ಶವ ಸಂಸ್ಕಾರಕ್ಕೆ ಹಳ್ಳದ ದಂಡೆಯೇ ಗತಿ
Team Udayavani, Jan 13, 2020, 12:42 PM IST
ಶಿರಹಟ್ಟಿ: ಈ ಊರಲ್ಲಿ ಶವ ಸಂಸ್ಕಾರ ಮಾಡಲು ಸ್ಮಶಾನ ಭೂಮಿಯೇ ಇಲ್ಲವಾಗಿದ್ದು, ಪರದಾಡುವ ಸ್ಥಿತಿಯಿದೆ. ಹೀಗಾಗಿ ಶವ ಸಂಸ್ಕಾರಕ್ಕೆ ಊರಿನ ಪಕ್ಕದಲ್ಲಿರುವ ಹಳ್ಳದ ದಂಡೆಯೇ ಗತಿಯಾಗಿದೆ. ಹೌದು. ಇದು ಶಿರಹಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಹರಿಪುರ ಗ್ರಾಮ (ಎರಡನೇ ವಾರ್ಡ್)ದಲ್ಲಿನ ದುಸ್ಥಿತಿ.
ಖರೀದಿ ಪ್ರಕ್ರಿಯೆ ನನೆಗುದಿಗೆ: ಕಳೆದ ಹತ್ತು ವರ್ಷಗಳ ಹಿಂದೆ ಸ್ಮಶಾನ ಭೂಮಿಗಾಗಿ ನಿವೇಶನ ಖರೀದಿಸಲು ಪಪಂ ಮುಂದಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ನಿವೇಶನವನ್ನು ಕೂಡ ಗುರುತಿಸಲಾಗಿತ್ತು. ಆದರೆ ಅಧಿಕಾರಿಗಳ ಬದಲಾವಣೆಯಿಂದಾಗಿ ಖರೀದಿ ಪ್ರಕ್ರಿಯೆ ನನೆಗುದಿಗೆ ಬಿದ್ದಿದ್ದು, ಇಂದಿಗೂ ಸಮಸ್ಯೆ ಕಗ್ಗಂಟಾಗಿಯೇ ಉಳಿದಿದೆ ಎನ್ನುತ್ತಾರೆ ಗ್ರಾಮಸ್ಥರು.
ನಿವೇಶನ ಖರೀದಿಯಾಗಿಲ್ಲ: ಕಳೆದ ನಾಲ್ಕೈದು ತಿಂಗಳ ಹಿಂದೆ ಶವ ಸಂಸ್ಕಾರ ಮಾಡಲು ನಿವೇಶನದ ಮಾಲೀಕರು ಅನುಮತಿ ನೀಡದ ಕಾರಣ ಶವವನ್ನು ತಹಶೀಲ್ದಾರ್ ಕಚೇರಿ ಎದುರು ಇಟ್ಟು ಪ್ರತಿಭಟನೆ ಮಾಡಲಾಗಿತ್ತು. ಇದರಿಂದ ತಹಶೀಲ್ದಾರ್ ಒಂದು ತಿಂಗಳ ಅವಧಿಯಲ್ಲಿ ಖರೀದಿ ಪ್ರಕ್ರಿಯೆ ಮುಗಿಸುವುದಾಗಿ ಭರವಸೆ ನೀಡಿದ್ದರು. ದುರಾದೃಷ್ಟ ಈವರೆಗೂ ನಿವೇಶನ ಖರೀದಿಯಾಗದೇ ಇರುವುದು ಬೇಸರದ ಸಂಗತಿ. ಇಂದಿಗೂ ನಿವೇಶನದಲ್ಲಿ ಶವಗಳನ್ನು ಹೂಳಲು ಅವಕಾಶವಿಲ್ಲದೇ ಹಳ್ಳದ ದಂಡೆಯೇ ಗತಿಯಾಗಿದೆ. ನಿವೇಶನ ಖರೀದಿಯಾಗದೇ ಇರುವುದರಿಂದ ಶವ ಸಂಸ್ಕಾರ ಮಾಡಲು ಅವಕಾಶ ನೀಡುತ್ತಿಲ್ಲ. ಆದ್ದರಿಂದ ಊರಿನ ಪಕ್ಕದಲ್ಲಿರುವ ಹಳ್ಳದ ದಂಡೆಯೇ ನಮಗೆ ಗತಿಯಾಗಿದೆ ಎನ್ನುವುದು ಗ್ರಾಮಸ್ಥರ ಅಳಲು.
ಸ್ಮಶಾನಕ್ಕಾಗಿ ಹಣ ಮಂಜೂರಾಗಿದ್ದು, ನಿವೇಶನದಾರರ ಖಾತೆಗೆ ಹಣ ಜಮಾವಣೆಯಾಗಬೇಕಿದೆ. ಆದಷ್ಟು ಶೀಘ್ರ ಈ ಪ್ರಕ್ರಿಯೆ ಮುಗಿಸಿ ಸಮಸ್ಯೆ ಬಗೆಹರಿಸಲಾಗುವುದು. –ಯಲ್ಲಪ್ಪ ಗೋಣೆಣ್ಣವರ, ತಹಶೀಲ್ದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.