ಮದ್ಯದಂಗಡಿ ಬಂದ್ ಮಾಡಿಸಿದ ಮಹಿಳೆಯರು
Team Udayavani, May 8, 2020, 5:16 PM IST
ಹೊಳೆಆಲೂರ: ಮದ್ಯದ ಅಂಗಡಿ ಬಂದ್ ಮಾಡುವಂತೆ ಆಗ್ರಹಿಸಿ ಮಹಿಳೆಯರು ಪ್ರತಿಭಟನೆ ನಡೆಸಿದರು.
ಹೊಳೆಆಲೂರ: ಗ್ರಾಮದಲ್ಲಿ ಮದ್ಯದಂಗಡಿ ಬಂದ್ ಮಾಡುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ಮಹಿಳಾ ರೈತ ಸಂಘಟನೆಯ ಹಾಗೂ ಹೊಳೆಆಲೂರ ಗ್ರಾಮದ ವಿವಿಧ ಮಹಿಳಾ ಸಂಘಟನೆಯ ಪದಾಧಿಕಾರಿಗಳು ಗುರುವಾರ ದಿಢೀರ್ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ವಿವೇಕ ವೈನ್ ಶಾಪ್ ಹಾಗೂ ಪ್ರಗತಿ ವೈನ್ ಶಾಪ್ ಮುಂದೆ ಆಗಮಿಸಿದ ಮಹಿಳೆಯರು ತಕ್ಷಣ ಅಂಗಡಿ ಬಂದ್ ಮಾಡುವಂತೆ ಆಗ್ರಹಿಸಿದರು. ಆಗ ವೈನ್ ಶಾಪ್ನವರು ಸರಕಾರದ ಆದೇಶದಂತೆ ಅಂಗಡಿ ಆರಂಭಿಸಲಾಗಿದೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಿರ್ಮಾನ ಮಾಡೋಣ ಎಂದರು.
ಇದಕ್ಕೆ ಒಪ್ಪದ ಮಹಿಳೆಯರು ನಿಮಗೆ ನಾಚಿಕೆಯಾಗುವುದಿಲ್ಲವೇ, ಪಕ್ಕದ ಗ್ರಾಮದಲ್ಲಿ ಎರಡು ದಿನದಲ್ಲಿ 16 ಜನರಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಜನ ಭಯದ ವಾತಾವರಣದಲ್ಲಿ ಕಾಲ ಕಳೆಯುತ್ತಯಿದ್ದೇವೆ. ತಕ್ಷಣ ಅಂಗಡಿ ಬಂದ್ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಅಂಗಡಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಎಎಸ್ಐ ಮಹೇಶ ಹೆರಕಲ್ಲ, ಮೇಘರಾಜ ಅಲ್ಲಿಪೂರ, ಪಿಡಿಒ ಮಂಜುನಾಥ ಗಣಿ ಸ್ಥಳಕ್ಕೆ ಆಗಮಿಸಿ, ಮಾಲೀಕರಿಗೆ ತಿಳಿ ಹೇಳಿ ಅಂಗಡಿ ಬಂದ್ ಮಾಡಿಸಿದರು. ಪ್ರತಿಭಟನೆಯಲ್ಲಿ ಶರಣಮ್ಮ ಯಾದವಾಡ, ಲಕ್ಷ್ಮೀಭಾಯಿ ಹೆಗ್ರಿ, ದ್ರಾಕ್ಷಾಯಣಿ ಹೆಬ್ಬಳ್ಳಿ, ಸುಮಂಗಲಾ ಕಾತರಕಿ, ಸರೋಜಮ್ಮ ಗೌರಿಮಠ, ಶಿವವ್ವ ಮೂಲಿಮನಿ, ಹನುಮವ್ವ ಕಡಿಯವರ, ಶಾವಕ್ಕ ಪೂಜಾರ ಭಾಗವಹಿಸಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag; ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಕಾರು ಚಾಲಕ ಆತ್ಮಹತ್ಯೆ
Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ
Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
MUST WATCH
ಹೊಸ ಸೇರ್ಪಡೆ
Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.