ಡಾ| ಗಿರಡ್ಡಿ ತವರಲ್ಲೇ ಗ್ರಂಥಾಲಯಕ್ಕಿಲ್ಲ ಸೂರು
Team Udayavani, Oct 23, 2019, 9:40 AM IST
ನರೇಗಲ್ಲ: ಶ್ರೇಷ್ಠ ಸಾಹಿತಿ, ವಿಮರ್ಶಕ ಡಾ| ಗಿರಡ್ಡಿ ಗೋವಿಂದರಾಜ ತವರು ಅಬ್ಬಿಗೇರಿ ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯ ಪ್ರಾರಂಭವಾಗಿ 15 ವರ್ಷ ಕಳೆದರೂ ಶಾಶ್ವತ ಸೂರಿಲ್ಲ. ಮೂಲ ಸೌಕರ್ಯಗಳ ಬಗ್ಗೆ ಯಾರೊಬ್ಬರೂ ಚಕಾರ ಎತ್ತುವಂತಿಲ್ಲ. ಹೀಗಾಗಿ ಇದು ಒಂದು ರೀತಿಯ ಅನಾಥ ಗ್ರಂಥಾಲಯವೆನಿಸಿದೆ.
ಸಾರ್ವಜನಿಕ ಗ್ರಂಥಾಲಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಾಹಿತ್ಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಾಮಾನ್ಯ ಜ್ಞಾನದ ಆಲಯ. ಅಪಾರ ಓದುಗರು ಗ್ರಂಥಾಲಯಕ್ಕೆ ಬರುತ್ತಿದ್ದರೂ ಕುಳಿತು ಓದಲು ಸ್ಥಳವಿಲ್ಲ. ಗ್ರಾ.ಪಂ ವಾಣಿಜ್ಯ ಕಟ್ಟಡದ ನೆಲ ಅಂತಸ್ಸಿನಲ್ಲಿ ಈ ಗ್ರಂಥಾಲಯ ನಡೆಯುತ್ತಿದೆ. ಸೂಕ್ತ ಗಾಳಿ, ಬೆಳಕಿನ ಕೊರತೆ ಎದುರಿಸುತ್ತಿದೆ. ಚಿಕ್ಕ ಅಂಗಡಿಯಂತಹ ಒಂದು ಮಳಿಗೆಯಲ್ಲಿ ಗ್ರಂಥಾಲಯವಿದ್ದು, ಬರುವ ಅಪಾರ ಸಂಖ್ಯೆಯ ಓದುಗರಿಗೆ ಈ ವಿಸ್ತೀರ್ಣ ಯಾವುದಕ್ಕೂ ಸಾಲುತ್ತಿಲ್ಲ. ಒಳಗಡೆ ಕುಳಿತರೆ ಉಸಿರುಗಟ್ಟುವ ವಾತಾವರಣ. ಜಾಗವಿಲ್ಲದಕ್ಕೆ ಹೊರಗೆ ನಿಂತು ಓದುವ ಸ್ಥಿತಿ ನಿರ್ಮಾಣವಾಗಿದೆ.
ಮೂಲ ಸೌಕರ್ಯವಿಲ್ಲ : ಗ್ರಾಮದಲ್ಲಿ ಸುಮಾರು 15 ಸಾವಿರಕ್ಕೂ ಅ ಧಿಕ ಜನಸಂಖ್ಯೆ ಹೊಂದಿದೆ. ಅಲ್ಲದೇ ಶ್ರೇಷ್ಠ ಸಾಹಿತಿ ಡಾ| ಗಿರಡ್ಡಿ ಗೋವಿಂದರಾಜ, ಡಿ.ಎ. ಉಪಾಧ್ಯ, ಸೋಮಶೇಖರ ಇಮ್ರಾಪುರ, ಕೆ.ಬಿ. ತಳವಗೇರಿ ಸೇರಿದಂತೆ ಮಹಾನ್ ಸಾಹಿತಿಗಳು ಇಲ್ಲಿ ಹುಟ್ಟಿ ಬೆಳೆದಿದ್ದಾರೆ. ಅಷ್ಟೇ ಅಲ್ಲ ಶಾಸನ, ಶಿಲ್ಪ ಕಲೆ, ಪುರಾತನ ದೇವಸ್ಥಾನ, ಕೆಂಪುಕೆರೆ ಗ್ರಾಮದಲ್ಲಿ ಪ್ರಸಿದ್ಧವಾಗಿವೆ. ಗ್ರಂಥಾಲಯಕ್ಕೆ ಬರುವವರಿಗೆ ಕನಿಷ್ಠ ಕುಡಿಯುವ ನೀರಿನ ಸೌಕರ್ಯವಿಲ್ಲ. ಶೌಚಾಲಯವಿಲ್ಲ. ಕಿರಿದಾದ ಸ್ಥಳದಲ್ಲಿ ಗ್ರಂಥಾಲಯ ಇರುವುದರಿಂದ ಓದಲು ಕಿರಿಕಿರಿಯಾಗುತ್ತಿದೆ ಎನ್ನುತ್ತಾರೆ ಓದುಗರು.
