ಕಪ್ಪತ್ತಗುಡ್ಡ ರಕ್ಷಣೆಗೆ ಮುಂದಾಗಲಿ ಸರ್ಕಾರ
Team Udayavani, Jun 15, 2020, 3:40 PM IST
ಗದಗ: ಪಾರಂಪರಿಕ ಔಷಧ ಅಥವಾ ನಾಟಿ ಔಷಧಿಯನ್ನು ಉಪಯೋಗಿಸುವುದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳಿಲ್ಲ ಎಂದು ಕಪ್ಪತ್ತಗುಡ್ಡ ಗಂಗಿಬಾವಿಮಠದ ಪಾರಂಪರಿಕ ವೈದ್ಯ ಸಿ.ಎಂ.ಗುರುಶಾಂತಯ್ಯಸ್ವಾಮಿ ಅಭಿಪ್ರಾಯಪಟ್ಟರು.
ಗದಗ-ಬೆಟಗೇರಿ ರೋಟರಿ ಕ್ಲಬ್‌ನ ಸದಸ್ಯರ ತಂಡ ಕೈಗೊಂಡಿದ್ದ “ಕಪ್ಪತ್ತಗುಡ್ಡ ಪರಿಸರ ಪ್ರಜ್ಞೆ’ ಹೊರ ಸಂಚಾರ ಯೋಜನಾ ಕಾರ್ಯಕ್ರಮದಡಿ ಕಪ್ಪತ್ತಗುಡ್ಡ ಗಂಗಿಬಾವಿಮಠಕ್ಕೆ ಭೇಟಿ ನೀಡಿದ ತಂಡದೊಂದಿಗೆ ಸಂವಾದ ನಡೆಸಿದ ಅವರು, ಪಾರಂಪರಿಕ ವೈದ್ಯರು ಬಳಸುವ ಔಷಧಿಯ ಸಸಿಗಳ ಬಗ್ಗೆ ಮತ್ತು ಅದರ ಉಪಯೋಗಗಳು, ಗಿಡಮೂಲಿಕೆಗಳಿಂದ ಇನ್ನೂ ಅನೇಕ ಔಷಧಗಳು ತಯಾರಾಗುತ್ತಿದ್ದರೂ, ಜನರಿಗೆ ಔಷಧಿಧೀಯ ಸಸ್ಯಗಳ ಸಂರಕ್ಷಣೆಯ ಮಹತ್ವ ಅರಿವಾಗುತ್ತಿಲ್ಲ. ಜೊತೆಗೆ ಇಂಗ್ಲಿಷ್ ಔಷಧ, ಚಿಕಿತ್ಸೆಯಿಂದ ಉಂಟಾಗುವ ಅಡ್ಡ ಪರಿಣಾಮಗಳಿಗೆ ಒಳಗಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಅಪಾರ ಖನಿಜ ಸಂಪತ್ತು, ಔಷಧೀಯ ಸಸ್ಯ ಸಂಪತ್ತು ಹೊಂದಿರುವ ಕಪ್ಪತ್ತಗುಡ್ಡವನ್ನು ಯಾವುದೇ ರೀತಿಯ ಗಣಿಗಾರಿಕೆಗೆ ಮುಕ್ತ ಮಾಡಬಾರದು. ಕಪ್ಪತ್ತಗಿರಿ ಸಂರಕ್ಷಣೆಗೆ ಸರಕಾರ ಮುಂದಾಗಬೇಕಿದೆ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಎಸ್.ಎಸ್.ಹೊಸಳ್ಳಿಮಠ, ಮಾಜಿ ಅಧ್ಯಕ್ಷ ಡಾ|ಗಚ್ಚಿನಮಠ, ರೋಟರಿ ವೇಲ್ಫೆರ್ ಸೊಸೈಟಿಯ ಕಾರ್ಯದರ್ಶಿ ಶ್ರೀಧರ ಸುಲ್ತಾನಪೂರ, ಸದಸ್ಯ ಡಾ|ಉಪ್ಪಿನ, ಹಾಲುಮತ ಮಹಾಸಭಾದ ರಾಜ್ಯ ಅಧ್ಯಕ್ಷ ರುದ್ರಣ್ಣ ಗುಳಗುಳಿ, ಸ್ವಕುಳಸಾಳಿ ಸಮಾಜದ ಅಧ್ಯಕ್ಷ ವಿಠuಲ ಸಫಾರೆ, ಸೋಮನಗೌಡ ಪಾಟೀಲ, ಹನಮರಡ್ಡಿ ಶಿಗ್ಗಾಂವಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
Gadaga: ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಪೊಲೀಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.