ಪುಟ್ಟ ಮಳಿಗೆಯಲ್ಲೇ ವಾಚನಾಲಯ


Team Udayavani, Oct 29, 2019, 12:39 PM IST

gadaga-tdy-2

ರೋಣ: ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿರುವ, ಸುಮಾರು ನಾಲ್ಕುವರೆ ಸಾವಿರ ಜನಸಂಖ್ಯೆ ಹೊಂದಿರುವ ಹಿರೇಹಾಳ ಗ್ರಾಮದಲ್ಲಿನ ವಾಚನಾಲಯಕ್ಕೆ ಸ್ವಂತ ಕಟ್ಟಡ, ಸೂಕ್ತ ಆಸನ, ಸಮರ್ಪಕ ವಾತಾವರಣ, ಗಾಳಿ ಬೆಳಕು ಸೇರಿದಂತೆ ಮೂಲ ಸೌಕರ್ಯಗಳಿಲ್ಲದೇ ಓದುಗರಿಗೆ ಗ್ರಂಥಾಲಯ ಇದ್ದು ಇಲ್ಲದಂತಾಗಿದೆ.

1994ರಲ್ಲಿ ಈ ಗ್ರಂಥಾಲಯ ಸ್ಥಾಪನೆಯಾಗಿದೆ. ಅಲ್ಲಿಂದ ಇಲ್ಲಿಯವರೆ ಸ್ವಂತ ಕಟ್ಟಡ ನೀಡುವಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ. ಈ ಗ್ರಾಮಕ್ಕೆ ರಾಜ್ಯಹೆದ್ದಾರಿ ಹಾದು ಹೋಗುವುದರಿಂದ ಏಳೇಂಟು ಗ್ರಾಮಗಳಿಗೆ ಕೇಂದ್ರವಾಗಿದೆ. ಆದರೆ ಇಲ್ಲಿ ಒಂದು ಸುವ್ಯವಸ್ಥಿತವಾದ ಗ್ರಂಥಾಲಯವಿಲ್ಲದೆ ಇರುವುದು ಇಲ್ಲಿನ ಓದುಗರಿಗೆ ತೀವ್ರ ಹಿನ್ನಡೆಯಾಗಿದೆ. ಗ್ರಾಪಂನ 8 ಅಡಿ ಉದ್ದ 8 ಅಗಲದ ಸಣ್ಣ ಮಳಿಗೆಯಲ್ಲಿ ಗ್ರಂಥಾಲಯವಿದೆ. ಅಲ್ಲದೆ ಅದಕ್ಕೆ ನಾಮಫಲಕವಿಲ್ಲದೆ ಇರುವುದರಿಂದ ವಾಚನಾಲಯ ಇರುವುದೇ ಗೊತ್ತಾಗುತ್ತಿಲ್ಲ.

ಮುಂದೆಯೇ ಮೂತ್ರಾಲಯ-ಚರಂಡಿ: ಗ್ರಂಥಾಲಯದಲ್ಲಿ ಜಾಗದ ಜೊತೆಗೆ ಆಸನಗಳ ಕೊರತೆ ತುಂಬಾ ಇದ್ದು, ಇಲ್ಲಿಗೆ ಬರುವ ಎರಡೋ ಮೂರು ದಿನಪ್ರತಿಕೆಗಳನ್ನು ಓದಲು ಇಲ್ಲಿನ ಯುವಕರು, ಹಿರಿಯರು ಹೊರಗಡೆ ಕುಳಿತುಕೊಳ್ಳುತ್ತಾರೆ. ಆದರೆ ವಾಚನಾಲಯದ ಮುಂದೆಯೇ ಮೂತ್ರಾಲಯವಿರುವುದರಿಂದ ಗಬ್ಬು ನಾರುವ ವಾಸನೆಯಲ್ಲಿ ಪತ್ರಿಕೆ ಓದಬೇಕಾದ ಸ್ಥಿತಿ ಇಲ್ಲಿನ ಓದುಗರಿಗಿದೆ. ಅಲ್ಲದೆ ಈ ವಟಾರದ ಜನರು ಇರೋ ಬರೋ ಕಸವನ್ನು ತಂದು ಗ್ರಂಥಾಲಯದ ಮುಂದೆ ರಾಶಿ ಹಾಕಿದ್ದಾರೆ. ಇದರ ಪಕ್ಕದಲ್ಲಿ ಹರಿಯುವ ಚರಂಡಿಗೆ ಕಸಕಡ್ಡಿಗಳು ಬಿದ್ದು ಗಬ್ಬೆದ್ದು ನಾರುತ್ತಿವೆ. ಇದು ಓದುಗರಿಗೆ ಕಿರಿಕಿರಿಯಾಗಿದೆ. ಗ್ರಂಥಾಲಯದ ಗ್ರಂಥಪಾಲಕರು ತಡವಾಗಿ ಬರುವುದರಿಂದ ಓದುಗರಿಗೆ ತೊಂದರೆಯಾಗುತ್ತಿದೆ. ಪತ್ರಿಕೆ ಓದಲು ಬರುವವರಿಗೆ ಇದರಿಂದ ಸಮಸ್ಯೆಯಾಗುತ್ತಿದೆ. ಬೆಳಗ್ಗೆ 8ಕ್ಕೆ ಗ್ರಂಥಾಲಯ ಪ್ರಾರಂಭವಾಗಬೇಕು ಎನ್ನುವುದು ಇಲ್ಲಿನ ಓದುಗರ ಅಭಿಪ್ರಾಯವಾಗಿದೆ.

