24ರಂದು ಬೆಂಗಳೂರು ಚಲೋ
Team Udayavani, Feb 3, 2019, 11:17 AM IST
ಲಕ್ಷ್ಮೇಶ್ವರ: ಬೇಡ ಜಂಗಮ ಸಮಾಜವು ಬಹು ಹಿಂದಿನಿಂದಲೂ ಇರುವ ಜಾತಿ ವ್ಯವಸ್ಥೆಯಾಗಿದ್ದರೂ ಸಮಾಜಕ್ಕೆ ಸಾಂವಿಧಾನಿಕವಾಗಿ ದೊರಕಬೇಕಾದ ಸೌಲಭ್ಯ ಸಿಕ್ಕಿಲ್ಲ. ಸಮಾಜದ ಪ್ರತಿಯೊಬ್ಬರೂ ಸಂಘಟಿತರಾಗಿ ಸರಕಾರದ ಎದುರು ನಮ್ಮ ಹಕ್ಕು ಮಂಡಿಸುವ ನಿಟ್ಟಿನಲ್ಲಿ ಫೆ. 24ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಬೇಡ ಜಂಗಮ ಸಮಾಜ ರಾಜ್ಯಾಧ್ಯಕ್ಷ ವೀರೇಂದ್ರ ಪಾಟೀಲ ಹೇಳಿದರು.
ಪಟ್ಟಣದ ಗಡ್ಡದೇವರಮಠದ ಆವರಣದಲ್ಲಿ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಜಂಗಮ ಸಮಾಜ ಸಭೆಯಲ್ಲಿ ಅವರು ಮಾತನಾಡಿದರು. ಬೇಡ ಜಂಗಮ ಮೊದಲಿನಿಂದಲೂ ಇರುವ ವ್ಯವಸ್ಥೆಯಾಗಿದೆ. ಆದರೆ ಅದರ ಬಗ್ಗೆ ಸಮಾಜದಲ್ಲಿ ತಿಳಿವಳಿಕೆ ಬರುವುದು ಅವಶ್ಯವಾಗಿದೆ. ಬೇಡ ಜಂಗಮ ಸಮಾಜಕ್ಕೆ ಸರಕಾರದಿಂದ ದೊರೆಯಬೇಕಾದ ಅನೇಕ ಸೌಲಭ್ಯಗಳಿಂದ ಜಂಗಮ ಸಮಾಜ ವಂಚಿತವಾಗುತ್ತಿದೆ. ಈ ನಿಟ್ಟಿನಲ್ಲಿ ಸಮಾಜ ಬಾಂಧವರು ಬೇಡ ಜಂಗಮ ಸಮಾಜದ ಮಹತ್ವ ಮತ್ತು ಅದರ ಮೂಲವನ್ನು ತಿಳಿದುಕೊಳ್ಳುವ ಮೂಲಕ ಸಂಘಟಿತರಾಗಿ ಎಂದು ಕರೆ ನೀಡಿದ ಅವರು, ಜಂಗಮ ಸಮಾಜ ಬಾಂಧವರು ಒಗ್ಗಟ್ಟಾಗಿ ಇದೇ ತಿಂಗಳು 24ರಂದು ಬೆಂಗಳೂರು ಚಲೋ ಕಾರ್ಯಕ್ರಮ ಸಂಘಟಿಸಲಾಗಿದ್ದು, ಸಮಾಜದ ಪ್ರತಿಯೊಬ್ಬರೂ ಇಚ್ಛಾಶಕ್ತಿಯಿಂದ ಪಾಲ್ಗೊಂಡು ನಮ್ಮ ಹಕ್ಕುಗಳಿಗಾಗಿ ಬೇಡಿಕೆ ಮಂಡಿಸೋಣ ಎಂದು ಮನವಿ ಮಾಡಿದರು.
ಸಭೆ ಅಧ್ಯಕ್ಷತೆಯನ್ನು ಗಂಗಾಧರಯ್ಯ ಹಾಲೇವಾಡಿಮಠ ವಹಿಸಿದ್ದರು. ರುದ್ರಯ್ಯ ಹಿರೇಮಠ(ಬಟ್ಟೂರ), ಚನ್ನಬಸಯ್ಯ ಗಡ್ಡಿಮಠ (ಸೂರಣಗಿ), ಪ್ರವೀಣ ಕುಲಕರ್ಣಿ, ಎಂ. ಸಿದ್ಧಲಿಂಗಯ್ಯ, ಸಿದ್ಧಯ್ಯ ಬಾಳಿಹಳ್ಳಿಮಠ, ಸಿ.ಆರ್. ಲಕ್ಕುಂಡಿಮಠ, ಚರಂತಯ್ಯ ಬಾಳಿಹಳ್ಳಿಮಠ, ಗುರುಶಾಂತಯ್ಯ ಬಾಳಿಹಳ್ಳಿಮಠ, ಶಿವಯೋಗಿ ಗಡ್ಡದೇವರಮಠ, ರವಿ ಪುರಾಣಿಕಮಠ, ರುದ್ರಯ್ಯ ಘಂಟಾಮಠ, ಬಿ.ಟಿ. ಪಾಟೀಲ, ಮಹೇಶ್ವರಯ್ಯ ಹಿರೇಮಠ ಸೇರಿದಂತೆ ಬಟ್ಟೂರು, ಶಿಗ್ಲಿ, ಸೂರಣಗಿ, ಯಳವತ್ತಿ, ಮಾಗಡಿ, ಅಡರಕಟ್ಟಿ ಮತ್ತಿತರ ಗ್ರಾಮಗಳಿಂದ ಸಮಾಜದ ಅನೇಕ ಹಿರಿಯರು, ಯುವಕರು ಇದ್ದರು. ವಿಜಯ ಹೊಳ್ಳಿಯವರಮಠ ನಿರೂಪಿಸಿದರು. ಪಂಚಯ್ಯ ಸಾಲಿಮಠ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ
ಸಿನೆಮಾ ಪೋಸ್ಟರ್ ಗಳ ಕೋಣೆಯಲ್ಲಿ-ಹಾಲಿವುಡ್ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ
Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.