ಅಸಮರ್ಪಕ ವಿದ್ಯುತ್ ಪೂರೈಕೆ: ಹೆಸ್ಕಾಂ ಕಚೇರಿಗೆ ಮುತ್ತಿಗೆ
Team Udayavani, Mar 10, 2021, 6:05 PM IST
ಶಿರಹಟ್ಟಿ: ಅಸಮರ್ಪಕ ವಿದ್ಯುತ್‌ಪೂರೈಕೆ ಹಾಗೂ ಕಚೇರಿಯಲ್ಲಿ ಸಿಬ್ಬಂದಿಇಲ್ಲದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ತಾಲೂಕಿನವಡವಿ-ಹೊಸೂರ, ಅಲಗಿಲವಾಡ, ಮಾಚೇನಹಳ್ಳಿ, ದೇವಿಹಾಳ ಸೇರಿದಂತೆ ವಿವಿಧ ಗ್ರಾಮಗಳ ರೈತರು ಮಂಗಳವಾರ ಬೆಳ್ಳಟ್ಟಿಹೆಸ್ಕಾಂ ಕಚೇರಿ ಬೀಗ ಒಡೆದು ಒಳನುಗ್ಗಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ರೈತ ರಾಜೀವ್‌ರೆಡ್ಡಿ ಬಮ್ಮನಕಟ್ಟಿ, ಬೆಳ್ಳಟ್ಟಿ ಫೀಡರ್‌ನಿಂದ ರೈತರ ಪಂಪ್‌ಸೆಟ್‌ಗಳಿಗೆಪೂರೈಕೆಯಾಗುವ ವಿದ್ಯುತ್ ಸರಬರಾಜಿಗೆ ಯಾವುದೇ ಸಮಯ ನಿಗದಿ ಮಾಡಿಲ್ಲ.ತಮಗೆ ಬೇಕಾದಾಗ ವಿದ್ಯುತ್ ಸರಬರಾಜು ಮಾಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ.ಸಧ್ಯ ಬೇಸಿಗೆ ಕಾಲ ಇರುವುದರಿಂದ ಬೆಳೆಗಳಿಗೆಸರಿಯಾದ ಸಮಯಕ್ಕೆ ನೀರು ಹಾಯಿಸದಿದ್ದರೆಸಾಲ-ಶೂಲ ಮಾಡಿ ಬಿತ್ತಿದ ಬೆಳೆಗಳು ಒಣಗಿ ಹೋಗಿ ಅಪಾರ ನಷ್ಟ ಉಂಟಾಗಲಿದೆ.
ಇದನ್ನು ಸರಿಪಡಿಸುವಂತೆ ಬೆಳ್ಳಟ್ಟಿಯ ಎಸ್‌ಒ ಹಾಗೂ ಸಿಬ್ಬಂದಿಗೆ ಸಾಕಷ್ಟು ಬಾರಿ ಮನವಿಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ,ನಮಗೆ ಹಗಲು ಸಮಯದಲ್ಲಿಯೇಸಮರ್ಪಕ ವಿದ್ಯುತ್ ಪೂರೈಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಹೆಸ್ಕಾಂ ಎಇಇ ಎಂ.ಟಿ.ದೊಡ್ಡಮನಿ, ಬೇಸಿಗೆ ಇರುವುದರಿಂದ ವಿದ್ಯುತ್ ಪೂರೈಕೆಯಲ್ಲಿವ್ಯತ್ಯಯವಾಗುತ್ತಿದೆ. ಸಿಬ್ಬಂದಿಗೆ ಸೂಕ್ತನಿರ್ದೇಶನ ನೀಡಿ ರೈತರ ಬೇಡಿಕೆ ಈಡೇರಿಸಲು ಕ್ರಮ ಕೈಕೊಳ್ಳಲಾಗುವುದು ಎಂದರು. ಹೆಸ್ಕಾಂಎಇಇ ಸೂಕ್ತ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.
ಈ ವೇಳೆ ಹನುಮಂತ ಬಾಲೇಹೊಸೂರು,ಸುಭಾಸ ಕೊಂಚಿಗೇರಿ, ಪ್ರವೀಣ ಅಳವಂಡಿ,ಹನುಮರೆಡಿ ಆನ್ವೇರಿ, ಮಹೇಶ ಬಾಗೇವಾಡಿ,ಅಶೋಕರೆಡ್ಡಿ ಹುಲ್ಲೂರ, ಶ್ರೀಧರ ಹುಲ್ಲೂರ, ನಾಗರಾಜ ತಳವಾರ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.