ಕಳೆಗಟ್ಟಿದ ಹೋಳಿ ಹಬ್ಬದ ಸಂಭ್ರಮ
ಗಲ್ಲಿ ಗಲ್ಲಿಗಳಲ್ಲಿ ಮಾರ್ದನಿಸುತ್ತಿದೆ ಹಲಗೆಯ ಸದ್ದು
Team Udayavani, Mar 17, 2022, 5:11 PM IST
ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಹೋಳಿ ಹಬ್ಬದ ಸಂಭ್ರಮ ಕಳೆ ಕಟ್ಟಿದ್ದು, ಫೈಬರ್ ಹಲಗೆಯ ಸದ್ದು ಗಲ್ಲಿ, ಗಲ್ಲಿಗಳಲ್ಲಿ ಮಾರ್ದನಿಸುತ್ತಿದ್ದರೆ, ಚಿಣ್ಣರ ಅಣಕು ಶವಯಾತ್ರೆ ಜನರ ಗಮನ ಸೆಳೆಯುತ್ತಿದೆ.
ಭಾತೃತ್ವದ ಕೊಂಡಿ ಬೆಸೆಯುವ ಹಬ್ಬಗಳಲ್ಲಿ ಒಂದಾದ ರಂಗು, ರಂಗಿನ ಹೋಳಿ ಹಬ್ಬ ಎಲ್ಲರ ಮನಸ್ಸು ಅರಳಿಸುತ್ತಿದೆ. ದಿನ ಬೆಳಗಾದರೆ ಹಲಿಗೆ ಬಾರಿಸುವ ಯುವಕರು, ಮಕ್ಕಳು, ಬಡಾವಣೆಯಲ್ಲಿ ಕಟ್ಟಿಗೆಗಳನ್ನು ಕಳ್ಳತನ ಮಾಡಿ ಒಂದೆಡೆ ಸಂಗ್ರಹಿಸಿಡುತ್ತಿದ್ದಾರೆ. ಗೆಳೆಯರನ್ನು ಸತ್ತ ಹೆಣದಂತೆ ಅಣುಕು ಪ್ರದರ್ಶನ ಮಾಡುವುದು ಸೇರಿದಂತೆ ನಿತ್ಯ ಒಂದಿಲ್ಲೊಂದು ಬಗೆಯ ಆಟದೊಂದಿಗೆ ಜನರನ್ನು ರಂಜಿಸಿ ಹಬ್ಬದ ರಂಗು ಮತ್ತಷ್ಟು ಹೆಚ್ಚಿಸುವಂತೆ ಮಾಡಿದ್ದಾರೆ.
ರಂಗಿನ ಹೋಳಿ ಹಬ್ಬ: ಅಮಾವಾಸ್ಯೆ ಮುಗಿದ ಮಾರನೇ ದಿನ ಚಂದ್ರನ ದರ್ಶನವಾದದ್ದೇತಡ ಹೋಳಿ ಹುಣ್ಣಿಮೆ ಆರಂಭವಾಗುತ್ತದೆ. ಹಾಗಾಗಿ, ಹಲಗೆ ಬಾರಿಸುತ್ತಾ, ಬಾಯಿ ಬಡಿದುಕೊಳ್ಳುವ ಮಕ್ಕಳ ಸಂಭ್ರಮ ದಿನದಿಂದ ದಿನಕ್ಕೆ ರಂಗೇರತೊಡಗುತ್ತದೆ. ಹುಣ್ಣಿಮೆಗೆ ಇನ್ನು ನಾಲ್ಕು ದಿನ ಬಾಕಿಯಿದ್ದು, ಈಗಾಗಲೇ ಹಬ್ಬದ ರಂಗು ಎಲ್ಲೆಡೆ ಪಸರಿಸಿದೆ.
