ಎಪಿಎಂಸಿಗೆ ತಂದ ಹಣ್ಣು -ತರಕಾರಿ ಖರೀದಿಸುವರಿಲ್ಲ

ಲಾಕ್‌ಡೌನ್‌ನಲ್ಲಿ ತರಕಾರಿ ಸರಬರಾಜಿಗೆ ಅವಕಾಶ | ಬಾರದ ವ್ಯಾಪಾರಿಗಳು | ತಂದ ಮಾಲು ಖರೀದಿಸುತ್ತಿಲ್ಲ ದಲ್ಲಾಳಿಗಳು

Team Udayavani, Apr 8, 2020, 4:50 PM IST

08-April-31

ಹುಬ್ಬಳ್ಳಿ: ಕೊರೊನಾ ವೈರಸ್‌ ರೈತರ ಪಾಲಿಗೆ ಮಾತ್ರ ಕಣ್ಣೀರು ಸುರಿಸುವಂತೆ ಮಾಡಿದೆ. ಒಂದೆಡೆ ಲಾಕ್‌ಡೌನ್‌ನಿಂದ ಸಮಸ್ಯೆಯಾಗಿದ್ದರೆ, ಇನ್ನೊಂದೆಡೆ ತಾವು ಬೆಳೆದ ಬೆಳೆ ಕಣ್ಣೆದುರಲ್ಲೇ ಹಾಳಾಗುತ್ತಿರುವುದನ್ನು ಕಂಡರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ ಅನ್ನದಾತರದ್ದಾಗಿದೆ.

ರೈತರು ತಾವು ಕಷ್ಟಪಟ್ಟು ಬೆಳೆದ ತರಕಾರಿ, ಹಣ್ಣು-ಹಂಪಲ ಹಾಗೂ ಇತರೆ ಬೆಳೆಯನ್ನು ಮಾರುಕಟ್ಟೆಗೆ ತಂದರೂ ಲಾಕ್‌ಡೌನ್‌ ಆಗಿದ್ದರಿಂದ ಅದನ್ನು ಕೊಳ್ಳುವವರೇ ಇಲ್ಲದಂತಾಗಿದೆ. ಸಗಟು ವ್ಯಾಪಾರಿಗಳು, ದಲ್ಲಾಳಿಗಳು ಸಹ ವ್ಯಾಪಾರವೇ ಇಲ್ಲ ಖರೀದಿದಾರರೂ ಬರುತ್ತಿಲ್ಲ. ನಮಗೆ ನಿಮ್ಮ ಬೆಳೆ ಬೇಡವೆಂದು ವಾಪಸ್ಸು ಕಳುಹಿಸುತ್ತಿದ್ದಾರೆ. ಹೀಗಾಗಿ ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರಲಾಗದೆ ಕಣ್ಣೆದುರಲ್ಲೇ ಅವು ಹಾಳಾಗುವುದನ್ನು ನೋಡುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಮಾರುಕಟ್ಟೆ ಹಾಗೂ ಊರು ಮಾರ್ಗಗಳೇ ಬಂದ್‌: ಬೆಳಗಾವಿ ಸೇರಿದಂತೆ ಆ ಜಿಲ್ಲೆಯ ಬಹುತೇಕ ಪಟ್ಟಣ, ಗ್ರಾಮಗಳಿಗೆ ಪ್ರವೇಶ ಬಂದ್‌ ಮಾಡಲಾಗಿದೆ. ಹೀಗಾಗಿ ಬೆಳಗಾವಿಯ ಮಾರುಕಟ್ಟೆಗೆ ಕಾಯಿಪಲ್ಲೆ, ಹಣ್ಣು-ಹಂಪಲ ಸೇರಿದಂತೆ ರೈತರು ಬೆಳೆದ ಯಾವುದೇ ಉತ್ಪನ್ನಗಳನ್ನು ಸಾಗಿಸಲಾಗುತ್ತಿಲ್ಲ. ಆ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದ್ದ ಕೃಷಿ ಉತ್ಪನ್ನ ಹುಬ್ಬಳ್ಳಿ ಮಾರುಕಟ್ಟೆಗೆ ಬರುತ್ತಿದೆ. ಆದರೆ ಕೊಳ್ಳುವವರೇ ಇಲ್ಲದ್ದರಿಂದ ರೈತರು ತಂದ ಮಾಲನ್ನು ವ್ಯಾಪಾರಸ್ಥರು ವಾಪಸ್ಸು ಕಳುಹಿಸುತ್ತಿದ್ದಾರೆ. ರೈತರು ಬೆಳೆಯನ್ನು ವಾಪಸ್‌ ಒಯ್ಯಲೂ ಆಗದೆ, ಬಿಟ್ಟು ಹೋಗಲೂ ಆಗದೆ ಕಣ್ಣೀರು ಹಾಕುತ್ತಿದ್ದಾರೆ. ಫಸಲು ತಂದ ವಾಹನದ ಬಾಡಿಗೆಯೂ ಸಿಗುತ್ತಿಲ್ಲವೆಂದು ಗೋಳಾಡುತ್ತಿದ್ದಾರೆ.

