ಮದರಸಾಗಳು ಪವಿತ್ರ ಜ್ಞಾನ ಕೇಂದ್ರ: ಅಶ್ರಫಿ

Team Udayavani, May 5, 2019, 2:37 PM IST

gad-3

ಗಜೇಂದ್ರಗಡ: ಮದರಸಾಗಳು ಇಸ್ಲಾಂ ಬೋಧನೆ, ಪವಿತ್ರ ಕುರಾನ್‌ ಕಲಿಕೆ, ಪ್ರವಾದಿಗಳ ಜೀವನ ಮಾಹಿತಿ ನೀಡುವ ಪವಿತ್ರ ಜ್ಞಾನ ಕೇಂದ್ರಗಳಾಗಿವೆ. ಈ ನಿಟ್ಟಿನಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಮದರಸಾಗಳಿಗೆ ಮಕ್ಕಳನ್ನು ಸೇರ್ಪಡೆಗೊಳಿಸುವ ಮೂಲಕ ಸೇವಾ ಮನೋಭಾವನೆ ಒಡಮೂಡುವಂತೆ ಮಾಡಲು ಮುಂದಾಗಬೇಕು ಎಂದು ಹುಬ್ಬಳ್ಳಿಯ ಹಜರತ್‌ ಮಹಮ್ಮದ ಇಂಬ್ರಾನ್‌ ಅಶ್ರಫಿ ಹೇಳಿದರು.

ಪಟ್ಟಣದ ಅಂಜುಮನ್‌ ಶಾದಿಮಹಲ್ನಲ್ಲಿ ಗೌಸೆ ಆಜಂ ಎಜ್ಯೋಕೇಶನ್‌ ಆ್ಯಡ್‌ ಚಾರಿಟೇಬಲ್ ಟ್ರಸ್ಟ್‌ನ ದಾರುಲ್ ಉಲುಮ್‌ (ಅರಬ್ಬಿ ಮದರಸಾ ವಸತಿ ಶಾಲೆ) ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮದರಸಾಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಿವೆ. ಇಲ್ಲಿ ಆಡಂಬರಕ್ಕೆ ಅವಕಾಶವಿಲ್ಲ. ಧರ್ಮ ಬೋಧನೆಗೆ ಅದರದ್ದೆ ಆದ ರೀತಿ ನಿಯಮಗಳಿವೆ. ಸುಳ್ಳು ಹೇಳಬಾರದು. ಇತರರನ್ನು ದೂಷಿಸಬಾರದು. ನಾಲಗೆಯನ್ನು ಹಿಡಿತದಲ್ಲಿರಿಸಿಕೊಳ್ಳಬೇಕೆಂಬ ಪ್ರವಾದಿಗಳ ಮಾತನ್ನ ಇಲ್ಲಿ ಕಲಿಸಲಾಗುವುದು. ಮದರಸಾ ಬಗ್ಗೆ ಟೀಕಿಸುವವರು ಇತಿಹಾಸ ಅರಿತು ಮಾತನಾಡಬೇಕು. ಇಸ್ಲಾಂ ಬಗ್ಗೆ ಹಲವಾರು ಜನರು ತಪ್ಪು ಕಲ್ಪನೆ ಹೊಂದಿದ್ದಾರೆ. ಆದರೆ ಇಸ್ಲಾಂ ಸರ್ವಧರ್ಮ ಸಮನ್ವಯತೆ ಸಾರುವ ಬಹುದೊಡ್ಡ ಧರ್ಮವಾಗಿದೆ. ಶಾಂತಿ, ದಾನ, ಧರ್ಮದಂತಹ ಸಂದೇಶ ಸಾರುವ ಇಸ್ಲಾಂ ಬಗ್ಗೆ ಜನರಲ್ಲಿರುವ ಕಲ್ಪನೆಗಳನ್ನು ತೊಡೆದು ಹಾಕಲು ಮದರಸಾಗಳು ಸಹಕಾರಿಯಾಗಿವೆ ಎಂದರು.