ನಾಮಫಲಕವಿಲ್ಲ: ಇಲ್ಲಿ ಗ್ರಂಥಾಲಯವಿದೆ ಎಂದು ತಿಳಿಸುವ ಕನಿಷ್ಠ ನಾಮಫಲಕವೂ ಇಲ್ಲ. ಇಲ್ಲಿ 164 ಮಂದಿ ಸದಸ್ಯರು ನೊಂದಾಯಿಸಿಕೊಂಡಿದ್ದು, ನಿತ್ಯ ಸುಮಾರು 500ಕ್ಕೂ ಹೆಚ್ಚು ಮಂದಿ ಗ್ರಂಥಾಯಲಕ್ಕೆ ಭೇಟಿ ನೀಡುತ್ತಾರೆ. 3 ದಿನಪತ್ರಿಕೆಗಳು ಮಾತ್ರ ಬರುತ್ತಿದ್ದು, ಇದಕ್ಕೆ ಸರ್ಕಾರದಿಂದ ತಿಂಗಳಿಗೆ 400 ರೂ. ಮಾತ್ರ ಅನುದಾನ. ವಾರಪತ್ರಿಕೆ, ಮಾಸಿಕ ಪತ್ರಿಕೆಗಳು ಲಭ್ಯವಿಲ್ಲ.
3 ಸಾವಿರಕ್ಕೂ ಹೆಚ್ಚು ಪುಸ್ತಕ ಸಂಗ್ರಹ: 2004ರಲ್ಲಿ ಪ್ರಾರಂಭವಾದ ಈ ಗ್ರಂಥಾಲಯದಲ್ಲಿ ಸುಮಾರು ಒಂದು ಸಾವಿರ ಪುಸ್ತಕಗಳಿದ್ದವು. ನಂತರದಲ್ಲಿ ಇಲಾಖೆಯಿಂದ ಆಗೊಮ್ಮೆ-ಈಗೊಮ್ಮೆ ಬರುವ ಪುಸ್ತಕಗಳು ಸೇರಿ 3 ಸಾವಿರಕ್ಕೂ ಹೆಚ್ಚು ಪುಸ್ತಕ ಸಂಗ್ರಹವಿದೆ. ಅವುಗಳನ್ನು ಎಲ್ಲಿಡಬೇಕು? ಎಂಬುದೇ ಸಿಬ್ಬಂದಿಗೆ ಸವಾಲಾಗಿದೆ. ಗ್ರಂಥಾಲಯವನ್ನು ಆಧುನೀಕರಣ ಮತ್ತು ಡಿಜಿಟಲೀಕರಣಗೊಳಿಸುವ ಮಾತು ದೂರ. ಹಳೆಯ ಕಾಲದ ಮಾದರಿಯಲ್ಲಿ ಇರುವ ಪುಸ್ತಕಗಳನ್ನು ಓದುಗರಿಗೆ ನೀಡಲಾಗುತ್ತಿದೆ.
ಸಾಹಿತಿ ಅಳಿದರೂ ಸಾಹಿತ್ಯ ಉಳಿಯುವುದು. ಗ್ರಂಥಾಲಯಗಳೇ ಜ್ಞಾನಾರ್ಜನೆ ಸಾಗರ. ಓದುಗರಿಲ್ಲದೇ ಲೇಖಕರು ಇರಲು ಅಸಾಧ್ಯ. ಜೀವನ ಕಟ್ಟುವಲ್ಲಿ ಗ್ರಂಥಾಲಯ ಅವಶ್ಯ. ಬದುಕು ಕಟ್ಟಲು ಅನೇಕ ಕಾದಂಬರಿ ಓದಬೇಕು. ಅದಕ್ಕಾಗಿ ಗ್ರಂಥಾಲಯ ಅಭಿವೃದ್ಧಿ ಅನಿವಾರ್ಯವಾಗಿದೆ.– ಸೋಮಣ್ಣ ಹರ್ಲಾಪುರ, ಹಿರಿಯ ಓದುಗ
-ಸಿಕಂದರ ಅಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.