿಂದ ಸತತ ಮೂರು ಬಾರಿ ಎಪಿಎಂಸಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದಪರುಶುರಾಮ ಅಳಗವಾಡಿ, ಹಾಲಿತಾಪಂ ಸದಸ್ಯ ಪ್ರಭು ಮೇಟಿ ಹಾಗೂ ರೋಣ ಪಟ್ಟಣದ ಮಾಜಿಪುರಸಭೆ ಅಧ್ಯಕ್ಷ ಟಿ.ಬಿ. ನವಲಗುಂದಅವರ ಪುತ್ರ ಅಭಿಷೇಕ ನವಲಗುಂದ ಆಕಾಂಕ್ಷಿಯಾಗಿದ್ದಾರೆ.

 

-ಯಚ್ಚರಗೌಡ ಗೋವಿಂದಗೌಡ್ರ

ಟಾಪ್ ನ್ಯೂಸ್

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime (2)

Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadag-CM-Dcm

Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ

8

CM Siddaramaiah: ಗ್ಯಾರಂಟಿಗಳನ್ನು‌ ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮ‌‌ದು

7

Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.