ಕೋವಿಡ್ ವಿರುದ್ಧ ಸಮರ ಸಾರಲು “ಕಿಯಾಸ್ಕ್’
Team Udayavani, May 9, 2021, 4:14 PM IST
ವರದಿ : ವೀರೇಂದ್ರ ನಾಗಲದಿನ್ನಿ
ಗದಗ: ವಿವಿಧ ಅಭಿವೃದ್ಧಿ ಕಾರ್ಯಗಳು ಹಾಗೂ ಜನರಿಗೆ ಉತ್ತಮ ನಾಗರಿಕ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ದೇಶಕ್ಕೆ ನಂ.1 ಸ್ಥಾನ ಗಳಿಸಿರುವ ಹುಲಕೋಟಿ ಗ್ರಾಮದಲ್ಲಿ ಜನರಿಗೆ ಔಷಧಯುಕ್ತ ಹಬೆ ಸೌಲಭ್ಯ, ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧ ವಿತರಣೆ ಮೂಲಕ ಕೊರೊನಾ ವಿರುದ್ಧ ಸಮರ ಸಾರಲಾಗಿದೆ.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾ ಆಯುಷ್ ಇಲಾಖೆ ಇಂತಹ ಪ್ರಯತ್ನ ನಡೆಸಿದೆ. ಕೊರೊನಾ ಹರಡದಂತೆ ಸಾರ್ವಜನಿಕರಿಗೆ ವೈಜ್ಞಾನಿಕವಾಗಿ ಮುನ್ನೆಚ್ಚರಿಕೆಯ ಪಾಠ ಬೋಧಿಸಲಾಗುತ್ತಿದೆ. ಜನರ ಆಕರ್ಷಣೆಗಾಗಿ ವಿಶಿಷ್ಟವಾದ ಕಿಯಾಸ್ಕ್(ಚೌಕಾಕಾರದ ಟೆಂಟ್) ಸ್ಥಾಪಿಸಿ, ಕೋವಿಡ್ ಸುರಕ್ಷತಾ ಕ್ರಮಗಳ ಕಾರ್ಯಕ್ರಮ ನಡೆಸಲಾಗುತ್ತಿದೆ.
ಮುಗಿ ಬಿದ್ದ ಜನ: ಕಿಯಾಸ್ಕ್ಗೆ ಭೇಟಿ ನೀಡುವವರನ್ನು ಮೊದಲಿಗೆ ಥರ್ಮಲ್ ಸ್ಕಾ Â ನರ್ ನಿಂದ ದೇಹದ ಉಷ್ಣಾಂಶ, ಪಲ್ಸ್ ಆಕ್ಸಿಮೀಟರ್ ಮೂಲಕ ಉಸಿರಾಟ ಪ್ರಮಾಣ ಪರೀಕ್ಷಿಸಲಾಗುತ್ತದೆ. ಬಳಿಕ ಶುಂಠಿ, ಹವೀಜ, ಜೀರಿಗೆ, ಲವಂಗ, ಯಾಲಕ್ಕಿ, ದಾಲಚಿನ್ನಿ, ಅರಿಷಿಣ ಪುಡಿ ಮಿಶ್ರಿತ ಬಿಸಿ ಬಿಸಿ ಕಷಾಯ ನೀಡಲಾಗುತ್ತದೆ. ಔಷ ಧಯುಕ್ತ ಬಿಸಿ ಹಬೆ ತೆಗೆದುಕೊಳ್ಳಲು ಮಾಡಿರುವ ವಿಶೇಷ ವ್ಯವಸ್ಥೆ ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.
ಗ್ಯಾಸ್ ಸ್ಟೌವ್ ಮೇಲೆ ಕುಕ್ಕರ್‌ಗೆ ಪೈಪ್‌ಲೈನ್ ಮೂಲಕ ನೇರವಾಗಿ ಬಿಸಿಯಾದ ಹಬೆ ಪಡೆಯಬಹುದು. ವಿಶೇಷವಾಗಿ ಯೂನಾನಿ ಪದ್ಧತಿ ಆರ್ಕ್ ಅಜೀಬ್ ದ್ರಾವಣ ಮಿಶ್ರಿತ ಹಬೆಯಿಂದ ಕೆಲವೇ ಕ್ಷಣದಲ್ಲಿ ಜನರು ಬೆವರುತ್ತಾರೆ. ಇದರಿಂದ ಅನೇಕರಿಗೆ ಉಸಿರಾಟ ಸಂಬಂಧಿ ತ ಸಮಸ್ಯೆಗಳು ಸ್ಥಳದಲ್ಲೇ ನಿವಾರಣೆಯಾಗಿವೆ. ನೆಗಡಿ, ಗಂಟಲು ಕಟ್ಟುವಿಕೆ, ಪಿತ್ತ ಮತ್ತಿತರೆ ಸಮಸ್ಯೆಗಳೂ ಪರಿಹಾರವಾಗಿದ್ದರಿಂದ ಪ್ರತಿನಿತ್ಯ ಸುಮಾರು 80 ರಿಂದ 120 ಜನರು ಭೇಟಿ ನೀಡುತ್ತಿದ್ದಾರೆ ಎನ್ನುತ್ತಾರೆ ಕಿಯಾಸ್ಕ್ ಮೇಲ್ವಿಚಾರಕ ಆಯುಷ್ ವೈದ್ಯ ಡಾ|ಕಮಲಾಕರ್ ಅರಳೆ.
ಬಿಸಿ ಹಬೆ ತೆಗೆದುಕೊಂಡ ನಂತರ ಪ್ರತಿಯೊಬ್ಬರಿಗೂ 5 ದಿನಕ್ಕೆ ಹೋಮಿಯೋಪಥಿ ಔಷ ಧ ಆರ್ಸೆನಿಕ್ ಅಲ್ಬಂ-30, ಆರ್ಯುವೇದ ಔಷ ಧ ಅಶ್ವಗಂಧವಟಿ, ಯುನಾನಿ ಪದ್ಧತಿಯ ಆರ್ಕ ಅಜೀಬ ದ್ರಾವಣವನ್ನು ಉಚಿತವಾಗಿ ನೀಡಲಾಗುತ್ತದೆ. ಇದೇ ವೇಳೆ ಗ್ರಾಮಸ್ಥರಿಗೆ ಕೊರೊನಾ ಬಗ್ಗೆ ತಿಳಿವಳಿಕೆ ನೀಡಿ, ತಪ್ಪು ಗ್ರಹಿಕೆಗಳನ್ನು ನಿವಾರಿಸಿ ಸೋಂಕು ತಡೆಗೆ ಸರಕಾರದ ಕೋವಿಡ್-19 ಮಾರ್ಗಸೂಚಿ ಪಾಲಿಸುವಂತೆ ವೈದ್ಯರು ಮನವರಿಕೆ ಮಾಡುತ್ತಿದ್ದಾರೆ. ಈ ಮೂಲಕ ರಾಜ್ಯದಲ್ಲೇ ಮೊದಲ ಬಾರಿಗೆ ನಡೆಸಿದ ವಿಶೇಷ ಪ್ರಯತ್ನಕ್ಕೆ ಗ್ರಾಮಸ್ಥರಿಂದಲೂ ಮೆಚ್ಚುಗೆ ಮಾತು ಕೇಳಿ ಬರುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.