ಹನುಮಂತ ದೇವಸ್ಥಾನಕ್ಕಿದೆ ವಿಶೇಷ ಇತಿಹಾಸ
Team Udayavani, Nov 8, 2018, 4:30 PM IST
ಲಕ್ಷ್ಮೇಶ್ವರ: ಪಟ್ಟಣದ ಕೇಂದ್ರ ಭಾಗದ ಮುಖ್ಯ ಬಜಾರ್‌ದಲ್ಲಿ ದಕ್ಷಿಣಾಭಿಮುಖವಾಗಿ ಇರುವ ಹನುಮಂತ ದೇವರ ದೇವಸ್ಥಾನಕ್ಕೆ ವಿಶೇಷವಾದ ಇತಿಹಾಸವಿದೆ. ಪುಲಿಗೆರೆ(ಲಕ್ಷ್ಮೇಶ್ವರ)ಯ ಇತಿಹಾಸದಲ್ಲಿ ಈ ಹಾವಳಿ ಹನುಮಂತ ದೇವರ ದೇವಸ್ಥಾನಕ್ಕೆ ತನ್ನದೇ ಆದ ವಿಶೇಷತೆಯಿದ್ದು, ಅತ್ಯಂತ ಜಾಗೃತ ದೇವಸ್ಥಾನವಾಗಿದೆ. ಹಲವಾರು ವರ್ಷಗಳ ಹಿಂದೆ ಪಟ್ಟಣದಲ್ಲಿ ಪ್ಲೇಗ್, ಕಾಲರಾ, ಮಲೇರಿಯಾಗಳು ಕಾಡುತ್ತಿರುವ ಕಾಲದಲ್ಲಿ ನಿತ್ಯ ಸಾವು ನೋವುಗಳು ಸಂಭವಿಸುತ್ತಿದ್ದವಂತೆ. ಈ ಸಂದರ್ಭದಲ್ಲಿ ಊರಿನ ಜನರು ಹನಮಂತ ದೇವರನ್ನು ಪ್ರಾರ್ಥಿಸಿ ರೋಗಗಳ ಹಾವಳಿ ತಡೆಗಟ್ಟಿ ಕಾಪಾಡುವಂತೆ ಬೇಡಿಕೊಂಡಾಗ ಜನರನ್ನು ರೋಗದಿಂದ ರಕ್ಷಣೆ ಮಾಡಿದ ಐತಿಹ್ಯ ಹಾವಳಿ ಹನಮಂತ ದೇವರಿಗಿದೆ. ಅಲ್ಲದೆ ಅಂದಿನ ದಿನಗಳಲ್ಲಿ ಕಳ್ಳಕಾಕರ ಹಾವಳಿಯು ಹೆಚ್ಚಾಗಿದ್ದ ಸಂದರ್ಭದಲ್ಲಿ ಭಕ್ತರ ಮೊರೆ ಆಲಿಸಿ ಅದನ್ನು ನಿಯಂತ್ರಿಸಲು ಸ್ವತಃ ಹನಮಂತ ದೇವರೇ ಕಳ್ಳರ ಹಾವಳಿ ತಡೆಗಟ್ಟಲು ರಾತ್ರಿಯ ವೇಳೆ ಪಹರೆ ಮಾಡಿ ದುಷ್ಟರನ್ನು ಶಿಕ್ಷಿಸುತ್ತಿದ್ದನಂತೆ. ಒಟ್ಟಿನಲ್ಲಿ ಭಕ್ತರಿಗೆ ಬರುವ ಕಷ್ಟ, ತೊಂದರೆಗಳನ್ನು ನಿವಾರಿಸಿ ಪರಿಹರಿಸಲು ನೆಲೆನಿಂತ ಹನಮಪ್ಪನ ಮಹಿಮೆ ಅಪಾರ.
ಭಕ್ತರ ಕನಸಿನಲ್ಲಿ ಬಂದ ಹನಮಂತ ಪಟ್ಟಣದಲ್ಲಿ ಇದೇ ಪ್ರದೇಶದಲ್ಲಿ ದೇವಸ್ಥಾನ ಸ್ಥಾಪಿಸುವಂತೆ ಆಜ್ಞಾಪಿಸಿದ್ದರಿಂದ ನಿರ್ಮಿಸಿದ ದೇವಸ್ಥಾನದಲ್ಲಿ ಬಂದು ನೆಲೆಗೊಂಡನೆಂದು ಪ್ರತೀತಿ ಇದೆ. ಅಂದಿನ ದಿನಗಳಲ್ಲಿ ಇಲ್ಲಿನ ಕುಂಬಾರ ಮತ್ತು ಹತ್ತಿಕಾಳ ಮನೆತನದವರಿಂದ ಪೂಜೆ ಪುನಸ್ಕಾರಗಳು ವ್ಯವಸ್ಥಿತವಾಗಿ ನಡೆದುಕೊಂಡು ಬಂದಿವೆ. ದೇವಸ್ಥಾನವನ್ನು ಪುನರುಜ್ಜೀವನಗೊಳಿಸಲು ತೀರ್ಮಾನಿಸಿದ ಭಕ್ತ ಮಂಡಳಿ 2012ರಲ್ಲಿ 1.5 ಕೋಟಿ ರೂ.ಗಳ ವೆಚ್ಚದಲ್ಲಿ ವಿಶೇಷವಾದ ಕಲ್ಲಿನಿಂದ ಸುಂದರವಾದ ದೇವಸ್ಥಾನ ಪುನರ್ ನಿರ್ಮಾಣ ಮಾಡಲಾಗಿದೆ. ದಿ| ವೇ| ರುದ್ರಯ್ಯನವರು ಪುರಾಣಿಕಮಠ ಇವರ ನೇತೃತ್ವದಲ್ಲಿ ಸಾವಿರಾರು ಭಕ್ತರ ಸೇವಾ ಕಾರ್ಯದಿಂದ ದೇವಸ್ಥಾನ ಹೊಸ ಸ್ವರೂಪ ಹೊಂದಿದ್ದು, ನಿತ್ಯ ದೇವಸ್ಥಾನದಲ್ಲಿ ಪೂಜೆ, ಮಂಗಳಾರತಿ ಮತ್ತು ಶನಿವಾರ ವಿಶೇಷ ಅಲಂಕಾರಿಕ ಪೂಜೆ ನೆರವೇರಿ ಪಟ್ಟಣದ ಎಲ್ಲ ವರ್ಗದ ಜನರು ಇಲ್ಲಿಗೆ ಬಂದು ಪ್ರಾರ್ಥಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
ಗದಗ: ನೀರು ಸೋರಿಕೆ- ನದಿಯಲ್ಲಿ ನೀರಿದ್ದರೂ ತಪ್ಪದ ಹಾಹಾಕಾರ!
ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್ ಮುದ್ರಣ ಭರಾಟೆ; ಕ್ಯಾಲೆಂಡರ್-ತೂಗು ಪಂಚಾಂಗಗಳಿಗೆ ಖ್ಯಾತಿ
Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.