ಗುಜರಿ ಸೇರುತ್ತಿವೆಯೇ ಪಪಂ ಯಂತ್ರೋಪಕರಣ?
Team Udayavani, Nov 20, 2019, 1:26 PM IST
ನರೇಗಲ್ಲ: ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರದ ಅನುದಾನದಿಂದ ಖರೀದಿಸುವ ಯಂತ್ರಗಳು ಸಂರಕ್ಷಿಸದಿದ್ದರೆ ಹೇಗೆ ಹಾಳಾಗಿ ಹೋಗುತ್ತಿವೆ ಎನ್ನುವುದಕ್ಕೆ ನರೇಗಲ್ಲ ಪಟ್ಟಣ ಪಂಚಾಯಿತಿಯಲ್ಲಿರುವ ವಾಹನ ಹಾಗೂ ಇತರೆ ಸಾಮಗ್ರಿಗಳೇ ಸಾಕ್ಷಿ. ಕೇಂದ್ರ-ರಾಜ್ಯ ಸರ್ಕಾರದ ಅನುದಾನದಲ್ಲಿ ಪಟ್ಟಣದ ಅಭಿವೃದ್ಧಿಗಾಗಿ ಖರೀದಿ ಮಾಡಿರುವ ಯಂತ್ರೋಕರಣ-ವಾಹನಗಳು ಬಿರುಬಿಸಿಲು- ಮಳೆ-ಚಳಿಗೆ ಪಳಿಯುಳಿಕೆಯಂತಾಗಿವೆ.
ಪ.ಪಂ ಅಭಿವೃದ್ಧಿಗೆ ಬಳಸುತ್ತಿದ್ದ ವಾಹನ, ಯಂತ್ರೋಪಕರಣಗಳು ಮೂಲೆಗುಂಪಾಗಿ ಬಿದ್ದಿವೆ. ವಿಲೇವಾರಿ ಆಗಿಲ್ಲ. ಒಂದೆಡೆ ಪುನರ್‌ಬಳಕೆ ಮಾಡಿಲ್ಲ.ಮತ್ತೂಂದೆಡೆ ಹರಾಜು ಮೂಲಕ ಗುಜರಿಗೆ ಹಾಕುವ ಗೋಜಿಗೂ ಹೋಗಿಲ್ಲ. ಇದರಿಂದ ಕೆಲವೊಂದು ವಸ್ತುಗಳು ಕಳುವಾದ ನಿರ್ದರ್ಶನಗಳಿವೆ. ಈ ಪೈಕಿ ಜೆಸಿಬಿ, ಕಸ ವಿಲೇವಾರಿ ಕಂಟೇನರ್, ಟ್ರಾಕ್ಟರ್, ನೀರು ಸರಬರಾಜಿನ ಸಾಧನಗಳು ಸೇರಿದಂತೆ ಹಲವು ಸಲಕರಣೆಗಳು ವಿವಿಧೆಡೆ ತುಕ್ಕು ಹಿಡಿದು ಬಳಕೆಗೆ ಬಾರದೇ ದುಸ್ಥಿತಿಯಲ್ಲಿರುವುದು ಕಂಡುಬರುತ್ತಿವೆ. ಇವು ಪ.ಪಂ ಆವರಣದಲ್ಲಿ ಎಲ್ಲೆಂದರಲ್ಲಿ ಬಿದ್ದು ಹಾಳಾಗಿ ಹೋಗುತ್ತಿವೆ.
ಅಧಿಕಾರಿಗಳ ನಿರ್ಲಕ್ಷ್ಯ: ಸ್ಥಳೀಯ ಪಪಂ ಪಟ್ಟಣ ಪಂಚಾಯಿತಿಯಲ್ಲಿ ಬಳಕೆಗೆ ಇರಬೇಕಾದ ಯಂತ್ರೋಪಕರಣಗಳು ಕೆಟ್ಟು ನಿಂತು ವರ್ಷಗಳೇ ಕಳೆದರೂ ದುರಸ್ತಿಯತ್ತ ಅಧಿಕಾರಿಗಳು ಮಖ ಮಾಡುತ್ತಿಲ್ಲ. ಲಕ್ಷಾಂತರ ರೂ. ಬೆಲೆಬಾಳುವ ಜೆಸಿಬಿ, ಟ್ರಾಕ್ಟರ್, ಕಸದ ವಾಹನ, ಸೇರಿದಂತೆ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದ ವಸ್ತುಗಳು ಇಂದು ನಿಷ್ಕ್ರಿಯವಾಗಿ ನಿಂತಿವೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪಪಂ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆಗೊಳ್ಳುತ್ತಿದ್ದರೂ ಅ ಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕೊಳ್ಳಿತ್ತುಕೊಂಡಿರುವುದು ನೋವಿನ ಸಂಗತಿ. ವಾಹನಗಳು ಗುಣಮಟ್ಟದಿಂದಲೇ ಇರುವಾಗ ಸಂರಕ್ಷಿಸಿಕೊಳ್ಳಬೇಕು. ಸರಕಾರದ ಬೊಕ್ಕಸಕ್ಕೆ ಹಾನಿ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. –ಕುಮಾರಸ್ವಾಮಿ ಕೋರಧ್ಯಾಮಠ, ಪಪಂ ಸದಸ್ಯ
-ಸಿಕಂದರ ಎಂ. ಆರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.