ಅನ್ನಕ್ಕೆ ದೇವರ ಸ್ಥಾನ ನೀಡಿದ್ದು ಭಾರತ ಮಾತ್ರ; ಸದಾಶಿವಾನಂದ ಶ್ರೀಗಳು
ಎಲ್ಲರೂ ಸೇರಿ ಹಗ್ಗ ಹಿಡಿದುಕೊಂಡು ರಥ ಎಳೆದಾಗ ಜೀವನ ಸಾರ್ಥಕವಾಗುತ್ತದೆ
Team Udayavani, Jun 10, 2023, 1:06 PM IST
ಗದಗ: ಜಗತ್ತಿನಲ್ಲಿ ಸಾಕಷ್ಟು ದೇಶಗಳಿದ್ದರೂ ಭೂಮಿ, ನೀರು ಹಾಗೂ ಅನ್ನಕ್ಕೆ ದೇವರ ಸ್ಥಾನ ನೀಡಿರುವುದು ಭಾರತ ದೇಶ ಮಾತ್ರ ಎಂದು ಗದುಗಿನ ಶಿವಾನಂದ ಶ್ರೀಮಠದ ಜ| ಸದಾಶಿವಾನಂದ ಶ್ರೀಗಳು ಹೇಳಿದರು.
ನಗರದ ಗಂಗಾಪೂರ ಪೇಟೆಯಲ್ಲಿ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜಾತ್ರೆ, ರಥೋತ್ಸವ ಒಂದು ನೆಪ ಮಾತ್ರವಾಗಿದೆ. ಜಾತ್ರೆಯ ನೆಪದಲ್ಲಿ ಎಲ್ಲರೂ ಸೇರಿ ಹಗ್ಗ ಹಿಡಿದುಕೊಂಡು ರಥ ಎಳೆದಾಗ ಜೀವನ ಸಾರ್ಥಕವಾಗುತ್ತದೆ ಎಂದರು.
ಕಳಸಗಿಂಡಿ ತಲೆಯ ಮೇಲೆ ಬರುವ ಮುಂಚೆ ಎಲ್ಲರೂ ತಮ್ಮ ಕರ್ತವ್ಯ ಮುಗಿಸಬೇಕು. ಹಣ್ಣು, ಕಾಯಿ, ಹೂವುಗಳಿಂದ ದೇವರಿಗೆ ಮಾಡುವ ಪೂಜೆ ಒಂದಡೆಯಾದರೆ, ಬೆಳ್ಳಂಬೆಳಿಗ್ಗೆ ಹೊಲದಲ್ಲಿ ಮೈಮುರಿದು ದುಡಿಯುವ ರೈತನ ಕಾಯಕ ಅನ್ನಪೂರ್ಣೇಶ್ವರಿ ದೇವಿಯ ಪೂಜೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಧೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಂಕ್ರಣ್ಣ ಅಂಗಡಿ ಅವರು ದೇವಿಯ ಲೀಲೆಗಳ ಕುರಿತು ಉಪನ್ಯಾಸ ನೀಡಿದರು. ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಮುಖಂಡರಾದ ಮಾರುತಿ ಜೋಗದಂಡಕರ, ಬಸವರಾಜ ಹಿಕ್ಕಲಗುತ್ತಿ ಮುಂತಾದವರು ಉಪಸ್ಥಿತರಿದ್ದರು. ಕವಿತಾ ಮಂಗಳೂರ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.