Darshan ಅಭಿಮಾನಿಗಳಿಂದಾಗಿ ಶ್ರವಣ ಶಕ್ತಿ ಕಳೆದುಕೊಂಡೆ: ಡಾ. ಗೊ.ರು.ಚನ್ನಬಸಪ್ಪ
ಹಿರಿಯ ಸಾಹಿತಿ, ನಾಡೋಜ ಹೇಳಿದ್ದೇನು?
Team Udayavani, Oct 14, 2024, 7:40 PM IST
ಗದಗ: ಚಿತ್ರನಟ ದರ್ಶನ(Darshan) ಅಭಿಮಾನಿಗಳಿಂದಾಗಿ ಶ್ರವಣ ಶಕ್ತಿ ಕಳೆದುಕೊಂಡೆ ಎಂದು ಹಿರಿಯ ಸಾಹಿತಿ ನಾಡೋಜ ಡಾ. ಗೊ.ರು. ಚನ್ನಬಸಪ್ಪ ಬೇಸರ ವ್ಯಕ್ತಪಡಿಸಿದರು.
ನಗರದ ತೋಂಟದಾರ್ಯ ಮಠದ ಶಿವಾನುಭವ ಮಂಟಪದಲ್ಲಿ ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ 6ನೇ ಪುಣ್ಯಸ್ಮರಣೆ ಅಂಗವಾಗಿ ಸೋಮವಾರ(ಅ14) ಹಮ್ಮಿಕೊಂಡಿದ್ದ ಮರಣವೇ ಮಹಾನವಮಿ ಆಚರಣೆ ಕಾರ್ಯಕ್ರಮದಲ್ಲಿ ಡಾ| ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
‘ಇಂದು ಮಾಧ್ಯಮಗಳಲ್ಲಿ ಪ್ರತಿನಿತ್ಯ ಪ್ರಚಲಿತದಲ್ಲಿರುವ ಚಿತ್ರನಟ ದರ್ಶನ್ ಜನ್ಮದಿನದ ಸಂದರ್ಭದಲ್ಲಿ ಬೆಂಗಳೂರಿನ ನಿವಾಸದ ಪಕ್ಕದಲ್ಲಿ ಸೇರಿದ್ದ ಅಭಿಮಾನಿಗಳು ಸಿಡಿಸಿದ ಭಾರಿಸಿಡಿಮದ್ದಿನ ಸದ್ದಿನಿಂದ ನಾನು ನನ್ನ ಶ್ರವಣ ಶಕ್ತಿಯನ್ನು ಕಳೆದುಕೊಳ್ಳಬೇಕಾಯಿತು’ ಎಂದು ಅಸಮಾಧಾನ ಹೊರಹಾಕಿದರು.
’97ರ ವಯಸ್ಸಿನಲ್ಲೂ ಸ್ಪಷ್ಟವಾಗಿ ಮಾತನಾಡಬಲ್ಲೆ, ನಡೆದಾಡಬಲ್ಲೆನು. ಆದರೆ, ಇಂದಿನ ಕಾರ್ಯಕ್ರಮದಲ್ಲಿ ತಾವೆಲ್ಲರೂ ಮಾತನಾಡುವ ಪದಗಳನ್ನು ಕೇಳಿಸಿಕೊಳ್ಳಲಾಗದಷ್ಟು ಶ್ರವಣದೋಷವನ್ನು ಅನುಭವಿಸುತ್ತಿದ್ದೇನೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಫೆ.11ರಿಂದ ಹೂಡಿಕೆದಾರರ ಸಮಾವೇಶ: ಸ್ಟಾರ್ಟಪ್ ಪ್ರೋತ್ಸಾಹಕ್ಕೆ 3 ಲ. ಡಾಲರ್
ಬಿಜೆಪಿಯಲ್ಲಿ ಮುನ್ನೂರು ಬಾಗಿಲು: ಸಚಿವ ಮಧು ಬಂಗಾರಪ್ಪ ತಿರುಗೇಟು
Mandya: ವಿಸಿ ನಾಲೆಗೆ ಕಾರು ಬಿದ್ದು ಇಬ್ಬರ ದುರ್ಮರಣ, ಒಬ್ಬ ನಾಪತ್ತೆ, ಮತ್ತೊಬ್ಬನ ರಕ್ಷಣೆ
World Cancer ದಿನದ ಅಂಗವಾಗಿ ಕ್ಯಾನ್ಸರ್ ಗೆದ್ದವರಿಗೆ ಪಿಕಲ್‌ಬಾಲ್ ಪಂದ್ಯಾವಳಿ ಆಯೋಜನೆ
BJP Rift;ಯಡಿಯೂರಪ್ಪ, ಮಗನ ಕರ್ಮಕಾಂಡಗಳ ಬಗ್ಗೆ ಹೇಳಲು ನಾಳೆ ದೆಹಲಿಗೆ: ಯತ್ನಾಳ್