ಕಾಯಕ ಸಂಸ್ಕೃತಿ ಪಾಲನೆಯಲ್ಲಿ ಮುನ್ನಡೆಯಿರಿ-ಶಾಸಕ ಜಿ.ಎಸ್. ಪಾಟೀಲ
Team Udayavani, Sep 6, 2024, 4:25 PM IST
■ ಉದಯವಾಣಿ ಸಮಾಚಾರ
ಗಜೇಂದ್ರಗಡ: ಬಸವಣ್ಣನವರು ವಚನಗಳ ಮೂಲಕ ನೀಡಿದ ಕಾಯಕ ಸಂಸ್ಕೃತಿಯ ಸಂದೇಶ ವಿಶ್ವವೇ ಒಪ್ಪಿಕೊಂಡಿದೆ. ಅವುಗಳ ಪಾಲನೆಯಲ್ಲಿ ನಾವೆಲ್ಲರೂ ಮುನ್ನಡೆಯಬೇಕಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಪಟ್ಟಣದ ಮೈಸೂರ ಮಠದಲ್ಲಿ ವೀರಶೈವ ಲಿಂಗಾಯತ ಸಮಾಜ ವತಿಯಿಂದ ಶ್ರಾವಣ ಮಾಸ ಪ್ರಯುಕ್ತ ನಡೆದ ಗುಡ್ಡಾಪುರದ ದಾನಮ್ಮದೇವಿ ಪುರಾಣ ಪ್ರವಚನ ಪ್ರಯುಕ್ತ ನಡೆದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಬಸವಾದಿಶರಣರು ರಚಿಸಿದ ವಚನ ಸಾಹಿತ್ಯಗಳೇ ಇಂದಿನ ವಿಶ್ವ ವಿದ್ಯಾಲಯಗಳ ಸಂಶೋಧನೆಯ
ಅಸ್ತ್ರಗಳಾಗಿವೆ. ಜೊತೆಗೆ ಸರಳ ಬದುಕಿಗೆ ಸಂಜೀವಿನಿಯಾಗಿವೆ. ಇಂತಹ ಸರಳ ಮತ್ತು ಸಮಾನತೆ ಬಿಂಬಿಸುವ ಕೋಶದ ಚಿಂತನೆ ಬಿಟ್ಟು ಸ್ವಾರ್ಥಕ್ಕಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ಮಾತಿಗೆ ಮಾರು ಹೋಗುತ್ತಿರುವುದು ಬಸವ ಧರ್ಮಕ್ಕೆ
ಅಪಚಾರವೆಸಗಿದಂತೆ.
ಸಮಾಜವು ಲೌಕಿಕ ಶಕ್ತಿಯ ಹಿಂದೆ ಬಿದ್ದು ಜಗತ್ತಿಗೆ ಬಸವಣ್ಣನವರು ನೀಡಿದ ಕಾಯಕ ಸಂಸ್ಕೃತಿಯನ್ನು ಮರೆತಿದೆ. ಹೀಗಾಗಿ ಭಾರತವು ಯಾಂತ್ರೀಕರಣ ಒಪ್ಪಿಕೊಂಡ ದೇಶಗಳಿಗೆ ಮಾತ್ರ ಪ್ರಬಲ ದೇಶವಾಗಿ ಕಾಣುತ್ತಿದೆ. ಏಕೆಂದರೆ ಬಸವಣ್ಣನವರು ನೀಡಿದ ಕಾಯಕ ಸಂಸ್ಕೃತಿ ಒಪ್ಪಿಕೊಂಡು ಜಗತ್ತು ಸಾಗುತ್ತಿದ್ದರೆ, ನಾವೂ ಮಾತ್ರ ಕೆಲಸವನ್ನು ಮಾಡುತ್ತಿದ್ದೇವೆ. ಆದರೆ ಸಮಾಜವು ಕಾಯಕವನ್ನು ಮಾಡುತ್ತಿಲ್ಲ. ಕೇವಲ ಕೆಲಸವನ್ನು ಮಾಡುತ್ತಿದ್ದೇವೆ ಎನ್ನುವ ಸತ್ಯವನ್ನು ತಿಳಿಯಲು ವಿಫಲವಾಗಿದ್ದೇವೆ
ಎಂದರು.
ಮೈಸೂರ ಸಂಸ್ಥಾನ ಮಠದ ವಿಜಯಮಹಾಂತ ಶ್ರೀ ಆಶೀರ್ವಚನ ನೀಡಿ, ಕಾಯಕದಲ್ಲಿ ಸಮಾನತೆ, ನಿಸ್ವಾರ್ಥ, ದಾಸೋಹದಂತಹ ಮಹತ್ವದ ಗುಣಗಳು ಅಡಕವಾಗಿವೆ ಎಂದರು. ಈ ವೇಳೆ ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಮಿಥುನ ಪಾಟೀಲ ದಂಪತಿ ಸನ್ಮಾನಿಸಲಾಯಿತು.
ನರೇಗಲ್ಲ ಹಿರೇಮಠದ, ಮಲ್ಲಿಕಾರ್ಜುನ್ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷ ಸಿದ್ದಪ್ಪ ಬಂಡಿ, ಅಪ್ಪು ಮತ್ತಿಕಟ್ಟಿ, ಎಸ್.ಎಸ್. ವಾಲಿ, ಟಿ.ಎಸ್. ರಾಜೂರ, ಎ.ಪಿ. ಗಾಣಗೇರ, ಬಿ.ವಿ. ಕಂಬಳ್ಯಾಳ, ಶರಣಪ್ಪ
ರೇವಡಿ ಸೇರಿ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf Issue: ಐದು ವರ್ಷ ಹಿಂದೆ ವಕ್ಫ್ ಆಸ್ತಿ ವಿರುದ್ಧ ಹೋರಾಡಿ ಗೆದ್ದಿದ್ದ 315 ರೈತರು
Gadaga: ಐತಿಹಾಸಿಕ ವೀರನಾರಾಯಣ ದೇವಸ್ಥಾನ ಪುನರುತ್ಥಾನ ಕಾರ್ಯಕ್ಕೆ ಚಾಲನೆ
ಕುಂಬಾರರ ಬದುಕಿನಲ್ಲಿಲ್ಲ ದೀಪಾವಳಿ ಬೆಳಕು: ಮಾರುಕಟ್ಟೆಗೆ ಲಗ್ಗೆ ಇಟ್ಟ ಪಿಂಗಾಣಿ ಹಣತೆ
ಗದಗ: ಜನಮಾನಸದಲ್ಲಿ ಅಚ್ಚಳಿಯದ ರಾಣಿ ಚನ್ನಮ್ಮ
MUST WATCH
ಹೊಸ ಸೇರ್ಪಡೆ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್‌ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.