ಲಕ್ಷ್ಮೇಶ್ವರದಲ್ಲಿ ಭಾರೀ ಗಾಳಿ-ಮಳೆಗೆ ನೆಲಕಚ್ಚಿದ ತೋಟಗಾರಿಕೆ ಬೆಳೆ-ಅಪಾರ ನಷ್ಟ
ತೋಟಗಾರಿಕಾ ಇಲಾಖೆ ಹಿರಿಯ ಅಧಿಕಾರಿಗಳಿಂದ ಹಾನಿಗೀಡಾದ ತರಕಾರಿ ಬೆಳೆ ಪರಿಶೀಲನೆ
Team Udayavani, May 8, 2022, 2:41 PM IST
ಲಕ್ಷ್ಮೇಶ್ವರ: ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ದಿನವೂ ಗುಡುಗು, ಸಿಡಿಲು, ಬಿರುಗಾಳಿಯಿಂದ ಕೂಡಿದ ಆಲಿಕಲ್ಲು ಸಹಿತ ಮಳೆಯಾಗುತ್ತಿರುವುದರಿಂದ ಅಪಾರ ಪ್ರಮಾಣದ ತೋಟಗಾರಿಕೆ ಬೆಳೆಗಳು ನೆಲಕಚ್ಚಿ, ಅಪಾರ ಹಾನಿಯನ್ನುಂಟು ಮಾಡಿದೆ.
ತಾಲೂಕಿನಾದ್ಯಂತ 20ಕ್ಕೂ ಹೆಚ್ಚು ಮನೆಗಳು ಭಾಗಶಃ ಬಿದ್ದಿದ್ದು, ಅಕಾಲಿಕ ಮಳೆ ಅನೇಕ ಆವಾಂತರಗಳನ್ನೇ ಸೃಷ್ಟಿಸಿ ಜನರಲ್ಲಿ ಭೀತಿಯುಂಟು ಮಾಡುತ್ತಿದೆ. ತಾಲೂಕಿನಲ್ಲಿ ಅಂದಾಜು 7 ಸಾವಿರ ಹೆಕ್ಟೇರ್ ನೀರಾವರಿ ಕ್ಷೇತ್ರವಿದ್ದು, ಮುಖ್ಯವಾಗಿ ಹೂವು, ಹಣ್ಣು, ತರಕಾರಿ, ತೆಂಗು, ಮಾವು, ಬಾಳೆ, ಕಬ್ಬು, ಪಪ್ಪಾಯಿ ಬೆಳೆಯನ್ನು ಬೆಳೆಯಲಾಗಿದೆ.
ಬಿರುಸಾದ ಗಾಳಿಯೊಂದಿಗೆ ಆಲಿಕಲ್ಲು ಸಹಿತ ಮಳೆಗೆ ತೋಟಗಾರಿಕಾ ಬೆಳೆಗಳು ನಲೆಕಚ್ಚಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತರ ಝಂಗಾ ಬಲವೇ ಉಡುಗಿದಂತಾಗಿದೆ. ಪಟ್ಟಣದ ಪ್ರಗತಿಪರ ರೈತ ಚನ್ನಪ್ಪ ಜಗಲಿ ಅವರ ಮುನಿಯನ ತಾಂಡಾ ಬಳಿಯ ತೋಟದಲ್ಲಿ ನೂರಾರು ತೆಂಗು, ಸಾಗವಾನಿ ಇತರೇ ಮರಗಳು ಧರೆಗುರುಳಿವೆ.
ಶುಕ್ರವಾರ ಸಂಜೆ ಬೀಸಿದ ಗಾಳಿ ಮಳೆಗೆ ತಾಲೂಕಿನ ಬಾಲೆಹೊಸೂರ, ಶಿಗ್ಲಿ, ಗುಲಗಂಜಿಕೊಪ್ಪ, ಆದ್ರಳ್ಳಿ, ಸೂರಣಗಿ, ಉಂಡೇನಹಳ್ಳಿ, ದೊಡೂxರ ಭಾಗದಲ್ಲಿನ ತೋಟಗಾರಿಕೆ ಬೆಳೆಗಳಾದ ಮಾವು, ತೆಂಗು, ಕಲ್ಲಂಗಡಿ, ಪೇರಲ, ನಿಂಬೆ, ದಾಳಿಂಬೆ, ಬದನೆ, ಟೊಮೆಟೋ, ಬೆಂಡಿ, ಸೌತೆ ಇತರೆ ತರಕಾರಿ ಬೆಳೆಗಳಿಗೆ ಹಾನಿಯಾಗಿದೆ.
ಬಾಲೇಹೊಸೂರ ಗ್ರಾಮದಲ್ಲಿ ಹನಮಂತಪ್ಪ ಕೋಣನತಂಬಗಿ ಅವರ 4 ಎಕರೆ, ಕರಿಯಪ್ಪ ಮುದಿಯಮ್ಮನವರ ಅವರ 2 ಎಕರೆ, ದತ್ತಾತ್ರೇಯ ಕಟ್ಟಿಮನಿ ಅವರ 3 ಎಕರೆ ಬಾಳೆ ಬೆಳೆ ಬಹುತೇಕ ನೆಲಕಚ್ಚಿದೆ. ಸಾವಿರಾರೂ ರೂ. ಸಾಲಸೂಲ ಮಾಡಿ ಕಷ್ಟುಪಟ್ಟು ಬೆಳೆದ 1 ವರ್ಷದ ಬೆಳೆ ಇನ್ನೇನು ಕೈಗೆ ಬರುವ ಹಂತದಲ್ಲಿ ಗೊನೆ ಸಹಿತ ಬಾಳೆ ಬೆಳೆ ನೆಲಕಚ್ಚಿದೆ. ಇದರಲ್ಲಿನ ಅಂತರ್ ಬೆಳೆಯೂ ಹಾಳಾಗಿದೆ. ಗ್ರಾಮದ ಹನುಮಪ್ಪ ಸಾಲಿ ಅವರ 2 ಎಕರೆ, ಶಿವಾನಂದ ಜಾಲವಾಡಗಿ ಮತ್ತು ಹನುಮಪ್ಪ ತಿರಕಣ್ಣವರ ಅವರ ತಲಾ ಎಕರೆಯಲ್ಲಿನ ಮಾವು ನೆಲಕ್ಕುದುರಿವೆ.
