ಕಪ್ಪತ್ಪಗುಡ್ಡದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದೆ ಬೆಂಕಿ

ನೂರಾರು ಹೆಕ್ಟೇರ್‌ನಲ್ಲಿರುವ ಔಷಧೀಯ ಸಸ್ಯಗಳು, ಅಪರೂಪದ ಗಿಡಗಂಟಿಗಳು ನಾಶ

Team Udayavani, Mar 29, 2021, 4:34 PM IST

ಕಪ್ಪತ್ಪಗುಡ್ಡದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದೆ ಬೆಂಕಿ

ಮುಂಡರಗಿ: ಕಪ್ಪತ್ತಗುಡ್ಡದಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಮತ್ತೆ, ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಕಪ್ಪತ್ತಗುಡªಲ್ಲಿರುವನೂರಾರು ಹೆಕ್ಟೇರ್‌ ಪ್ರದೇಶದಲ್ಲಿರುವ ಔಷಧೀಯ ಸಸ್ಯಗಳು, ಚಿಕ್ಕಪುಟ್ಟ ಗಿಡಗಂಟಿಗಳು, ಬಾದೆಹುಲ್ಲು ನಾಶವಾಗಿದೆ.

ಬೆಂಕಿ ಅವಘಡಕ್ಕೆ ಕಿಡಿಗೇಡಿಗಳ ಕೈವಾಡ ಕಾರಣವೋ ಅಥವಾ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಳ್ಳುತ್ತಿದೆಯೇ ಎಂಬುದರ ಬಗ್ಗೆ ಅರಣ್ಯ ಇಲಾಖೆಯೇ ಉತ್ತರಿಸಬೇಕಿದೆ. ಜತೆಗೆ ಕಪ್ಪತ್ತಗುಡ್ಡದಲ್ಲಿರುವಗಾಳಿಯಂತ್ರಗಳಿಂದ ಸಿಡಿಯುವ ಕಿಡಿ ಬೆಂಕಿ ಹತ್ತಲು ಕಾರಣವೋ ಎನ್ನುವುದು ತನಿಖೆಯಿಂದ ಮಾತ್ರ ಹೊರ ಬರಬೇಕಿದೆ.

ಪ್ರತಿವರ್ಷ ಕಪ್ಪತ್ತಗುಡ್ಡದಲ್ಲಿ ಬೆಂಕಿಯಿಂದ ಔಷಧೀಯ ಸಸ್ಯಗಳು, ಅಪರೂಪದ ಸಸ್ಯಗಳು, ಬಾದೆಯ ಹುಲ್ಲು, ಪ್ರಾಣಿ ಪಕ್ಷಿಗಳಿಗೆ ತೊಂದರೆಯಂತೂ ತಪ್ಪುತ್ತಿಲ್ಲ. ಕಪ್ಪತ್ತ ಹಿಲ್ಸ್‌ ವಲಯ ಅರಣ್ಯ ಇಲಾಖೆಪ್ರತಿ ವರ್ಷ ಬೆಂಕಿ ಬೀಳದಂತೆ ಮುಂಜಾಗ್ರತಾ ಕ್ರಮ ಕೈಕೊಂಡು, ಬೆಂಕಿ ಬೇರೆಡೆಗೆ ಹರಡದಂತೆ ಬೆಂಕಿಯ (ಪೈಯರ್‌ )ಲೈನ್‌ಗಳನ್ನು ಹಾಕುತ್ತದೆ. ಆದರೆ, ಕಪ್ಪತ್ತಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ರಭಸವಾಗಿ ಬೀಸುವ ಗಾಳಿಯಿಂದ ಹತೋಟಿಗೆ ಬಾರದೇ ಬೆಂಕಿ ಜ್ವಾಲೆ ನಿಯಂತ್ರಣ ಮೀರಿ ಆವರಿಸತೊಡಗುತ್ತದೆ.

ಆಧುನಿಕ ಉಪಕರಣ ಅಗತ್ಯ: ಕಪ್ಪತ್ತಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಾಗ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಆಧುನಿಕ ಉಪಕರಣಗಳು, ರಾಸಾಯನಿಕ ಪುಡಿಯ ಗ್ಯಾಸ್‌ ಉಪಯೋಗ ಕಂಡದ್ದು ಕಡಿಮೆಯೇ ಎನ್ನಬಹುದು. ಸಿಬ್ಬಂದಿ ಬೆಂಕಿ ನಂದಿಸಲು ಗಿಡದ ತಪ್ಪಲಿನಿಂದ ಬೆಂಕಿ ಆರಿಸುವಾಗ ಬೆಂಕಿಯ ಕೆನ್ನಾಲಿಗೆ ಹಿಡತಕ್ಕೆ ಸಿಗದೇ ಆವರಿಸತೊಡಗುತ್ತದೆ. ಇದರಿಂದ ಅರಣ್ಯದಲ್ಲಿ ಬೆಂಕಿ ಆವರಿಸುವಾಗ ಸಿಬ್ಬಂದಿ ಅಸಹಾಯಕರಾಗಿ ನಿಲ್ಲಬೇಕಾಗುತ್ತದೆ.

