![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 8, 2019, 10:09 AM IST
ಲಕ್ಷ್ಮೇಶ್ವರ: ತಾಲೂಕು ವಾಲ್ಮೀಕಿ ನಾಯಕ ಸಂಘದವರು ಮೀಸಲಾತಿ ಹೆಚ್ಚಿಸುವಂತೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಲಕ್ಷ್ಮೇಶ್ವರ: ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಆಗ್ರಹಿಸಿ ತಾಲೂಕು ವಾಲ್ಮೀಕಿ ನಾಯಕ ಸಂಘದವರು ತಹಶೀಲ್ದಾರ್‌ಗೆ ಶುಕ್ರವಾರ ಮನವಿ ಸಲ್ಲಿಸಿದರು.
ಕೇಂದ್ರ ಈಗಾಗಲೇ ಎಸ್‌ಟಿ ಜನಾಂಗಕ್ಕೆ ಶೇ 7.5 ಮೀಸಲಾತಿ ನೀಡುತ್ತಿದೆ. ಆದರೆ ರಾಜ್ಯದಲ್ಲಿ ಸುಮಾರು 60-70 ಲಕ್ಷ ಎಸ್‌ಟಿ ಜನಾಂಗವಿದ್ದು, ಇವರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಈ ಜನಾಂಗದವರಿಗೆ ನೇಮಕಾತಿ, ಮುಂಬಡ್ತಿ ಸಮಯದಲ್ಲಿ ಕೇಂದ್ರ ಮೀಸಲಾತಿಯನ್ನೇ ರಾಜ್ಯದಲ್ಲೂ ನೀಡಬೇಕು.
ಎಸ್‌ಟಿ ಜನಾಂಗದ ಹೆಸರಿನಲ್ಲಿ ಬೇರೆ ಬೇರೆ ಜಾತಿಯವರು ಸರ್ಟಿಪಿಕೇಟ್ ಪಡೆದುಕೊಂಡು ಸರ್ಕಾರದ ಲಾಭ ಪಡೆಯುತ್ತಿದ್ದು, ನಿಜವಾದ ಎಸ್‌ಟಿ ಜನಾಂಗದವರಿಗೆ ಅನ್ಯಾಯವಾಗುತ್ತಿದೆ. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ವಿವಿಧ ಹಂತಗಳಲ್ಲಿ ಲಾಭ ಪಡೆದಿರುವವರನ್ನು ಪತ್ತೆ ಹಚ್ಚಲು ಸತ್ಯ ಶೋಧನಾ ಸಮಿತಿ ರಚಿಸಬೇಕು. ಪ್ರತ್ಯೇಕ ಪ. ಪಂಗಡದ ಸಚಿವಾಲಯ ಮತ್ತು ಸಂವಿಧಾನಾತ್ಮಕವಾಗಿ ಎಲ್ಲ ಸೌಲಭ್ಯಗಳನ್ನು ಎಸ್‌ಟಿ ಜನಾಂಗಕ್ಕೆ ನೀಡಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಭ್ರಮರಾಂಭ ಗುಬ್ಬಿಶೆಟ್ಟರ, ಜಿಲ್ಲಾಧಿಕಾರಿಗಳಿಗೆ ತಲುಪಿಸುವುದಾಗಿ ಹೇಳಿದರು. ತಾಲೂಕು ಅಧ್ಯಕ್ಷ ಚಂದ್ರಶೇಖರ ತಳವಾರ, ಪ್ರ. ಕಾರ್ಯದರ್ಶಿ ಎಚ್.ಟಿ. ಜಾಲಿಮರದ, ಎಂ.ಬಿ. ಕಗ್ಗಲಗೌಡರ, ರಾಜಶೇಖರ ಮೇಲ್ಮರಿ, ಕೆ.ಒ. ಹುಲಿಕಟ್ಟಿ, ಕೆ.ಎಚ್. ಗಂಗಣ್ಣವರ, ಮಂಜುನಾಥ ಶಿರಹಟ್ಟಿ, ಎನ್.ಕೆ. ಜಂತ್ಲಿ, ಯಲ್ಲಪ್ಪ ತಳವಾರ, ಭೀಮಪ್ಪ ಯಂಗಾಡಿ, ಆರ್.ಎಚ್. ತಳವಾರ, ಪಿ.ಎಸ್. ಕಗ್ಗಲಗೌಡರ, ಎಲ್.ಬಿ. ಕೋಳಿವಾಡ ಸೇರಿ ಅನೇಕರು ನಿಯೋಗದಲ್ಲಿದ್ದರು.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು
Gadag: ಕೌಟುಂಬಿಕ ಕಲಹದಿಂದ ನೊಂದು ಪೊಲೀಸ್ ಪೇದೆ ಆತ್ಮಹ*ತ್ಯೆ!
Approve:ಮೈಕ್ರೋ ಫೈನಾನ್ಸ್ ಕಿರುಕುಳ ವಿರುದ್ಧದ ಸುಗ್ರೀವಾಜ್ಞೆಗೆ ಕೊನೆಗೂ ರಾಜ್ಯಪಾಲರ ಅಂಕಿತ
Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.