ಇನ್ನು ಗುಲಗಂಜಿಕೊಪ್ಪದ ಬಸನಗೌಡ ಪಾಟೀಲ, ದುಂಡವ್ವ ರಾಮಗೇರಿ, ರಾಮಣ್ಣ ರಾಮಗೇರಿ ಅವರು ಬೆಳೆದ ತರಕಾರಿ ಬೆಳೆ ಹಾಳಾಗಿದೆ. ಇದು ಕೇವಲ ಒಬ್ಬಿಬ್ಬ ರೈತರ ಕತೆಯಾಗಿರದೇ ತಾಲೂಕಿನಾದ್ಯಂತ ತೋಟಗಾರಿಕೆ ಬೆಳೆಗಾರರು ಹಾನಿ ಅನುಭವಿಸಿದ್ದಾರೆ. ಇನ್ನು ತಾಲೂಕಿನ ಖುಷ್ಕಿ ಜಮೀನಿನಲ್ಲಿ ಅಲ್ಲಲ್ಲಿ ಬದುವು, ಒಡ್ಡು ಕಿತ್ತು ಜಮೀನು ಹಾಳಾಗಿವೆ. ಮುಂಗಾರಿನ ಕೃಷಿಗೆ ಜಮೀನು ಹದ ಮಾಡಲಾಗದೇ ರೈತರು ಚಿಂತೆಗೀಡಾಗಿದ್ದಾರೆ.
ಶನಿವಾರ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಅವರು ಗುಲಗಂಜಿಕೊಪ್ಪ ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದರು. ಈ ವೇಳೆ ಮಾಹಿತಿ ನೀಡಿದ ಅವರು, ಅಕಾಲಿನ ಮಳೆ-ಗಾಳಿಯಿಂದ ತಾಲೂಕಿನ ವಿವಿಧೆಡೆ ಬೆಳೆ ಹಾನಿಯಾಗಿವೆ. ಹಾನಿಗೀಡಾದ ತೋಟಗಾರಿಕಾ ಬೆಳೆಗಳನ್ನು ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಖುದ್ದಾಗಿ ಪರಿಶೀಲಿಸಿ ಹಾನಿ ಅಂದಾಜಿನ ವರದಿ ಸಲ್ಲಿಸಲಾಗುವುದು. ಎನ್‌ಡಿಆರ್‌ಎಫ್ ವಿಧಾನದಡಿ ಪರಿಹಾರ ಕಲ್ಪಿಸಲಾಗುವುದು ಎಂದರು.
ತಾಲೂಕಿನಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ಗಾಳಿ, ಆಲಿಕಲ್ಲು ಸಹಿತ ಮಳೆಯಿಂದ ತೋಟಗಾರಿಕಾ ಬೆಳೆಗಳು ಹಾನಿಗೀಡಾಗಿವೆ. 20ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಈ ಬಗ್ಗೆ ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಸಿಬ್ಬಂದಿಯಿಂದ ನಿಖರ ಮಾಹಿತಿ ಪಡೆದು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ವರದಿ ಸಲ್ಲಿಸುವ ಮೂಲಕ ಹಾನಿಗೆ ಪರಿಹಾರ ಕಲ್ಪಿಸುವ ಕಾರ್ಯ ಮಾಡುವೆ. –ಪರಶುರಾಮ ಸತ್ತಿಗೇರಿ, ತಹಶೀಲ್ದಾರ್, ಲಕ್ಷ್ಮೇಶ್ವರ
ಕಳೆದ 2 ವರ್ಷ ಕೋವಿಡ್‌ನಿಂದ ತೋಟಗಾರಿಕೆ ಬೆಳೆಗಾರರು ಸಾಕಷ್ಟು ತೊಂದರೆ, ನಷ್ಟ ಅನುಭವಿಸಿದ್ದಾರೆ. ಸಮೃದ್ಧವಾಗಿದ್ದ ಬೆಳೆ ಅಕಾಲಿಕ ಮಳೆ-ಗಾಳಿಗೆ ಹಾನಿಗೀಡಾಗಿ ರೈತರ ನೆಮ್ಮದಿ ಕಸಿದಿದೆ. ಅಕಾಲಿಕ ಮಳೆ-ಗಾಳಿಯಿಂದ ಬೆಳೆಗಳು ಹಾಳಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಆದ್ದರಿಂದ, ಅಧಿಕಾರಿಗಳು, ಜನಪ್ರತಿನಿಧಿಗಳು ರೈತರ ಕಷ್ಟ ಅರಿತು ಬೆಳೆ ಹಾನಿ ಪರಿಹಾರ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. -ಚನ್ನಪ್ಪ ಜಗಲಿ, ಹನುಮಂತಪ್ಪ ಕೋಣನತಂಬಗಿ, ತೋಟಗಾರಿಕಾ ಬೆಳೆಗಾರರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.