ಧರ್ಮದ ಹಾದಿಯಿಂದ ಬದುಕು ಹಸನು-ಜಗದ್ಗುರು ಶಿವಾಚಾರ್ಯರು
Team Udayavani, Feb 6, 2024, 4:47 PM IST
ಉದಯವಾಣಿ ಸಮಾಚಾರ
ಬಂಕಾಪುರ: ಮನುಷ್ಯನ ನಡೆ, ನುಡಿ ಶುದ್ಧವಾಗಿದ್ದಾಗ, ಅಧ್ಯಾತ್ಮವನ್ನು ಮೈಗೂಡಿಸಿಕೊಂಡು ಧರ್ಮದ ದಾರಿಯಲ್ಲಿ ನಡೆಯುವವನ ಬದುಕು ಹಸನಾಗಲು ಸಾಧ್ಯವಿದೆ ಎಂದು ರಂಭಾಪುರಿ ಪೀಠದ ಜಗದ್ಗುರು ಡಾ| ವೀರಸೋಮೇಶ್ವರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಅರಳೆಲೆಮಠದ ಲಿಂ. ರುದ್ರಮುನಿ ಶಿವಾಚಾರ್ಯರ 50ನೇ ಸುವರ್ಣ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಧರ್ಮ ಬೋಧನೆ ಮಾಡಿದ ಶ್ರೀಗಳು, ಮನುಷ್ಯ ಭಕ್ತಿಯ ಮಾರ್ಗ ಕಂಡುಕೊಂಡು, ಧರ್ಮದ ದಾರಿ, ಶಾಸ್ತ್ರದ ನೆರಳಿನಲ್ಲಿ ನಡೆದಾಗ ಮಾತ್ರ ಎಲ್ಲ ವೈಭೋಗಗಳು ಅರಸಿ ಬರಲಿವೆ. ಇತಿಹಾಸ ಈ ಹಿಂದೆ ಸುಖವಿತ್ತು ಎಂದು ಹೇಳಿದರೆ, ವಿಜ್ಞಾನ ಮುಂದೆ ಸುಖವಿದೆ ಎಂದು ಹೇಳುತ್ತದೆ. ಧರ್ಮ, ಸತ್ಯ, ಪ್ರಾಮಾಣಿಕತೆಯಿಂದ ನಡೆಯುವಾತ ನಿತ್ಯ, ನಿರಂತರ ಸುಖವಾಗಿರಲು ಸಾಧ್ಯ. ಆ ನಿಟ್ಟಿನಲ್ಲಿ ಸಂತ, ಶರಣ, ಮಠಾಧೀಶರ ಹಿತೋಪದೇಶವನ್ನು ಮೈಗೂಡಿಸಿಕೋಳ್ಳುವುದು ಮುಖ್ಯವಾಗಿದೆ ಎಂದು ಹೇಳಿದರು.
ಆನಂದಯ್ಯ ಗಡ್ಡದದೇವರಮಠ ಮಾತನಾಡಿ, ಸಮಾಜದ ಸವಾಂಗೀಣ ಅಭಿವೃದ್ಧಿಗಾಗಿ ರಾಜಕಾರಣಿಗಳ ನಡೆ ದಿಟ್ಟತನದಿಂದ ಕೂಡಿದಾಗ ಸಮಾಜ ಸುಧಾರಣೆಯಾಗಲು ಸಾಧ್ಯವಿದೆ. ಕೃಷಿ ಕಾಯಕ ಯೋಗಿಗಳಾಗಿ, ಲಿಂಗೈಕ್ಯ ರುದ್ರಮುನೀಶ್ವರರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಭಕ್ತ ಸಮೂಹವನ್ನು ಕೊಂಡೊಯ್ಯುತ್ತಿರುವ ಅರಳೆಲೆಮಠದ ರೇವಣಸಿದ್ದೇಶ್ವರ ಶ್ರೀಗಳವರ
ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಅರಳೆಲೆಮಠದ ಅಭಿವೃದ್ಧಿಯ ಪರ್ವ ಮಠದ ಪೀಠಾಧಿಪತಿ ರೇವಣಸಿದ್ದೇಶ್ವರ ಶ್ರೀಗಳಿಂದ ನಿರಂತರವಾಗಿ ಮುಂದುವರಿದುಕೊಂಡು ಬರುತ್ತಿದೆ ಎಂದು ಹೇಳಿದರು.
ಲೇಖಕ ವೀರೇಶ ಪುರಾಣಿಕಮಠ ರಚಿಸಿದ “ಮನದ ಮನೆಯ ಹೂದಾನಿ’ ಪುಸ್ತಕ ಬಿಡುಗಡೆಗೊಳಿಸಲಾಯಿತು. ಅರಳೆಲೆಮಠದ ಶ್ರೀ
ರೇವಣಸಿದ್ದೇಶ್ವರ ಸ್ವಾಮೀಜಿ ಸಭೆಯ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.
ಮುಕ್ತಿಮಂದಿದ ವಿಮಲ ರೇಣುಕ ವೀರಮುಕ್ತಿಮುನಿ ಸ್ವಾಮೀಜಿ, ಸವಣೂರಿನ ಚನ್ನಬಸವ ಸ್ವಾಮೀಜಿ, ಸೂಡಿ ಬಸವೇಶ್ವರ ಸ್ವಾಮೀಜಿ, ಮಳಲಿಮಠದ ಡಾ| ನಾಗಭೂ‚ಣ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಶಿವಯೋಗಿ ಸ್ವಾಮೀಜಿ, ಸಂಗನಬಸವ ಸ್ವಾಮೀಜಿ, ಹಾವೇರಿ ನಗರಸಭಾಧ್ಯಕ್ಷ ಸಂಜೀವ ನೀರಲಗಿ, ಡಾ| ಆರ್.ಎಸ್. ಅರಳೆಲೆಮಠ, ಯಾಸೀರಖಾನ್ ಪಠಾಣ, ವಿಶ್ವನಾಥ ಹಿರೇಗೌಡ್ರ, ಲೇಖಕ ವೀರೇಶ ಪುರಾಣಿಕಮಠ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.