ಜಾಮೀಯಾ ಮಸೀದಿಯ ಹಜರತ್‌ ಅಲ್ಲಮಾ ಮೌಲಾನ ಖುಷ್ತರ ನುರಾನಿ ಮಾತನಾಡಿ, ಪುಣ್ಯ ಹಾಗೂ ದೇವ ಭಯದ ಕಾರ್ಯದಲ್ಲಿ ಎಲ್ಲರ ಜೊತೆ ಒಗ್ಗೂಡಿ. ಆದರೆ ಪಾಪ ಹಾಗೂ ಅತಿರೇಕದ ಕಾರ್ಯಗಳಲ್ಲಿ ಯಾರೊಂದಿಗೂ ಸಹಕರಿಸಬೇಡಿ. ಇಸ್ಲಾಮಿನ ತತ್ವಗಳ ಪಾಠ ಕಲಿತವರು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಮದರಸಾಗಳು ಭಾವೈಕ್ಯತೆ ಮತ್ತು ಸಾಮರಸ್ಯದ ಪಾಠ ಕೊಡುವ ಕೇಂದ್ರಗಳಾಗಿವೆ. ಮದರಸಾಗಳೆಂದರೆ ಕೇವಲ ಧರ್ಮದ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳಲ್ಲ. ಬದಲಾಗಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡುವ ಶಿಕ್ಷಣ ಕೇಂದ್ರವಾಗಿವೆ. ಮದರಸಾಗಳು ನಿನ್ನೆ-ಮೊನ್ನೆ ಜನ್ಮ ತಾಳಿದ್ದಲ್ಲ. ಸಾವಿರಾರು ವರ್ಷಗಳ ಇತಿಹಾಸ ಹೊಂದಿವೆ ಎಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಖುರಾನ್‌ ಹದಿಯಾ ಕಾರ್ಯಕ್ರಮ ಜರುಗಿತು. ಮೌಲಾನಾ ಮಹಮ್ಮದ ಯಾಸೀನ್‌ ಅಶ್ರಫಿ, ಮೌಲಾನಾ ಖಲೀಲ ಖಾಜಿ, ಮೌಲಾನಾ ಮಹಮ್ಮದ ರಫೀಕ್‌ ಅಶ್ರಫಿ, ಹಾಫಿಜ್‌ ತೌಸೀಫ್‌ ರಜಾ, ಹಾಜಿ ಪಿ.ಕೆ ಬಾಗವಾನ, ರಾಜು ಆರಗಿದ್ದಿ, ಮೆಹಬೂಬ ಮುದಗಲ್ಲ, ಮಹಮ್ಮದಯಾಸೀನ ಮಾರನಬಸರಿ, ಆಸೀಫ್‌ ತಟಗಾರ, ಬಾಷೇಸಾಬ ಮಕಾನದಾರ, ರಿಯಾಜ್‌ ಗಾಡಿವಾಲೆ, ಮಿರ್ಜಾಗಾಲಿಬ್‌ ತಾಳಿಕೋಟಿ, ಸಲೀಂ ಬಾಗಲಕೋಟ, ಅಲಿ ಕಿಲ್ಲೇದಾರ, ಮಕ್ತುಮ ಅಂಗಡಿ ಇದ್ದರು.

ಟಾಪ್ ನ್ಯೂಸ್

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ

ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ

Gadag-Sp–Money

Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ

Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ವಂಚನೆಗೆ ಯತ್ನ

Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ವಂಚನೆಗೆ ಯತ್ನ

3-gadaga

Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು

1-gadag

Gadag; ಮೂವರು ಮಕ್ಕಳನ್ನು ನದಿಗೆ ಎಸೆದು ತಾನೂ ಹಾರಿದ ವ್ಯಕ್ತಿ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

cOurt

Putturu: ಬಾಲಕಿಯೊಂದಿಗೆ ಅನುಚಿತ ವರ್ತನೆ: ಆರೋಪಿಗೆ ಶಿಕ್ಷೆ, ದಂಡ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.