ಅನ್ಯ ಜಿಲ್ಲೆ-ರಾಜ್ಯದಿಂದ ಬಂದ ಇಬ್ಬರಿಗೆ ಸೋಂಕು
Team Udayavani, Jul 3, 2020, 4:49 PM IST
ಗದಗ: ಜಿಲ್ಲೆಯಲ್ಲಿ ಗುರುವಾರ ಇಬ್ಬರಿಗೆ ಕೊವಿಡ್-19 ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ ಒಟ್ಟು 180ಕ್ಕೆ ಏರಿದೆ. ಅವುಗಳಲ್ಲಿ 4 ನಾಲ್ವರು ಮೃತಪಟ್ಟಿದ್ದು, 69 ಜನ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 107 ಸಕ್ರಿಯ ಪ್ರಕರಣಗಳಿವೆ.
ಧಾರವಾಡ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಜೂ. 27ರಂದು ಪ್ರಯಾಣಿಸಿ ಜಿಲ್ಲೆಗೆ ಆಗಮಿಸಿದ್ದ ನಗರದ ವೀರನಾರಾಯಣ ದೇವಸ್ಥಾನ ಹತ್ತಿರದ ನಿವಾಸಿ 33 ವರ್ಷದ ವ್ಯಕ್ತಿ (ಪಿ.16612) ಹಾಗೂ ಮಧ್ಯಪ್ರದೇಶ ರಾಜ್ಯದಿಂದ ಜೂ. 25ರಂದು ಜಿಲ್ಲೆಗೆ ಆಗಮಿಸಿರುವ ತಾಲೂಕಿನ ಹೊಂಬಳ ಗ್ರಾಮದ ಕಲ್ಮೇಶ್ವರ ನಗರದ ನಿವಾಸಿ 28 ವರ್ಷದ ವ್ಯಕ್ತಿ (ಪಿ.16613)ಗೆ ಕೋವಿಡ್ ಸೋಂಕು ಪತ್ತೆಯಾಗಿದೆ. ಸೋಂಕಿತರನ್ನು ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತರ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕಿತರಿಗಾಗಿ ಶೋಧ ನಡೆಯುತ್ತಿದೆ. ಇನ್ನುಳಿದಂತೆ ಜಿಲ್ಲೆಯಲ್ಲಿ ಈ ವರೆಗೆ 9907 ಜನರನ್ನು ನಿಗಾಕ್ಕೆ ಒಳಪಡಿಸಲಾಗಿದೆ. ಅವರಲ್ಲಿ 85 ಜನರು ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ.
ಕೋವಿಡ್ ಸೋಂಕಿನ ಪರೀಕ್ಷೆಗಾಗಿ 10,492 ಜನರಿಂದ ಗಂಟಲಿನ ದ್ರವದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಸಲ್ಲಿಸಿದ್ದು, 10064 ಜನರಿಗೆ ನೆಗೆಟಿವ್ ಬಂದಿದೆ. 180 ಜನರಿಗೆ ಸೋಂಕು ಖಚಿತವಾಗಿದ್ದು, ಇನ್ನೂ 248 ಜನರ ವರದಿ ಬರಬೇಕಿದೆ. ಜೊತೆಗೆ ಜು. 2ರ ವರೆಗೆ ಮುಂಬೈ-ಗದಗ ರೈಲು ಮೂಲಕ 1,177 ಪ್ರಯಾಣಿಕರು ಆಗಮಿಸಿದ್ದು, 425 ಜನ ಗದಗ ಜಿಲ್ಲೆಗೆ ಸಂಬಂಧಿಸಿದ್ದು ಅವರಲ್ಲಿ 374 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಹಾಗೂ 51 ಜನರನ್ನು ಗೃಹ ದಿಗ್ಬಂಧನದಲ್ಲಿ ಇರಿಸಲಾಗಿದೆ. 374 ಜನರ ಪೈಕಿ 21 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿರುತ್ತದೆ. ಇನ್ನುಳಿದ 752 ಜನರು ಬೇರೆ ಜಿಲ್ಲೆಯವರಾಗಿದ್ದು, ಅವರನ್ನು ಸಂಬಂಧಿಸಿದ ಜಿಲ್ಲೆಗಳಿಗೆ ಕಳುಹಿಸಲಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
Gadaga: ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಪೊಲೀಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.