ನರೇಗಲ್ಲನಲ್ಲಿ ‘ಕಡಬಡ’ ಸೋಗು ನೃತ್ಯ
•ಒಂದು ತಂಡದಲ್ಲಿ 20-40 ವೇಷಧಾರಿಗಳು •ಶ್ರಾವಣಮಾಸ ಮಂಗಳವಾರ-ಶುಕ್ರವಾರ ಮಾತ್ರ ಆಟ
Team Udayavani, Aug 28, 2019, 11:08 AM IST
ನರೇಗಲ್ಲ: ಪಟ್ಟಣದ ಕಟ್ಟಿ ಬಸವೇಶ್ವರ ಓಣಿ ಜನರಿಂದ ಮಂಗಳವಾರ ಸಂಜೆ ಕಡಬಡ ಸೋಗಿನ ಮೆರವಣಿಗೆ ಜರುಗಿತು.
ನರೇಗಲ್ಲ: ಜಿಲ್ಲೆಯಲ್ಲಿ ಎಲ್ಲೂ ಕಾಣದ ಸಾಂಪ್ರದಾಯಿಕ ಜನಪದ ಶೈಲಿಯ ಆಟ ‘ಕಡಬಡ’ ಸೋಗು ಪಟ್ಟಣದಲ್ಲಿ ಚಾಲ್ತಿಯಲ್ಲಿದೆ.
ಪ್ರತಿವರ್ಷ ಶ್ರಾವಣ ಮಾಸದಲ್ಲಿ ಪಟ್ಟಣದ ವಿವಿಧ ಓಣಿಗಳಲ್ಲಿ ಮಾತ್ರ ಆಡುವ ವಿಶೇಷ ನೃತ್ಯವನ್ನು ಪ್ರದರ್ಶಿಸಲು ಕಲಾವಿದರು ತುದಿಗಾಲ ಮೇಲೆ ನಿಂತಿರುತ್ತಾರೆ. ಶ್ರಾವಣ ಮಾಸದ ಮಂಗಳವಾರ ಮತ್ತು ಶುಕ್ರವಾರ ಮಾತ್ರ ಈ ಆಟ ಆಡಲಾಗುತ್ತಿದ್ದು, ಇಲ್ಲಿನ ಯುವಕರು ಮತ್ತು ಹಿರಿಯರು ನೂರಾರು ವರ್ಷಗಳಿಂದಲೂ ಈ ಆಟ ಆಡುತ್ತ ನಮ್ಮ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಶ್ರಾವಣ ಮಾಸವೆಂದರೆ ಅನೇಕ ಸಾಂಕ್ರಾಮಿಕ ಮತ್ತಿತರ ರೋಗಗಳಿಂದ ಜನರು ಬಳಲುವ ಸಾಧ್ಯತೆ ಹೆಚ್ಚು. ಬಿತ್ತನೆ ಮುಗಿಸಿದ ರೈತರು ವರುಣನ ಕೃಪೆಗಾಗಿ ಕಾದು ಕುಳಿತಿರುವ ಮಾಸವೂ ಹೌದು. ಮಳೆ ಚೆನ್ನಾಗಿ ಆಗಲಿ, ಬರುವ ಎಲ್ಲ ರೋಗಗಳು ದೂರವಾಗಲಿ ಮತ್ತು ಜನತೆಗೆ ಈ ಸಮಯದಲ್ಲಿ ಮನರಂಜನೆ ನೀಡಬೇಕೆನ್ನುವ ದೃಷ್ಟಿಯಿಂದಲೂ ಈ ಕಡಬಡ ಸೋಗನ್ನು ಆಡಲಾಗುತ್ತಿದೆ.
ಆಟ ನೋಡುವುದೇ ಸೊಗಸು: ಕಡಬಡ ಸೋಗಿನ ಒಂದು ತಂಡದಲ್ಲಿ 20ರಿಂದ 40 ವೇಷಧಾರಿಗಳಿರುತ್ತಾರೆ. ದೇವಿ, ಬ್ರಹ್ಮ, ವಿಷ್ಣು, ಮಹೇಶ್ವರ, ದೇವೇಂದ್ರ, ರಂಭೆ, ಊರ್ವಶಿ, ಮೇನಕೆ, ರಾಕ್ಷಸರು (ಕಡಬಡ), ಯಮಧರ್ಮ, ಹನುಮಂತ ಹೀಗೆ ಹತ್ತು ಹಲವು ಪೌರಾಣಿಕ ಪಾತ್ರಗಳ ವೇಷಧಾರಿಗಳು ಇರುತ್ತಾರೆ. ವಾಹನ ಮುಂದೆ ದೇವಿ ಕುಣಿತವಿದ್ದರೆ ಆಕೆಯನ್ನು ಕಾಡಲು ರಾಕ್ಷಸರು ಕಾಯುತ್ತಿರುತ್ತಾರೆ. ದೇವಿ ಅವರನ್ನು ಸಂಹರಿಸಲು ಬಂದಾಗ ಆಡುವ ಆಟ ನೋಡುವುದೇ ಒಂದು ಸೊಗಸು. ನರೇಗಲ್ಲನ ಈಟಿಯವರ ಓಣಿ, ಗುಡಿ ಓಣಿ, ಪಾಯಪ್ಪಗೌಡ್ರ ಓಣಿ, ಕಟ್ಟಿ ಬಸವೇಶ್ವರ ಓಣಿ, ಹಿರೇಮಠದ ಓಣಿ, ಹಲಗೇರಿ ಓಣಿ, ಅಂಬೇಡ್ಕರ್ ಓಣಿ ಸೇರಿದಂತೆ ವಿವಿಧ ಓಣಿಯ ಜನರು ಶ್ರಾವಣ ಮಾಸದಲ್ಲಿ ಈ ‘ಕಡಬಡ’ ಸೋಗನ್ನು ಆಡುತ್ತಾರೆ. ಸೋಗಿನ ಪಾತ್ರ ಧರಿಸಲು ಯುವಕರು ನಾ ಮುಂದು ತಾ ಮುಂದು ಎಂದು ಧಾವಿಸುತ್ತಾರೆ. ಈ ಸೋಗಿನ ಸೊಗಸು, ವೇಷಧಾರಿಗಳ ಉತ್ಸಾಹ, ಬಣ್ಣ ಬಳಿಯವವರ ಕಲೆ ಕುರಿತು ವರ್ಣಿಸಲು ಅಸಾಧ್ಯ. ಮತ್ತೂಬ್ಬರಿಂದ ಕಥೆಯ ರೂಪದಲ್ಲಿ ಕೇಳಿದರೆ ಇದರ ಸ್ವಾರಸ್ಯ ತಿಳಿಯುವುದಿಲ್ಲ. ಇದನ್ನು ಕಣ್ಣಾರೆ ಕಂಡಾಗ ಮಾತ್ರ ಅದರಲ್ಲಿನ ನವರಸಗಳು ಅರ್ಥವಾಗುತ್ತದೆ.
•ಸಿಕಂದರ ಆರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.