ಮುಂಡರಗಿ ಸೇರಿ ಏಳು ಗ್ರಾಮಗಳಲ್ಲಿಲ್ಲ “ಹೋಳಿ’
Team Udayavani, Mar 26, 2021, 7:11 PM IST
ಮುಂಡರಗಿ: ಪಟ್ಟಣದಲ್ಲಿ ಪಶ್ಚಿಮ ದಿಕ್ಕಿನ ಗುಡ್ಡದ ಮೇಲೆ ಶ್ರೀ ಲಕ್ಷ್ಮೀ ಕನಕ ನರಸಿಂಹ ಸ್ವಾಮಿ ದೇವಸ್ಥಾನ ಇರುವ ಕಾರಣಕ್ಕೆ ಇಲ್ಲಿನ ಜನರು ಬಣ್ಣದ ಹಬ್ಬ ಓಕಳಿ ಆಡಲ್ಲ. ರತಿ-ಮನ್ಮಥರನ್ನು ಕುಳ್ಳರಿಸಲ್ಲ.
ಇಲ್ಲಿ ಕಾಮದಹನವೂ ಇಲ್ಲ. ಹೋಳಿ ಹುಣ್ಣಿಮೆ ಹಬ್ಬದ ಆಚರಣೆಯಂತೂ ನಡೆಯುವುದೇ ಇಲ್ಲ. ಇದು ಇಲ್ಲಿನ ವೈಶಿಷ್ಟ್ಯ. ಶ್ರೀ ಲಕ್ಷ್ಮೀ ಕನಕ ನರಸಿಂಹ ಸ್ವಾಮಿ ಕಣ್ಣಿಗೆ ಕಾಣುವಷ್ಟು ದೂರದವರೆಗೂ ಬಣ್ಣ ಆಡಲ್ಲ ಎಂಬ ಮಾತು ಜನರಲ್ಲಿ ಚಾಲ್ತಿಯಲ್ಲಿದೆ. ಅಂದರೆ ಪಟ್ಟಣ ಸೇರಿ ತಾಲೂಕಿನ ಏಳು ಗ್ರಾಮಗಳಲ್ಲಿ ಬಣ್ಣದ ಹಬ್ಬ ಓಕಳಿ ಆಚರಿಸಲ್ಲ. ಪಟ್ಟಣದಲ್ಲಿ ಮಾತ್ರ ಜನರು ಶತಮಾನಗಳಿಂದ ಹೋಳಿ ಆಚರಿಸುತ್ತಿಲ್ಲ. ಹೋಳಿ ಹುಣ್ಣಿಮೆ ಆಚರಿಸುವುದಕ್ಕೆ ಸ್ಪಷ್ಟವಾದ ಇಂತಹದ್ದೇ ಕಾರಣ ಇಲ್ಲದಿದ್ದರೂ, ಪಟ್ಟಣದ ಗುಡ್ಡದ ಮೇಲೆ ಶ್ರೀ ಲಕ್ಷ್ಮೀ ಕನಕ ನರಸಿಂಹಸ್ವಾಮಿ ಆವಾಸ ಸ್ಥಾನ ಇರುವುದರಿಂದ ಹೋಳಿ ಹುಣ್ಣಿಮೆ ಸಂಪ್ರದಾಯಿಕವಾಗಿ ಆಚರಿಸುತ್ತಿಲ್ಲ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.
ನಮ್ಮೂರಾಗ ಯಾವಾಗಲೂ ಹೋಳಿ ಹುಣ್ಣಿಮೆ ಆಚರಣೆ ಇಲ್ಲ. ಹಿರಿಯರುಹೋಳಿ ಹುಣ್ಣಿಮೆ ಮಾಡಿಲ್ಲ. ಅದಕ್ಕಾಗಿ ನಾವ ಮಾಡಲ್ಲ ಎನ್ನುವುದು ಹಿರಿಯರಮಾತಾದರೆ, ಯುವ ಪೀಳಿಗೆ ಸಂಭ್ರಮದಿಂದ ಬಣ್ಣ ಎರಚಬೇಕೆನ್ನುವ ಆಶಾಭಾವಇದ್ದರೂ ಹಿಂದಿನಿಂದಲೂ ನಡೆಸಿಕೊಂಡುಬಂದ ಸಂಪ್ರದಾಯ ಉಳಿಸಿಕೊಂಡು ಹೋಗೋದು ನಮ್ಮ ಕರ್ತವ್ಯ ಎನ್ನುತ್ತಾರೆ.
ಏಳು ಗ್ರಾಮಗಳಲ್ಲಿ ಇಲ್ಲ ಓಕುಳಿ: ತಾಲೂಕಿನ ಶಿರೋಳ, ಬ್ಯಾಲವಾಡಗಿ,ರಾಮೇನಹಳ್ಳಿ, ಕಕ್ಕೂರು, ನಾಗರಹಳ್ಳಿ, ಹೆಸರೂರು, ಕೋರ್ಲಹಳ್ಳಿ, ಬೆಣ್ಣಿಹಳ್ಳಿ, ಮಕ್ತುಂಪುರ ಗ್ರಾಮಗಳಲ್ಲಿ ಹೋಳಿ ಆಚರಣೆ ನಡೆಯುವುದಿಲ್ಲ. ಏಕೆಂದರೆ, ಶ್ರಾವಣಮಾಸದಲ್ಲಿ ಲಕ್ಷ್ಮೀ ಕನಕ ನರಸಿಂಹ ಸ್ವಾಮಿಈ ಎಲ್ಲಾ ಗ್ರಾಮಗಳಿಗೆ ದಯಮಾಡಿಸಿ ತುಂಗಭದ್ರಾ ನದಿಗೆ ಹೋಗಿ ಸ್ನಾನಮಾಡುವುದರಿಂದ ಹೋಳಿ ಹುಣ್ಣಿಮೆಆಚರಿಸುವುದಿಲ್ಲ. ಆದರೆ, ಉಗಾದಿ ಹಬ್ಬ,ಶ್ರೀ ಹನುಮಂತ ದೇವರ ಜಾತ್ರೆ, ಚುನಾ ವಣೆ, ಮೊಹರಂ ಆಚರಿಸುವಾಗ ಬಣ್ಣ ಎರಚಿ ಸಂಭ್ರಮಿಸಲಾಗುತ್ತಿದೆ.
ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ಯೇಶ್ರೀ ಲಕ್ಷ್ಮೀ ಕನಕ ನರಸಿಂಹಸ್ವಾಮಿ ಜಾತ್ರೆಸಂಭ್ರಮದಿಂದ ನಡೆಸಲಾಗುತ್ತದೆ. ಶ್ರೀಲಕ್ಷ್ಮೀ ಕನಕ ನರಸಿಂಹಸ್ವಾಮಿ ಜಾತ್ರೋತ್ಸವಮಾ.28ರಿಂದ ಆರಂಭವಾಗಲಿದ್ದು, ಏ.2ಕ್ಕೆ ಮಹಾ ರಥೋತ್ಸವ ನೆರವೇರಲಿದೆ.
ನಮ್ಮೂರಿಗೆ ಲಕ್ಷ್ಮೀ ಕನಕ ನರಸಿಂಹ ಸ್ವಾಮಿ ಶ್ರಾವಣ ಮಾಸದಲ್ಲಿ ಆಗಮಿಸುವುದರಿಂದ ಸುತ್ತಲಿನ ಏಳು ಹಳ್ಳಿಗಳಲ್ಲಿ ಹಿಂದಿನಿಂದಲೂ ಹಿರಿಯರುಸಾಂಪ್ರದಾಯಿಕವಾಗಿ ಹೋಳಿ ಹುಣ್ಣಿಮೆ ಆಚರಿಸುತ್ತಿಲ್ಲ.- ಸುರೇಶ ಕ್ಯಾದಗಿಹಳ್ಳಿ, ಬೆಣ್ಣಿಹಳ್ಳಿ
ಗ್ರಾಮಸ್ಥಶ್ರಾವಣ ಮಾಸದಲ್ಲಿ ಕನಕ ನರಸಿಂಹಸ್ವಾಮಿ ಗ್ರಾಮಕ್ಕೆ ಬಂದುಹೋಗುವುದರಿಂದ ನಮ್ಮೂರಾಗ ಹೋಳಿ ಹುಣ್ಣಿಮೆ ಆಚರಿಸಲ್ಲ. ಆದರೆಉಗಾದಿಯಲ್ಲಿ ಬಣ್ಣ ಎರಚಿ ಸಂಭ್ರಮಿಸಲಾಗುತ್ತದೆ. –ಬಸವರಾಜ ಮುಂಡವಾಡ, ನಾಗರಹಳ್ಳಿ ಗ್ರಾಮಸ್ಥ
ಕೊರ್ಲಹಳ್ಳಿ ಗ್ರಾಮಕ್ಕೆ ಮುಂಡರಗಿ ಶ್ರೀ ಲಕ್ಷ್ಮೀ ಕನಕರಾಯಸ್ವಾಮಿದಯಮಾಡಿಸಿ, ತುಂಗಭದ್ರಾ ನದಿ ಆಚೆಯ ದಡಲ್ಲಿರುವ ಮದಲಗಟ್ಟಿ ಶ್ರೀಹನುಮಂತ ದೇವರ ದರ್ಶನ ಪಡೆದು ಹೋಗುವುದರಿಂದ ಕೊರ್ಲಹಳ್ಳಿ-ಮದಲಗಟ್ಟಿ ಗ್ರಾಮ ಗಳಲ್ಲಿ ಹೋಳಿ ಆಚರಿಸುವುದಿಲ್ಲ. –ನಾಗರಾಜ ಅರ್ಕಸಾಲಿ, ಕೋರ್ಲಹಳ್ಳಿ ಗ್ರಾಮಸ್ಥ
ಪಟ್ಟಣದಲ್ಲಿ ಲಕ್ಷ್ಮೀ ಕನಕ ನರಸಿಂಹಸ್ವಾಮಿ ಜಾತ್ರೆ ನಡೆಯುತ್ತದೆ. ಮೊದಲಿನಿಂದಲೂ ನಮ್ಮಲ್ಲಿ ಹೋಳಿ ಹುಣ್ಣಿಮೆ ಆಚರಿಸುತ್ತಿಲ್ಲ. ಆದರೆ, ಯುಗಾದಿ ಹಬ್ಬದಲ್ಲಿ ನಡೆಯುವ ಹನುಮಂತ ದೇವರ ಜಾತ್ರೆಯ ಮರುದಿನ ಓಕಳಿ ಆಡಲಾಗುತ್ತದೆ. ಮಂಜುನಾಥ ಇಟಗಿ, ಸಾಮಾಜಿಕ ಕಾರ್ಯಕರ್ತ, ಮುಂಡರಗಿ
-ಹು.ಬಾ.ವಡ್ಡಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…
ಆಕರ್ಷಕ ಪ್ರವಾಸಿ ತಾಣ, ಸುಂದರ ಊರು…ಸೂಡಿ ಪ್ರಾಚೀನ ಪರಂಪರೆಗೆ ಸಾಕ್ಷಿ…
Gadag; ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಕಾರು ಚಾಲಕ ಆತ್ಮಹತ್ಯೆ
Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ
Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್