ಕಳೆದ 25 ವರ್ಷಗಳಿಂದ ಹಿರೇಹಾಳ ಗ್ರಂಥಾಲಯದ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದೇನೆ. ಕಟ್ಟಡದ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ಲಿಖೀತ ಹಾಗೂ ಮೌಖೀಕ ಮನವಿ ಮಾಡಿಕೊಂಡಿದ್ದೇನೆ. ಇಲ್ಲಿಯವರೆಗೆ ಕಟ್ಟಡ ನೀಡಿಲ್ಲ. ಈಗಿರುವ ಜಾಗ ಚಿಕ್ಕದಾಗಿದೆ. ಇದರಲ್ಲಿ 2000 ಪುಸ್ತಕ ಇಟ್ಟುಕೊಳ್ಳಲು ಜಾಗ ಸಾಲುತ್ತಿಲ್ಲ. ಇದರಿದ ಸರ್ಕಾರ ಹಾಗೂ ಇಲಾಖೆ ಸ್ವಂತ ಅಥವಾ ವ್ಯವಸ್ಥಿತವಾದ ಖಾಸಗಿ ಜಾಗವನ್ನು ಬಾಡಿಗೆ ರೂಪದಲ್ಲಿ ನೀಡಿದರೆ ಓದುಗರಿಗೆ ಅನುಕೂಲಕರವಾದ ವಾತವರಣ ಕಲ್ಪಿಸಲು ಸಹಾಯವಾಗುತ್ತದೆ. ಜಿ.ವಿ. ಬಾಗೂರಮಠ, ಗ್ರಂಥಪಾಲಕ

 25 ವರ್ಷಗಳ ಹಿಂದೆ ಸ್ಥಾಪನೆಯಾದ ನಮ್ಮೂರ ಗ್ರಂಥಾಲಯಕ್ಕೆ ಒಂದು ಸ್ವಂತ ಕಟ್ಟಡವಿಲ್ಲ. ಇರುವ ಕಟ್ಟದಲ್ಲಿ ಕಿಡಕಿ, ಗಾಳಿ ಬೆಳಕಿಲ್ಲ. ಜೊತೆಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆಗಳು ಇಲ್ಲದೆ ಇರುವುದರಿಂದ ಓದುಗರಿಗೆ ಇದ್ದು ಇಲ್ಲದಂತಾಗಿದೆ.-ಅಭಿಗಾಣಿಗೇರ,ಗ್ರಾಮದ ಯುವಕ

 

-ಯಚ್ಚರಗೌಡ ಗೋವಿಂದಗೌಡ್ರ

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು

ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು

gadag-police

Gadag: ಕೌಟುಂಬಿಕ ಕಲಹದಿಂದ ನೊಂದು ಪೊಲೀಸ್ ಪೇದೆ ಆತ್ಮಹ*ತ್ಯೆ!

Gove-Patil

Approve:ಮೈಕ್ರೋ ಫೈನಾನ್ಸ್‌ ಕಿರುಕುಳ ವಿರುದ್ಧದ ಸುಗ್ರೀವಾಜ್ಞೆಗೆ ಕೊನೆಗೂ ರಾಜ್ಯಪಾಲರ ಅಂಕಿತ

Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ

Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.