ಕೋಚಲಾಪುರ: ಮಳೆಗಾಗಿ ಕತ್ತೆಗಳ ಮರವಣಿಗೆ
Team Udayavani, Jun 20, 2019, 10:43 AM IST
ನರೇಗಲ್ಲ: ವರುಣನ ಕೃಪೆಗಾಗಿ ಕೋಚಲಾಪುರ ಗ್ರಾಮದಲ್ಲಿ ಕತ್ತೆಗಳ ಮೆರವಣಿಗೆ ನಡೆಯಿತು.
ನರೇಗಲ್ಲ: ಮಳೆ ಬಾರದೆ ಕಂಗಾಲಾದ ರೈತರು, ಸಾರ್ವಜನಿಕರು ಕತ್ತೆಗೆ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಮಾಡಿ ಕರುಣೆ ತೋರೋ ವರುಣದೇವ ಎಂದು ಕೋಚಲಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಹೋಬಳಿ ವ್ಯಾಪ್ತಿಯ ರೈತರು ಕಳೆದ ಐದಾರು ವರ್ಷಗಳಿಂದ ಮಳೆ ಇಲ್ಲದೆ ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ. ಪ್ರಸಕ್ತ ಬಾರಿ ಮುಂಗಾರು ಆರಂಭವಾದರೂ ಮಳೆಯಾಗಿಲ್ಲ. ವರುಣನ ಕೃಪೆಗಾಗಿ ಕಪ್ಪೆ, ಕತ್ತೆಗಳ ಮೆರವಣಿಗೆ ಮಾಡುತ್ತಾ ಗುರ್ಜಿ ಹಾಡುತ್ತಿದ್ದಾರೆ.
ಸಮೀಪದ ಕೋಚಲಾಪುರ ಗ್ರಾಮಸ್ಥರು ಮಂಗಳವಾರ ಸಂಜೆ ಕತ್ತೆಗಳ ಮರವಣಿಗೆ ಮಾಡಿ ಮಳೆಗಾಗಿ ಪ್ರಾರ್ಥಿಸಿದರು. ಕತ್ತೆಗಳನ್ನು ಸಿಂಗರಿಸಿ, ವಿಶೇಷ ಪೂಜೆ ಸಲ್ಲಿಸಿದ ನಂತರ ಪ್ರಮುಖ ಬೀದಿಗಳಲ್ಲಿ ವಿಶೇಷ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ರಾಜೇಸಾಹೇಬ ನದಾಫ, ಕತ್ತೆ ಮೆರವಣಿಗೆ ಮಾಡಿದರೆ ಮಳೆಯಾಗಿ ಉತ್ತಮ ಬೆಳೆ ಬರುತ್ತದೆ ಎಂಬ ನಂಬಿಕೆ ಪ್ರಚಲಿತದಲ್ಲಿದೆ. ಕೆಲ ಗ್ರಾಮಗಳಲ್ಲಿ ಮಳೆಗಾಗಿ ದೇವಸ್ಥಾನಗಳಲ್ಲಿ ಭಜನೆ, ಅಭಿಷೇಕ, ಅನ್ನಸಂತರ್ಪಣೆ ನಡೆಸಿ, ಶ್ರದ್ಧಾ ಭಕ್ತಿಯಿಂದ ದೇವರಲ್ಲಿ ಮೊರೆಯಿಡುತ್ತಿದ್ದಾರೆ ಎಂದರು.
ಕೆರೆ, ಹಳ್ಳ, ಕೊಳ್ಳಗಳ ನೀರು ಬತ್ತಿ ಹೋಗಿವೆ. ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಜನ ಜಾನುವಾರಗಳು ಬದುಕಿಗೆ ಕಷ್ಟವಾಗಿದೆ. ಈಗಾಗಲೇ ಅನೇಕರು ಮಳೆಗಾಗಿ ವಾರ, ಉಪವಾಸ ಮಾಡುತ್ತಿದ್ದಾರೆ. ಮುಂಗಾರು ಮಳೆ ಇಲ್ಲದೆ ಅನ್ನದಾತ ಚಿಂತಾಕ್ರಾಂತನಾಗಿದ್ದಾರೆ ಎಂದರು.
ಪಪಂ ಸದಸ್ಯ ರಾಚಯ್ಯ ಮಾಲಗಿತ್ತಿಮಠ, ಶ್ರೀಕಾಂತ ರಡ್ಡೇರ, ಮಲ್ಲರಡ್ಡೇಪ್ಪ ರಡ್ಡೇರ, ರಜಾಕಸಾಬ್ ಅಬ್ಬಿಗೇರಿ, ಕುಮಾರ ಅಮಾತಿಗೌಡ್ರ, ಶಿವಲಿಂಗಯ್ಯ ಅಮಾತಿಗೌಡ್ರ, ಶರಣಪ್ಪಗೌಡ ಅಯ್ಯನಗೌಡ್ರ, ಬಾಬುಸಾಬ ಮಾಕಿ, ಸಂಗಯ್ಯ ಮಾಲಗಿತ್ತಿಮಠ, ಸುರೇಶ ರಡ್ಡೇರ, ಚಂದ್ರಕಾಂತ ರಡ್ಡೇರ, ಎ.ಎಸ್. ರವಡೂರ ಸೇರಿದಂತೆ ಗ್ರಾಮಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.