ಬೆಂಕಿ ನಿರೋಧಕ ಬಟ್ಟೆ-ನೀರು: ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು 24 ಗಂಟೆಯೂ ಶ್ರಮಿಸುತ್ತಾರೆ. ಆದರೆ ಬೆಂಕಿಯಿಂದ ರಕ್ಷಿಸಿಕೊಳ್ಳಲುಸಿಬ್ಬಂದಿಗೆ ಬೆಂಕಿ ನಿರೋಧಕ ಬಟ್ಟೆಗಳು, ಕಾರ್ಬನ್‌ ಡೈಆಕ್ಸೈಡ್‌ ಮತ್ತು ಹೊಗೆಯಿಂದ ರಕ್ಷಿಸಿಕೊಳ್ಳಲು ಮುಖಕ್ಕೆ ಮಾಸ್ಕ್, ಕೈಗವಸುಗಳು ಬೇಕು. ಜತೆಗೆಬೆಂಕಿಯನ್ನು ನಂದಿಸುವಾಗ ವಿಪರೀತ ದಾಹ ಉಂಟಾಗುವುದರಿಂದ ಕುಡಿಯಲು ನೀರು ಕೂಡಾ ಬೇಕಾಗುತ್ತದೆ. ಕೆಲ ಸಂದರ್ಭದಲ್ಲಿ ಬೆಂಕಿ ನಂದಿಸುವಾಗ ನೀರಡಿಕೆಯಿಂದ ಸಿಬ್ಬಂದಿ ತತ್ತರಿಸುತ್ತಾರೆ.

ಗ್ರಾಮ ಅರಣ್ಯ ಸಮಿತಿ ಸಹಭಾಗಿತ್ವ ಅಗತ್ಯ: ಕಪ್ಪತ್ತಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಾಗ ಗ್ರಾಮ ಅರಣ್ಯ ಸಮಿತಿಗಳು, ಯುವ ಸಂಘಗಳ, ಗುಡ್ಡದ ಸುತ್ತಲಿನಲ್ಲಿರುವ ಹೊಲಗಳ ರೈತರ ಸಹಭಾಗಿತ್ವಕೂಡಾ ತುಂಬಾ ಅಗತ್ಯವಿದೆ. ಬೆಂಕಿ ನಂದಿಸಲುಸ್ಥಳೀಯರ ಸಹಕಾರ, ಸಹಭಾಗಿತ್ವ ಅಗತ್ಯ. ಏಕೆಂದರೆ,ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದರೆ ಬೆಂಕಿಯಿಂದಾಗುವ ಹೆಚ್ಚಿನ ನಷ್ಟ ತಪ್ಪಿಸಬಹುದಾಗಿದೆ.

ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡರೆ ಗ್ರಾಮದ ಯುವಕರು, ರೈತರು ಸ್ವಯಂಪ್ರೇರಣೆಯಿಂದ ಬೆಂಕಿ ಆರಿಸಲು ಗುಂಪು ರಚಿಸಿಕೊಂಡು ನೀರು, ಬೆಲ್ಲದ ಜತೆಗೆ ಟ್ರ್ಯಾಕ್ಟರ್‌ ತೆಗೆದುಕೊಂಡು ಹೋಗಿ ಬೆಂಕಿ ಆರಿಸಿ ಬರುತ್ತಿದ್ದೆವು. ಆದರೆ, ಅರಣ್ಯ ಇಲಾಖೆಯವರು ಅರಣ್ಯ ಸಮಿತಿಗಳು, ಜನರ ಜತೆಗೆಸಂವಾದ ನಡೆಸಿದರೆ ಸಹಕಾರ ಇದ್ದೇ ಇರುತ್ತದೆ. ಕಪ್ಪತ್ತಗುಡ್ಡದ ಸುತ್ತಲಿನ 32 ಹಳ್ಳಿಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಬೆಂಕಿ ಪ್ರಕರಣ ತಡೆಯಬಹುದು. ಪ್ರಸಕ್ತ ಬೆಂಕಿ ಪ್ರಕರಣದ ಸಮಗ್ರ ತನಿಖೆ ನಡೆದು ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು. – ಶಂಕರಗೌಡ ಜಾಯನಗೌಡರ, ಮಾಜಿ ಅಧ್ಯಕ್ಷ, ಡೋಣಿ ಗ್ರಾಪಂ

ಕಳೆದ ಒಂದು ತಿಂಗಳ ಅವಧಿಯಲ್ಲಿ ಕಪ್ಪತ್ತಗುಡ್ಡದಲ್ಲಿ 12 ಸಲ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದ 700 ರಿಂದ 800 ಹೆಕ್ಟೇರ್‌ ಅರಣ್ಯ ಪ್ರದೇಶದಲ್ಲಿ ಔಷ ಧೀಯ ಸಸ್ಯಗಳು, ಬಾದೆಹುಲ್ಲು, ಸಣ್ಣಪುಟ್ಟ ಗಿಡಗಂಟಿಗಳು ಸುಟ್ಟಿವೆ. ಬೆಂಕಿ ಘಟನೆ ಕುರಿತು ಈಗಾಗಲೇ 15 ಪ್ರಕರಣಗಳನ್ನು ದಾಖಲಿಸಲಾಗಿದೆ.  –ಪ್ರದೀಪ್‌ ಪವಾರ, ಕಪ್ಪತ್ತಹಿಲ್ಸ್‌ ವಲಯ ಅರಣ್ಯಾಧಿಕಾರಿ

ಹು.ಬಾ.ವಡ್ಡಟಿ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag-CM-Dcm

Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ

8

CM Siddaramaiah: ಗ್ಯಾರಂಟಿಗಳನ್ನು‌ ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮ‌‌ದು

7

Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ

24-

Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ

18-gadaga

Gadaga: ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಪೊಲೀಸ್ ವಶಕ್ಕೆ‌

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.