ತೆರಿಗೆ ಪಾವತಿಸದ ಕಂಪನಿಗೆ ಬೀಗ
Team Udayavani, Oct 19, 2019, 2:42 PM IST
ಮುಳಗುಂದ: ಸಮೀಪದ ಸೊರಟೂರ, ಯಲಿಶಿರೂರ ಗ್ರಾಪಂ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಯು ಗ್ರಾಪಂಗೆ ತುಂಬಬೇಕಾದ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಉತ್ಪಾದನಾ ಘಟಕಗಳ ಪ್ರಮುಖ ಕಚೇರಿಗಳಿಗೆ ಬೀಗ ಜಡಿದು ವಿದ್ಯತ್ ಉತ್ಪಾದನೆ ಸ್ಥಗಿತಗೊಳಿಸಲಾಯಿತು.
ಸೊರಟೂರ ಹಾಗೂ ಯಲಿಶಿರೂರ ಗ್ರಾಪಂ ವ್ಯಾಪ್ತಿಗಳಲ್ಲಿ ಒಟ್ಟು 18 ವಿದ್ಯುತ್ ಉತ್ಪಾದನಾ ಘಟಕಗಳನ್ನು ಬೋರೋಕೊ ಕಂಪನಿ ಸ್ಥಾಪಿಸಿದ್ದು, 2015ರಿಂದ 2018ರ ವರೆಗೆ ಒಟ್ಟು 33.75 ಲಕ್ಷ ರೂ.ಗಳ ತೆರಿಗೆ ಪಾವತಿಸಬೇಕಾಗಿದ್ದು, ಈವರೆಗೂ ತೆರಿಗೆ ಪಾವತಿಯಾಗಿಲ್ಲ. ಈ ಕುರಿತು ಹಲವು ಬಾರಿ ನೋಟಿಸ್ ಮೂಲಕ ತಿಳಿಸಿ ಸದ್ಯ ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅಧಿನಿಯಮದ ಕಾನೂನಿನ ಪ್ರಕಾರ ಇವರೆಗೂ ತುಂಬಬೇಕಾದ ತೆರಿಗೆ ಶೇ. 10 ಬಡ್ಡಿ ಸಮೇತ ತುಂಬಲು ತಾಪಂ ಇಒ ಎಚ್.ಎಸ್. ಜಿನಗಿ ಕಂಪನಿಗೆ ನೋಟಿಸ್ ಮೂಲಕ ತಿಳಿಸಿದರು.
ಇವರೆಗೂ ತೆರಿಗೆ ಪಾವತಿಸದ ಕಾರಣ ಇಂದು ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಸೊರಟೂರ ಗ್ರಾಮದ ಅತ್ತಿಕಟ್ಟಿ ರಸ್ತೆ ಉತ್ಪಾದನಾ ಘಟಕ ಹಾಗೂ ಯಲಿಶಿರೂರ ಮುಳಗುಂದ ರಸ್ತೆಯಲ್ಲಿರುವ ಘಟಕಕ್ಕೆ ಬೀಗ ಜಡಿಯಲಾಯಿತು. ತಾಪಂ ಇಒ ಎಚ್.ಎಸ್. ಜಿನಗಿ, ಗ್ರಾಪಂ ಅಧ್ಯಕ್ಷೆ ಶಾರದಾ ಜಂಗವಾಡ, ಸದಸ್ಯರಾದ ಮರಿಯಪ್ಪ ಸಣ್ಣತಂಗಿಯವರ, ಬಸವರಾಜ ಕುರಿ, ಸಿಪಿಐ ರವಿ ಕಪ್ಪತ್ತನವರ,ಹೆಸ್ಕಾಂ ಎಇಇ ಕುರಿ, ಪಿಎಸ್‌ಐ ಶಿವರಾಜ ಧನಿಗೋಳ, ಪಿಡಿಒ ಮಾಲತೇಶ ಮೇವುಂಡಿ, ಗೋವಿಂದರಡ್ಡಿ ಕಿಲಬನವರ, ಎಸ್. ಎಸ್. ತೊಂಡಿಹಾಳ, ಇಸ್ಮಾಯಿಲ್ ಅರಗಂಜಿ, ರಾಜು ಕಲ್ಲಗುಡಿ, ಪರಶುರಾಮ ಹರಿಜನ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.