ಕೋಟೆ ನಾಡಿಗೆ ಲಗ್ಗೆ ಇಟ್ಟ ‘ಹಲಸು’
•ಸಂತೆಯಲ್ಲಿ ಪರಿಮಳ ಸೂಸಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ •ಪೂರ್ಣ ಹಣ್ಣು ಮಾರದೇ ಬಿಡಿ ಬಿಡಿಯಾಗದೇ ಮಾರುತ್ತದೆ
Team Udayavani, Jul 26, 2019, 9:29 AM IST
ಗಜೇಂದ್ರಗಡ: ಉಂಡು ಮಾವು ತಿನ್ನು, ಹಸಿದು ತಿನ್ನು ಹಲಸು ತಿನ್ನು ಎನ್ನುವ ಗಾದೆಯೇ ಇದೆ. ಹಲಸಿನ ಹಣ್ಣು ಈಗ ಕೋಟೆ ನಾಡಿನ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಸಂತೆಯಲ್ಲಿ ಪರಿಮಳ ಸೂಸುತ್ತ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.
ಪಟ್ಟಣದ ರಸ್ತೆ ಬದಿಯಲ್ಲಿ ಹಲಸಿನ ಮಾರಾಟ ಜೋರಾಗಿ ನಡೆಯುತ್ತಿದ್ದು, ಶಿವಮೊಗ್ಗ, ಶಿಕಾರಿಪುರ, ಸಾಗರ, ಶಿರಸಿ ಕಡೆಯ ಬೆಳೆಗಾರರು ಹಣ್ಣು ತಂದು ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಅಲ್ಲಿಂದಹಲಸಿನ ಹಣ್ಣು ತರುವ ಪಟ್ಟಣದ ಮಾರಾಟಗಾರರು ಗಾತ್ರಕ್ಕೆ ತಕ್ಕಂತೆ ಮಾರುತ್ತಾರೆ.
ಸಣ್ಣ ಗಾತ್ರದ ಹಣ್ಣಿಗೆ 150 ರೂ, ದೊಡ್ಡ ಗಾತ್ರದ ಹಣ್ಣಿಗೆ 200 ರಿಂದ 350ರವರೆಗೆ ಮಾರಾಟ ಆಗುತ್ತವೆ. ಆದರೆ ಬಯಲು ಸೀಮೆಯಲ್ಲಿ ಬಹುತೇಕರು ಪೂರ್ಣ ಹಣ್ಣುಗಳನ್ನು ಮಾರದೇ ಹಣ್ಣುಗಳನ್ನು ಬಿಡಿಸಿ, ಒಂದು ಪೀಸ್ ಹಲಸಿನ ಹಣ್ಣಿಗೆ 5 ರೂ.ನಂತೆ ವ್ಯಾಪಾರ ಮಾಡುತ್ತಾರೆ. ಹಲಸು ಹಣ್ಣಿನ ಪೀಸ್ ಕೆಜಿಗೆ 100 ರಿಂದ 120ರವರೆಗೆ ಮಾರಾಟ ಆಗುತ್ತದೆ.
ಹಲಸುಗಳನ್ನು ಬಿಡಿಸಿ, ಒಂದು ಡಬ್ಟಾದಲ್ಲಿ ಹಾಕಿ ರಸ್ತೆ ಬದಿಯ ತಳ್ಳುವ ಗಾಡಿಯಲ್ಲಿಟ್ಟುಕೊಂಡು ಮಾರಾಟ ಮಾಡಲಾಗುತ್ತಿದ್ದು, ದಾರಿ ಹೋಕರು ಇದರ ಸುವಾಸನೆಗೆ ಬಾಯಿ ಚಪ್ಪರಿಸಿ ಹಣ್ಣು ಸವಿದು ಮನೆಗೂ ತೆಗೆದುಕೊಂಡು ಹೋಗುತ್ತಾರೆ.
ಮಳೆಗಾಲದಲ್ಲಿ ಮಾತ್ರ ದೊರೆಯುವ ಹಣ್ಣು ಇದಾಗಿದ್ದು, ಬಸವ ಜಯಂತಿಯಿಂದ ಆರಂಭವಾಗಿ ಆಷಾಢದ ಅಂತ್ಯದವರೆಗೂ ಈ ಹಣ್ಣು ಸವಿಯಲು ಸಿಗುತ್ತದೆ.
ಈ ಭಾಗದಲ್ಲಿ ಹಲಸು ಹಣ್ಣು ಕಂಡು ಬರುವುದು ಕಡಿಮೆ. ಹೀಗಾಗಿ ಪ್ರತಿ ವರ್ಷ ಬೇರೆ ಊರುಗಳಿಂದ ಹಲಸಿನ ಹಣ್ಣು ತಂದು ಇಲ್ಲಿ ಮಾರಾಟ ಮಾಡುತ್ತೇವೆ. ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. •ಶಂಕ್ರಪ್ಪ ಪಾತ್ರೋಟಿ,ಹಲಸಿನ ಹಣ್ಣು ವ್ಯಾಪಾರಿ
ಹಲಸು ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಷಿಯಂ, ಕ್ಯಾಲ್ಸಿಯಂ ಅಂಶಗಳಿವೆ. ಎಲ್ಲ ಹಣ್ಣುಗಳಲ್ಲಿ ಹಲಸು ಮಹತ್ವದ ಪಾತ್ರ ವಹಿಸುತ್ತದೆ. ಇದರ ಸೇವನೆಯಿಂದ ಬಹುಪಯೋಗಗಳಿವೆ. •ರೇಶ್ಮಾ ಕೋಲಕಾರ,ಹಿರಿಯ ವೈದ್ಯರು.
•ಡಿ.ಜಿ. ಮೋಮಿನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
Gadaga: ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಪೊಲೀಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.