ಕಾಯಂ ರೈತರ ಮಾಲು ಖರೀದಿಯೆ ದುಸ್ತರ: ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಮತ್ತು ಸಗಟು ವ್ಯಾಪಾರಸ್ಥರಿಗೆ ಕಾಯಂ ಆಗಿ ಕೆಲ ರೈತರು ತಾವು ಬೆಳೆದ ಬೆಳೆ ತಂದು ಕೊಡುತ್ತಾರೆ. ಆದರೆ ಈ ಬಾರಿ ಕೊರೊನಾ ವೈರಸ್‌ ತಡೆಗಾಗಿ ಲಾಕ್‌ಡೌನ್‌ದಿಂದಾಗಿ ಮಾರುಕಟ್ಟೆಯೇ ಸ್ತಬ್ಧಗೊಂಡಿದೆ. ಜನರು ಅಗತ್ಯ ವಸ್ತುಗಳ ಖರೀದಿಗೆ ಹೆಚ್ಚಿನ ಒತ್ತು ಕೊಡುತ್ತಿದ್ದಾರೆ. ಇದರ ಪರಿಣಾಮವಾಗಿ ವ್ಯಾಪಾರಸ್ಥರು, ದಲ್ಲಾಳಿಗಳು ರೈತರಿಂದ ಮಾಲು ಪಡೆಯುತ್ತಿದ್ದವರು ಈಗ ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ನಾವು ರೈತರಿಂದ ಮಾಲು ಪಡೆದುಕೊಂಡರೆ ಅದು ಮಾರಾಟವಾಗದೆ ಹಾನಿಯಾದರೆ ನಾವೇ ನಷ್ಟ ಭರಿಸಬೇಕಾಗುತ್ತದೆ ಎನ್ನುತ್ತಿದ್ದಾರೆ ವ್ಯಾಪಾರಸ್ಥರು, ದಲ್ಲಾಳಿಗಳು. ಒಂದೆಡೆ ಕೊರೊನಾ ವೈರಸ್‌ ಭಯ ಕಾಡುತ್ತಿದ್ದರೆ ಇನ್ನೊಂದೆಡೆ ಲಾಕ್‌ ಡೌನ್‌ದಿಂದ ರೈತರು ಮಾತ್ರ ಬೆಳೆ ಮಾರಾಟವಾಗದೆ ಹಾಳಾಗುತ್ತಿರುವುದನ್ನು ಕಂಡು ತತ್ತರಗೊಂಡಿದ್ದು ಅವರ ಪಾಡು ಹೇಳತೀರದಾಗಿದೆ.

