ಗಾನ-ನಾಟ್ಯ-ಸಂಗೀತ ಸಂಗಮ
Team Udayavani, Jan 7, 2019, 10:08 AM IST
ಲಕ್ಷ್ಮೇಶ್ವರ: ಪುಲಿಗೆರೆ ಉತ್ಸವದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರಾದ ಬೆಂಗಳೂರಿನ ಭರತನಾಟ್ಯ ಪ್ರವೀಣ ಅಶೋಕ ಕುಮಾರ ಗರಡಿಯಲ್ಲಿ ಪ್ರಾವಿಣ್ಯತೆ ಹೊಂದಿದ ನಾಟ್ಯಾಂಜಲಿ ನೃತ್ಯಶಾಲೆ ಕಲಾವಿದರು ಪ್ರಸ್ತುತಪಡಿಸಿದ ಭರತನಾಟ್ಯ ನೆರೆದಿದ್ದ ಅಪಾರ ಪ್ರೇಕ್ಷಕರನ್ನು ಸೆಳೆಯಿತು. ಆರಂಭದಲ್ಲಿ ಕಾರ್ಯಕ್ರಮಕ್ಕೆ ಶುಭ ಕೋರುವ ಪುಷ್ಪಾಂಜಲಿ ನೃತ್ಯವನ್ನು ರಾಗ ಅಮೃತವರ್ಷಿಣಿ ಆದಿತಾಳದಲ್ಲಿ ಪ್ರಸ್ತುತಪಡಿಸಿದರು. ನಂತರ ವಿಘ್ನನಾಶಕ ಗಣಪತಿ ವಂದನೆ ಆರಭಿ ರಾಗದಲ್ಲಿ ನೃತ್ಯದ ಮೂಲಕ ಗಣಪತಿಯ ಆಶೀರ್ವಾದ ಕೇಳಿದ ಭಂಗಿಗೆ ಮನ ಸೋತರು. ಹೀಗೆ ವಿವಿಧ ರೀತಿಯ ಪ್ರದರ್ಶನ ನೀಡಿದರು.
ಸುಬೇಂದ್ರ ಜೈನ್, ಆದಿತಿ ಶೋಕ, ಸ್ಫೂರ್ತಿ ಅಶೋಕ, ಚಂದನಾ, ರೋಶನಿ, ವರ್ಷಿನಿ, ಸನ್ಮತಿ ಇವರು ಉತ್ಸವದ ಎರಡನೇ ದಿನಕ್ಕೆ ರಂಗು ತಂದರು. ಎರಡು ಗಂಟೆಗೂ ಅಧಿಕ ಕಾಲ ವಿವಿಧ ರೂಪಕ ಪ್ರಸ್ತುತಪಡಿಸಿದರು.
ಮಂತ್ರ ಮುಗ್ಧಗೊಳಿಸಿದ ಭರತನಾಟ್ಯ
ಲಕ್ಷ್ಮೇಶ್ವರ: ಪುಲಿಗೆರೆ ಉತ್ಸವದ ಎರಡನೇ ದಿನ ಸಂಜೆ ಬೆಂಗಳೂರಿನ ಪ್ರೀತಿ ಸುಂದರರಾಜನ್ ನೇತೃತ್ವದಲ್ಲಿ ಪ್ರಸ್ತುತ ಪಡಿಸಲ್ಪಟ್ಟ ಭರತನಾಟ್ಯದ ವಿವಿಧ ಭಂಗಿಗಳು ನೋಡುಗರನ್ನು ಮಂತ್ರ ಮುಗ್ಧಗೊಳಿಸಿತು.
ಗಣಪತಿ ಸ್ತುತಿಯೊಂದಿಗೆ ನೃತ್ಯ ಆರಂಭಿಸಿ ಪುಷ್ಪಾಂಜಲಿ ನೃತ್ಯ ಪ್ರಸ್ತುತಪಡಿಸಿದರು. ಶಿವಸ್ತುತಿಯನ್ನು ತಾಂ, ತಾಂ ಎನ್ನುತ್ತ ನೃತ್ಯ ಮಾಡುತ್ತ ಅಚ್ಚರಿಯ ರೀತಿಯಲ್ಲಿ ಹೆಜ್ಜೆಹಾಕಿ ಪ್ರೇಕ್ಷಕರಿಗೆ ಮುದ ನೀಡಿದರು. ನಂತರ ದಶಾವತಾರ, ಕೃಷ್ಣಾವತಾರದಲ್ಲಿ ಅದ್ಬುತವಾಗಿ ನೃತ್ಯ ಪ್ರದರ್ಶನ ನೀಡಿ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.