ಸೌಲಭ್ಯವಿಲ್ಲದೇ ಸೊರಗುತ್ತಿದೆ ಮುಶಿಗೇರಿ ಲೈಬ್ರರಿ
Team Udayavani, Dec 1, 2019, 4:12 PM IST
ಗಜೇಂದ್ರಗಡ: ಸಮೀಪದ ಮುಶಿಗೇರಿ ಗ್ರಾಮದ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿದ್ದು, ನಿರ್ವಹಣೆ ಇಲ್ಲ. ಗ್ರಂಥಾಲಯ ಕಟ್ಟಡ ಸುತ್ತಲೂ ಅನೈರ್ಮಲ್ಯದಿಂದ ಕಲುಷಿತ ವಾತಾವರಣವಿದ್ದು, ಓದುಗರು ಮೂಗು ಮುಚ್ಚಿಕೊಂಡೇ ಹೋಗುವ ಸ್ಥಿತಿ ಇದೆ.
1993-94ನೇ ಸಾಲಿನ ನಬಾರ್ಡ್‌ಯೋಜನೆಯಡಿ ಗ್ರಾಮದಲ್ಲಿ ಗ್ರಂಥಾಲಯ ಆರಂಭಿಸಲಾಗಿದ್ದು, ಕಟ್ಟಡ ನವೀಕರಣಗೊಂಡು ದಶಕ ಕಳೆದಿದೆ. ಆದರೆಸೂಕ್ತ ನಿರ್ವಹಣೆ ಇಲ್ಲದೇ ಕಟ್ಟಡ ಅಲ್ಲಲ್ಲಿಸೋರುತ್ತಿದೆ. ಮಳೆ ಬಂದರೆ, ಗ್ರಂಥಾಲಯ ಸ್ಥಿತಿ ಹೇಳತೀರಾಗಿದೆ. ಈ ಕುರಿತು ಸ್ಥಳೀಯಆಡಳಿತ ಇಚ್ಚಾಶಕ್ತಿ ಪ್ರದರ್ಶಿಸದ ಪರಿಣಾಮಇಂದಿಗೂ ಅದೇ ಪರಿಸ್ಥಿತಿ ಮುಂದುವರಿದಿದೆ. ಒಟ್ಟು 262 ಸದಸ್ಯರಿದ್ದು, 3317 ಪುಸ್ತಕಗಳಿವೆ. ನಿತ್ಯ ಗ್ರಾಮದ ಜನತೆಗ್ರಂಥಾಲಯಕ್ಕೆ ಬಹಳ ಉತ್ಸುಕತೆಯಿಂದಆಗಮಿಸುತ್ತಾರೆ.
ಆದರೆ ಓದುಗರಿಗೆ ಬೇಕಾಗುವ ದಿನಪತ್ರಿಕೆಗಳು, ಮಾಸಪತ್ರಿಕೆಗಳು ಮತ್ತು ಹೊಸ ಪುಸ್ತಕಗಳ ಕೊರತೆ ಕಾಡುತ್ತಿದೆ.ದಿನಪತ್ರಿಕೆ ಕಡಿಮೆ ಬರುವುದರಿಂದ ಇದ್ದ ಎರಡು ದಿನಪತ್ರಿಕೆಗಳನ್ನು ಎಲ್ಲರೂ ಓದುವಂತಾಗಿದೆ.ಗ್ರಾಮಸ್ಥರಿಂದ ಪ್ರತಿ ವರ್ಷ ಗ್ರಂಥಾಲಯ ಕರವೆಂದು ಲಕ್ಷಾಂತರ ರುಪಾಯಿ ವಸೂಲಿಮಾಡುತ್ತೀರಿ, ಆದರೆ ಕುಡಿಯುವ ನೀರು, ಸ್ವಚ್ಛತೆ ಸೇರಿ ಗ್ರಂಥಾಲಯಕ್ಕೆ ಬೇಕಾದಮೂಲ ಸೌಲಭ್ಯ ಕಲ್ಪಿಸುವಲ್ಲಿ ಹಿಂದೇಟು ಏಕೆ ಹಾಕುತ್ತೀರಿ ಎನ್ನುವುದು ಸಾರ್ವಜನಿಕರಪ್ರಶ್ನೆಯಾಗಿದೆ. ಗ್ರಾಮೀಣ ಪ್ರದೇಶದ ಯುವಕರಿಗೆ ಗ್ರಂಥಾಲಯ ಸದುಪಯೋಗ ಆಗುವನಿಟ್ಟಿನಲ್ಲಿ ಸ್ಪರ್ಧಾತ್ಮಕ ಪುಸ್ತಕಗಳ ಜತೆ ಎಲ್ಲ ದಿನಪತ್ರಿಕೆಗಳನ್ನು ಪೂರೈಸಲು ಗ್ರಾಪಂ ಆಡಳಿತ ಮುಂದಾಗಬೇಕಿದೆ.
ಅವ್ಯವಸ್ಥೆಯ ಆಗರವಾಗಿರುವ ಗ್ರಾಮದ ವಾಚನಾಲಯ ಕಟ್ಟಡ ದುರಸ್ತಿಗೊಳಿಸಬೇಕು, ಜತೆಗೆ ಮುಂಭಾಗದಲ್ಲಿನ ನೈರ್ಮಲ್ಯ ಸ್ವತ್ಛತೆ ಮಾಡುವುದಲ್ಲದೇ, ಮೂಲ ಸೌಲಭ್ಯಕ್ಕಾಗಿ ಗ್ರಾಪಂನ ಸಾಮಾನ್ಯ ಸಭೆಯಲ್ಲಿ ಆಡಳಿತ ಮಂಡಳಿಗೆ ಒತ್ತಾಯಿಸಲಾಗುವುದು. -ಬಸವರಾಜ ಡಗ್ಗಿ,ಗ್ರಾಪಂ ಸದಸ್ಯ
-ಡಿ.ಜಿ. ಮೋಮಿನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.