ಪೌರಾಣಿಕ ಹಿನ್ನಲೆ: ಹಿರಣ್ಯ ಕಶ್ಯಪು, ನಾನು ಎಂಬ ಅಹಂಕಾರದಲ್ಲಿ ಮುಳುಗಿ, ಹರಿ ದ್ವೇಷಿಯಾಗಿ ಸರ್ವಶಕ್ತ ನಾನೇ. ಆದ್ದರಿಂದ ಎಲ್ಲರೂ ತನ್ನನ್ನೇ ಪೂಜಿಸಬೇಕೆಂದು ಆಗ್ರಸಿದ್ದಲ್ಲದೇ, ಪೂಜೆ ಮಾಡದವರನ್ನು ಶಿಕ್ಷೆಗೆ ಒಳಪಡಿಸುತ್ತಿದ್ದ. ಅವನ ಮಗ ಮಹಾ ಹರಿ ಭಕ್ತ. ಮಗನೆಂಬ ಮಮಕಾರ ತೊರೆದು ಅವನನ್ನು ಕೊಲ್ಲಿಸಲು ನಾನಾ ಪ್ರಯತ್ನಗಳನ್ನು ಮಾಡಿದ. ಆದರೆ ಅವುಗಳು ಫಲಕಾರಿಯಾಗುವುದಿಲ್ಲ. ದುಷ್ಟ ಕಾರ್ಯದಲ್ಲಿ ಭಾಗಿಯಾದಾಗ ನಾವು ನಂಬಿದ ಶಕ್ತಿಗಳು ರಕ್ಷಿಸುವುದಿಲ್ಲ ಎಂಬುದು ಸತ್ಯ. ಹೀಗಾಗಿ, ಈ ಹಬ್ಬವನ್ನು ಹೋಳಿ, ಅಥವಾ ಹೋಲಿ ಎಂದು ಆಚರಿಸುತ್ತಾರೆ. ಪ್ರತಿ ವರ್ಷದಂತೆ ಈ ಬಾರಿಯ ಹೋಳಿ ಹಬ್ಬಕ್ಕೆ ಮಹಿಳೆಯರು, ಪುರುಷರು, ಚಿಣ್ಣರು ಯಾವುದೇ ವಯಸ್ಸಿನ ಭೇದಭಾವವಿಲ್ಲದೇ ಪರಸ್ಪರಬಣ್ಣ ಎರಚಿ ಹಬ್ಬದ ಸಂಭ್ರಮ ಸವಿಯಲು ಸನ್ನದ್ಧರಾಗಿದ್ದಾರೆ. ಹೋಳಿ ಹುಣ್ಣಿಮೆ ದಿನ ಮೊದಲು ರತಿ, ಕಾಮಣ್ಣ ದೇವರನ್ನು ಓಣಿಯಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುತ್ತಾರೆ. ಬಳಿಕ ಮಕ್ಕಳಾಗದ ಮಹಿಳೆಯರು, ಮದುವೆಯಾಗದ ಯುವಕ-ಯುವತಿಯರು ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ಹುಣ್ಣಿಮೆ ದಿನ ಮಧ್ಯರಾತ್ರಿ ಕಾಮ ದಹನ ಮಾಡಿದ ಕೆಂಡವನ್ನು ಬೆಳಗ್ಗೆ ಮನೆಗೆ ತೆಗೆದುಕೊಂಡು ಹೋಗಿ ಕಡಲೆಕಾಳು, ಗೆಣಸು, ಉಳ್ಳಾಗಡ್ಡಿ ಬೇಯಿಸಿ ಪ್ರಸಾದ ಸೇವಿಸುತ್ತಾರೆ.
ವಿವಿಧ ಬಣ್ಣಗಳು ಭೇದಭಾವ ಪ್ರತಿನಿಧಿಸುವುದು. ಎಲ್ಲ ಬಣ್ಣಗಳನ್ನು ಎಲ್ಲರೂ ಎರಚುವುದು ಸಹಿಷ್ಣುತೆಯ ಸಂಕೇತ. ಎಲ್ಲ ಬಣ್ಣ ಸೇರಿ ಬಿಳಿಯ ಬಣ್ಣವಾಗುವಂತೆ ಭೇದ ಮರೆತು ಶುದ್ಧ ಮನಸ್ಸಿನಿಂದ ಹಬ್ಬ ಆಚರಿಸುವ ಮೂಲಕ ಒಗ್ಗಟಿಗೆ ನಾಂದಿ ಹಾಡುವುದು ಹಬ್ಬದ ವಿಶೇಷ.
ಹಿರಿಯ-ಕಿರಿಯರೆನ್ನದೇ, ಜಾತಿ ಭೇದಭಾವ ಮರೆತು ಭಾವೈಕ್ಯತೆಯಿಂದ ಆಚರಿಸುವ ಹೋಳಿ ಹಬ್ಬ ಇದೊಂದು ರಂಗು-ರಂಗಿನ ಜಗತ್ತನ್ನು ಬಿಚ್ಚಿಡುವ ಮಹತ್ವಪೂರ್ಣ ಹಬ್ಬವಾಗಿದೆ. ಓಕುಳಿಯಲ್ಲಿ ಮಿಂದೇಳುವುದೇ ಒಂದು ಸಂಭ್ರಮೋಲ್ಲಾಸ. ಆದರೆ, ಕಳೆದ ವರ್ಷ ಕೋವಿಡ್ ನಿಂದಾಗಿ ಬಣ್ಣದೋಕುಳಿ ಕಳೆಗುಂದಿತ್ತು. ಈ ಬಾರಿ ಅದ್ಧೂರಿಯಾಗಿ ರಂಗಿನ ಹಬ್ಬ ಆಚರಿಸುತ್ತೇವೆ.
– ರವಿಚಂದ್ರ ಕುಂಬಾರ, ಯುವಕ
–ಡಿ.ಜಿ. ಮೋಮಿನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.