ಹುರುಳಿನ ಬೆಳೆಯತ್ತ ಹೆಚ್ಚಿದ ರೈತರ ಒಲವು

Team Udayavani, Nov 10, 2018, 4:08 PM IST

10-november-20.gif

ಗಜೇಂದ್ರಗಡ: ಹಸುವಿನ ಆಹಾರವೆಂದೇ ಪರಿಗಣಿಸಲ್ಪಟ್ಟಿದ್ದ ಹುರುಳಿ ಬೀಜದಲ್ಲಿ ರೋಗ ನಿರೋಧಕ ಶಕ್ತಿ ಇದೆ ಎನ್ನುವ ಕಾರಣದಿಂದಾಗಿ ಇದೀಗ ಮಾರುಕಟ್ಟೆಯಲ್ಲಿ ಹುರುಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಹೀಗಾಗಿ ತಾಲೂಕಿನಾದ್ಯಾಂತ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಹುರುಳಿ ಬೆಳೆ ಬೆಳೆದಿದ್ದು, ಫಸಲು ನಳನಳಿಸುತ್ತಿದೆ.

ಯಾವಾಗಲು ಶೇಂಗಾ, ಸೂರ್ಯಕಾಂತಿ, ಗೋವಿನ ಜೋಳ ಹಾಗೂ ಹತ್ತಿಯಂತಹ ವಾಣಿಜ್ಯ ಬೆಳೆ ಬೆಳೆದು ನಷ್ಟ ಅನುಭವಿಸಿ ಸಾಲಕ್ಕೆ ತುತ್ತಾದ ರೈತರು ಇನ್ನೇನು ಭೂಮಿ ಬಂಜರು ಗೆಡುವಬಾರದು ಎಂಬ ಕಾರಣಕ್ಕೆ ಕೊನೆಗೆ ಹಸುವಿಗೆ ಆಹಾರವಾದರೂ ಆಗಲಿ ಎಂದು ಬೇಕಾ ಬಿಟ್ಟಿಯಾಗಿ ಹುರಳಿ ಬೆಳೆದಿದ್ದರು. ಇದಕ್ಕೆ ಈಗ ಬೇಡಿಕೆ ಬಂದಿದೆ.

ಕಾಲಕಾಲೇಶ್ವರ, ಬೆಣಚಮಟ್ಟಿ, ಗೊಗೇರಿ, ಬೈರಾಪುರ, ಕುಂಟೋಜಿ, ನಾಗರಸಕೊಪ್ಪ, ಮ್ಯಾಕಲಝರಿ, ರಾಜೂರು, ದಿಂಡೂರ, ಮುಶಿಗೇರಿ, ನೆಲ್ಲೂರ, ಮಾಟರಂಗಿ, ರಾಮಾಪುರ, ಕೊಡಗಾನೂರ, ವೀರಾಪುರ, ಲಕ್ಕಲಕಟ್ಟಿ, ಜಿಗೇರಿ ಸೇರಿದಂತೆ ತಾಲೂಕಿನ ಹಲವಾರು ಗ್ರಾಮದ ರೈತರು ಕೆಂಪು ಮಿಶ್ರಿತ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಹುರಳಿ ಫಸಲು ಕಂಗೊಳಿಸುತ್ತಿದೆ.

ಔಷಧಿ ಗುಣ: ಹಿಂದೆ ಹುರಳಿ ಸಂಗಟಿಗೆ ಬೆಲ್ಲ ಸೇರಿಸಿ ಸೇವಿಸಿದರೇ ಮನುಷ್ಯ ಯಾವುದೇ ರೋಗ ರುಜಿನ ವಿಲ್ಲದೇ ಸದೃಢ ಕಾಯ ಹೊಂದಿರುತ್ತಿದ್ದ. ಜೊತೆಗೆ ರೈತರ ಒಡನಾಡಿಯಾದ ಎತ್ತುಗಳು ಜಮೀನಿನಲ್ಲಿ ದಿನಪೂರ್ತಿ ದುಡಿದು ದಣಿದು ಬಂದ ಸಂದರ್ಭದಲ್ಲಿ ಸಂಜೆ ಹೊಟ್ಟು ಮೇವಿನೊಂದಿಗೆ ವಿಶೇಷವಾಗಿ ಹುರಳಿ ಕಾಳುಗಳನ್ನು ಆಹಾರವಾಗಿಡುತ್ತಿದ್ದರು. ಕ್ರಮೇಣ ಕಾಲ ಬದಲಾದಂತೆ ನೇಪತ್ಯಕ್ಕೆ ಸರಿಯಲಾರಂಭಿಸಿದ ಹುರಳಿ ಬೀಜದಲ್ಲಿ ಮಧುಮೇಹ ಸೇರಿದಂತೆ ಹಲವಾರು ರೋಗ ನಿರೋಧಕ ಶಕ್ತಿ ಇದೆ ಎನ್ನುವ ಅಂಶ ತಿಳಿದ ಬಳಿಕ ಇದೀಗ ಮಾರುಕಟ್ಟೆಯಲ್ಲಿ ಹುರಳಿ ಕಾಳಿಗೆ ಉತ್ತಮ ಬೆಲೆ ಬಂದ ಹಿನ್ನೆಲೆಯಲ್ಲಿ ರೈತರು ಹುರಳಿ ಬೆಳೆಯನ್ನು ಹೆಚ್ಚೆಚ್ಚು ಬೆಳೆಯುತ್ತಿದ್ದಾರೆ.

ಹುರಳಿಯಲ್ಲಿದೆ ಪೌಷ್ಟಿಕಾಂಶ: ಇಂದಿನ ತಾಂತ್ರಿಕ ಯುಗದಲ್ಲಿ ಆಧುನಿಕ ಆಹಾರ ಪದ್ಧತಿಗೆ ಮಾರು ಹೋಗಿ ಸದಾ ಆರೋಗ್ಯದ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ದುಷ್ಪರಿಣಾಮ ಬೀರಿ ಮನುಷ್ಯನನ್ನು ರೋಗ ಗ್ರಸ್ಥನನ್ನಾಗಿಸುವ ಆಹಾರಕ್ಕೆ ತದ್ವೀರು ದ್ಧವಾಗಿ ಜತೆಗೆ ಉತ್ತಮ ಆರೋಗ್ಯಕ್ಕೆ ಅತ್ಯಂತ ಅವಶ್ಯ ಹಾಗೂ ಪೌಷ್ಟಿಕಾಂಶ ಗುಣವುಳ್ಳ ರಾಗಿ, ನವಣೆ ಹೊರತುಪಡಿಸಿದರೆ ಹುರಳಿ ಕಾಳು ಆರೋಗ್ಯಕ್ಕೆ ಹೇಳಿ ಮಾಡಿಸಿದ ಆಹಾರವಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಅತ್ಯಂತ ಬೇಡಿಕೆಯುಳ್ಳ ಬೆಳೆ ಇದಾಗಿದೆ. ರೈತರ ಬದುಕಿಗೆ ಸಹಕಾರಿಯಾಗಿದೆ.

ಪ್ರತಿವರ್ಷ ಗೋವಿನಜೋಳ, ಸೂರ್ಯಕಾಂತಿ, ಶೇಂಗಾ ಬೆಳೆದು ಸಾಲ ಮಾಡಿ ಸಾಕಾಗೈತ್ರೀ. ಇನ್ನೇನು ಭೂಮಿ ಹಂಗ ಬಿಟ್ರ ಕಸ ಬೆಳೆದ ಭೂಮಿ ಹಾಳಾಕೈತೀ, ಬೆಳದ್ರ ಎತ್ತಿಗೆ ಹೊಟ್ಟು ಆಗತೈತಿ, ಅಂತ ಹುಳ್ಳಿ ಬಿತ್ತೀವ್ರಿ ಆದ್ರ ಈಗ ಬಜಾರದಾಗ ಹುಳ್ಳಿಗೆ ಭಾರಿ ರೇಟ್‌ ಬಂದೈತ್ರೀ. ಬಿತ್ತಿದ ಹುಳ್ಳಿ ಭಾರಿ ಚೋಲೋ ಐತ್ರೀ. ಭೂಮಿ ತಾಯಿ ಈ ಬೆಳ್ಯಾಗರ ಲಾಭ ಕೊಡ್ತಾಳ ಅನ್ನೋ ಆಸೆ ಹುಟೈತ್ರಿ.
 ಬಸಪ್ಪ ಬಂಡಿಹಾಳ,
 ಹುರಳಿ ಬೆಳೆದ ರೈತ

ಹುರುಳಿಗೆ ಹೆಚ್ಚಿದ ಬೆಲೆ
ಅತ್ಯಂತ ಕಡಿಮೆ ಖರ್ಚಿನ ಜತೆ ಬಿತ್ತಿದ 90 ದಿನದಲ್ಲಿ ಕೇವಲ ತಂಪು ವಾತಾವರಣದಲ್ಲಿ ಬೆಳೆಯುವ ಹುರಳಿ ಎಕರೆ ಒಂದಕ್ಕೆ 2ರಿಂದ 3 ಕ್ವಿಂಟಾಲ ಬೆಳೆ ಬರುತ್ತದೆ. ಮಾರುಕಟ್ಟೆಯಲ್ಲಿ ಕೇವಲ 1000ರಿಂದ 1500 ಇದ್ದ ಹುರಳಿ ಬೆಲೆ ಪ್ರಸ್ತುತ ದಿನಗಳಲ್ಲಿ ಕ್ವಿಂಟಾಲ ಒಂದಕ್ಕೆ 2500ರಿಂದ 3000 ವರೆಗೆ ಬೆಲೆ ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ 70 ರೂ. ಇದೆ. ಹೀಗಾಗಿ ಹುರಳಿ ಬೆಳೆಗೆ ಉತ್ತಮ ಬೆಲೆ ದೊರೆಯುತ್ತಿದೆ.

ಡಿ.ಜಿ. ಮೋಮಿನ್‌

ಟಾಪ್ ನ್ಯೂಸ್

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್‌

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ

ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ

Leopard: ಮನೆಯ ತಾರಸಿ ಮೇಲೆ ಚಿರತೆ ಓಡಾಟ… ಆತಂಕದಲ್ಲಿ ಗ್ರಾಮಸ್ಥರು

Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು

ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ

ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ

Gadag-Sp–Money

Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್‌ ವಿರುದ್ಧ ತಾಬ್ಡೆ 100 ಕೋಟಿ ದಾವೆ!

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

Adani: ಲಂಚ ಕೇಸ್‌; ಜಗನ್‌ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ

ನಮ್ಮಲ್ಲಿಗೆ ಬಂದರೆ ಇಸ್ರೇಲ್‌ ಪ್ರಧಾನಿ ಬಂಧನ: ಬ್ರಿಟನ್‌!

ನಮ್ಮಲ್ಲಿಗೆ ಬಂದರೆ ಇಸ್ರೇಲ್‌ ಪ್ರಧಾನಿ ಬಂಧನ: ಬ್ರಿಟನ್‌!

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ

Police

Subhramanya: ಹೆದ್ದಾರಿ ತಡೆದು ಪ್ರತಿಭಟನೆ: 13 ಮಂದಿಗೆ ಜಾಮೀನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.