ತಂದೆ-ತಾಯಿ ಸೇವೆ ಮಾಡಿದರೆ ಬದುಕು ಸಾರ್ಥಕ
•ಲಿ| ಶರಣ ಎಚ್.ಎಸ್.ಪಾಟೀಲ ಸಂಸ್ಮರಣಾ ಗ್ರಂಥ ಬಿಡುಗಡೆ •ಪಾಟೀಲ ಪ್ರತಿಷ್ಠಾನ ಉದ್ಘಾಟನೆ
Team Udayavani, Jul 8, 2019, 10:35 AM IST
ಮುಂಡರಗಿ: ಲಿ| ಶರಣ ಎಚ್.ಎಸ್. ಪಾಟೀಲ ಸಂಸ್ಮರಣೆ ಗ್ರಂಥವನ್ನು ನಾಡೋಜ ಡಾ| ಪಾಟೀಲ ಪುಟ್ಟಪ್ಪ ಬಿಡುಗಡೆ ಮಾಡಿದರು.
ಮುಂಡರಗಿ: ಮಕ್ಕಳು ತಂದೆ-ತಾಯಿ ಜೋಪಾನ ಮಾಡುವುದರಿಂದ ಬದುಕು ಸಾರ್ಥಕವಾಗಲಿದೆ ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಮುಜರಾಯಿ ಖಾತೆ ಸಚಿವ ಪಿ.ಟಿ. ಪರಮೇಶ್ವರ ನಾಯಕ ಹೇಳಿದರು.
ಪಟ್ಟಣದ ಜ| ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಕಲ್ಯಾಣ ಮಂಟಪದಲ್ಲಿ ರವಿವಾರ ನಡೆದ ಲಿ| ಶರಣ ಎಚ್.ಎಸ್.ಪಾಟೀಲ ಸಂಸ್ಮರಣೆ ಗ್ರಂಥ ಬಿಡುಗಡೆ, ಎಚ್.ಎಸ್. ಪಾಟೀಲ ಪ್ರತಿಷ್ಠಾನ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ತಂದೆ-ತಾಯಿ ನೋಡಿಕೊಳ್ಳುವ ಸಂಸ್ಕೃತಿ, ಸಂಸ್ಕಾರ ಜೀವಂತವಾಗಿದೆ. ಮಕ್ಕಳು ಹೊಣೆಗಾರಿಕೆ ಅರಿತುಕೊಂಡು ಪಾಲಕರ ಪೋಷಣೆಯಲ್ಲಿ ತೊಡಗಿಸಿಕೊಳ್ಳಬೇಕು. ಕುಟುಂಬದ ವ್ಯವಸ್ಥೆ ಪಾಲಕರು ಮತ್ತು ಮಕ್ಕಳನ್ನು ಭಾವನಾತ್ಮಕವಾಗಿ ಬೆಸೆದಿದೆ. ಆದ ಕಾರಣ ಹಳ್ಳಿ ಬದುಕು ಸಾಮರಸ್ಯದಿಂದ ಕೂಡಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಜಗದ್ಗುರು ನಾಡೋಜ ಡಾ| ಅನ್ನದಾನೀಶ್ವರ ಮಹಾಸ್ವಾಮೀಜಿ ಮಾತನಾಡಿ, ನೆನಪು ನಿರಂತರವಾಗಿ ಉಳಿಯಲು
ಸಂಸ್ಮರಣೆ ಗ್ರಂಥ ಉಪಯುಕ್ತವಾಗುತ್ತದೆ. ಒಬ್ಬ ಗುಣಶೀಲ ತಂದೆ ಮಕ್ಕಳನ್ನು ಬೆಳೆಸುವ ರೀತಿಯಲ್ಲಿ ಶಿಕ್ಷಣ ನೀಡಿದಾಗಲೇ ಸಮಾಜಕ್ಕೆ ಒಳಿತಾಗಲಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಡಾ| ತೋಂಟದ ಸಿದ್ದರಾಮ ಮಹಾಸ್ವಾಮೀಜಿ ಮಾತನಾಡಿ, ಸಮಾಜಕ್ಕೆ ಪರೋಪಕಾರಿಯಾಗಿ ಬದುಕುವುದೇ ಸಾರ್ಥಕ ಜೀವನವಾಗಲಿದೆ. ಆಸೆಯನ್ನು ದಾಸ್ಯತ್ವಕ್ಕೆ ತಳ್ಳಿ ಇರುವುದರಲ್ಲಿಯೇ ತೃಪ್ತಿ ಕಾಣುವ ಮನಸ್ಸು ದೊಡ್ಡದಾಗಲಿದೆ. ತ್ಯಾಗದ ಮೂಲಕ ಅಮೃತ್ವದ ಅಮರತ್ವವನ್ನು ಸಮಾಜದಲ್ಲಿ ಪಡೆದರೇ ಜೀವನ ಸಾರ್ಥಕವಾಗಲಿದೆ. ಉದಾತ್ತ ಮನೋಭಾವ, ತ್ಯಾಗದ ಮೂಲಕ ವ್ಯಕ್ತಿ ಶಾಶ್ವತವಾಗಿ ಜನಮಾನಸದಲ್ಲಿ ಉಳಿಯುತ್ತಾನೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಒಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುವುದರಿಂದಲೇ ಕುಟುಂಬ ಶರಣತ್ವದೆಡೆಗೆ ಸಾಗುತ್ತದೆ.ಅಂತಹ ಬದುಕನ್ನು ಎಚ್.ಎಸ್. ಪಾಟೀಲ ನಡೆಸಿ ಮಕ್ಕಳಿಗೆ ಸಂಸ್ಕಾರ ಕೊಟ್ಟಿದ್ದಾರೆ ಎಂದು ಹೇಳಿದರು.
ನಾಡೋಜ ಡಾ| ಪಾಟೀಲ ಪುಟ್ಟಪ್ಪ ಲಿ| ಎಚ್.ಎಸ್. ಪಾಟೀಲ ಅವರ ಸದ್ಗುಣಶೀಲ ಗ್ರಂಥ ಬಿಡುಗಡೆ ಮಾಡಿದರು. ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮೀಜಿ, ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಎ.ಬಿ. ಹಿರೇಮಠ ಮಾತನಾಡಿದರು.
ಮಾಜಿ ಸಂಸದ ಐ.ಜಿ. ಸನದಿ, ಶಾಸಕ ರಾಮಣ್ಣ ಲಮಾಣಿ, ಶ್ರೀ ಶಿವಕುಮಾರಸ್ವಾಮೀಜಿ, ಶ್ರೀ ಗುರು ಮುದುಕೇಶ್ವರ ಶಿವಾಚಾರ್ಯರು, ಮಹಾಂತಸ್ವಾಮೀಜಿ, ಗೋಣಿರುದ್ರ ದೇವರು, ಶರಣ ಬಸವ ದೇವರು. ಕಮಲಮ್ಮ ಹ. ಪಾಟೀಲ, ಶೋಭಾ ಮೇಟಿ, ಜಗದೀಶಪ್ಪ ಬಣಕಾರ, ಗುರುಮೂರ್ತಿಸ್ವಾಮಿ ಕಟ್ಟಿಮನಿ, ಅಂದಪ್ಪ ಅಕ್ಕಿ, ವಾರದ ಗೌಸ್, ಚಿದಾನಂದ ವಕೀಲರು, ಪರಮೇಶ್ವರಪ್ಪ ಇದ್ದರು.
ಶಂಕರ ಕುಕನೂರು ಕವನ ವಾಚಿಸಿದರು. ಲಿಂಗರಾಜಗೌಡ ಪಾಟೀಲ ಸ್ವಾಗತಿಸಿದರು. ಎಸ್.ಬಿ.ಕೆ. ಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಕೆ. ಮುಲ್ಲಾನವರ, ನಿಂಗೂ ಸೊಲಗಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.