ನಗರದ ಸುತ್ತಮುತ್ತಲಿನ ಹಾಗೂ ಸ್ಥಳೀಯ ರೈತರಷ್ಟೆ ಎಪಿಎಂಸಿಗೆ ತಮ್ಮ ಮಾಲು ತಂದು ಕೊಡುತ್ತಾರೆ. ಇನ್ನುಳಿದೆಡೆ ದೂರದ ಊರಿನ ರೈತರು ಇಲ್ಲಿಗೆ ಬರುವುದು ಬಹಳ ಕಡಿಮೆ. ತೋಟದಲ್ಲಿಯೆ ವ್ಯಾಪಾರಿಗಳಿಂದ ಹಣ ಪಡೆದು ತಮ್ಮ ಮಾಲು ಮಾರಾಟ ಮಾಡುತ್ತಾರೆ. ರೈತರಿಂದ ಮೊದಲೇ ಮಾಲು ಪಡೆದಂತಹ ವ್ಯಾಪಾರಿಗಳು ಲಾಕ್‌ಡೌನ್‌ ಆಗಿದ್ದರಿಂದ ತುಂಬಾ ನಷ್ಟ ಅನುಭವಿಸುವಂತಾಗಿದೆ ಎಂಬುದು ದಲ್ಲಾಳಿ ವ್ಯಾಪಾರಸ್ಥರ ಗೋಳಾಗಿದೆ.

ಕೊರೊನಾ ವೈರಸ್‌ ಭೀತಿಯಿಂದಾಗಿ ಮಾರುಕಟ್ಟೆಯು ಸ್ತಬ್ಧಗೊಂಡಿದೆ. ಗ್ರಾಹಕರು ಭಯದಿಂದಾಗಿ ಮಾಲು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಚಿಲ್ಲರೆ ವ್ಯಾಪಾರಿಗಳಿಂದಲೂ ಖರೀದಿ ಕಡಿಮೆಯಾಗಿದ್ದು, ವ್ಯಾಪಾರವೂ ಅಷ್ಟಕ್ಕಷ್ಟೆ ಆಗಿದೆ. ಕಾರಣ ರೈತರಿಂದ ಪಡೆದ ಮಾಲು ಮಾರಾಟವಾಗದೆ ಹಾನಿ ಅನುಭವಿಸುವಂತಾಗಿದೆ. ಪೊಲೀಸರು ಬೆಳಗ್ಗೆ ಒಂದೆರಡು ತಾಸು ಮಾತ್ರ ಮಾರಾಟಕ್ಕೆ ಅವಕಾಶ ನೀಡುತ್ತಿದ್ದಾರೆ. ಇದರಿಂದ ಕೆಲ ರೈತರು ಮಾರುಕಟ್ಟೆಗೆ ಮಾಲು ತರಲು ಹಿಂಜರಿಯುತ್ತಿದ್ದಾರೆ.
ಹೆಸರು ಹೇಳಲಿಚ್ಛಿಸದ ದಲ್ಲಾಳಿ ವ್ಯಾಪಾರಿ

ಶಿವಶಂಕರ ಕಂಠಿ

ಟಾಪ್ ನ್ಯೂಸ್

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

1-pak

ODI; ಜಿಂಬಾಬ್ವೆ ಎದುರು ಪಾಕ್‌ಗೆ 2-1 ಸರಣಿ

1-wqewqe

Pro Kabaddi:ಯುಪಿ, ತೆಲುಗು ಜಯಭೇರಿ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-mundaragi

Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ

ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

1-eeeeega

Iga Swiatek doping ban ; ತಿಂಗಳ ನಿಷೇಧಕ್ಕೆ ಒಪ್ಪಿಗೆ

1-pak

ODI; ಜಿಂಬಾಬ್ವೆ ಎದುರು ಪಾಕ್‌ಗೆ 2-1 ಸರಣಿ

1-wqewqe

Pro Kabaddi:ಯುಪಿ, ತೆಲುಗು ಜಯಭೇರಿ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.